ADVERTISEMENT

ಬೆಂಗಳೂರು ನಗರ ವಿಶ್ವವಿದ್ಯಾಲಯ ಘಟಿಕೋತ್ಸವ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2026, 16:37 IST
Last Updated 3 ಮಾರ್ಚ್ 2026, 16:37 IST
<div class="paragraphs"><p>ಬೆಂಗಳೂರು ನಗರ ವಿಶ್ವವಿದ್ಯಾಲಯ</p></div>

ಬೆಂಗಳೂರು ನಗರ ವಿಶ್ವವಿದ್ಯಾಲಯ

   

ಬೆಂಗಳೂರು:  ಡಾ. ಮನಮೋಹನ್‌ಸಿಂಗ್‌ ಬೆಂಗಳೂರು ನಗರ ವಿಶ್ವವಿದ್ಯಾಲಯವು ಏಪ್ರಿಲ್‌ ಮೊದಲ ಅಥವಾ ಎರಡನೇ ವಾರದಲ್ಲಿ 5ನೇ ಘಟಿಕೋತ್ಸವವನ್ನು ಹಮ್ಮಿಕೊಂಡಿದ್ದು, ಪದವಿ ಪ್ರದಾನಕ್ಕೆ ಅರ್ಜಿ ಆಹ್ವಾನಿಸಿದೆ.

2024–25ನೇ ಸಾಲಿನಲ್ಲಿ ಉತ್ತೀರ್ಣರಾದವರು, ಈ ಹಿಂದಿನ ಘಟಿಕೋತ್ಸವಲ್ಲಿ ಪದವಿ ಪ್ರಮಾಣಪತ್ರ ಪಡೆಯದವರು ಅರ್ಜಿ ಸಲ್ಲಿಸಬಹುದು.  ದಂಡ ಶುಲ್ಕವಿಲ್ಲದೇ ಸ್ನಾತಕೋತ್ತರ ವಿಭಾಗ ಹಾಗೂ ಕಾಲೇಜುಗಳ ಅಭ್ಯರ್ಥಿಗಳಲ್ಲಿ ಅರ್ಜಿ ಸಲ್ಲಿಸಲು ಮಾ.9 ಕಡೆಯ ದಿನ. ₹100 ಶುಲ್ಕದೊಂದಿಗೆ ಮಾ.13ರೊಳಗೆ ಸಲ್ಲಿಸಬೇಕು ಎಂದು ಮೌಲ್ಯಮಾಪನ ಕುಲಸಚಿವರು ತಿಳಿಸಿದ್ದಾರೆ. ಮಾಹಿತಿಗೆ https://www.bcu.ac.in

ADVERTISEMENT

ಇಂಡಿಯನ್ ಸಿಲ್ಕ್ ಎಕ್ಸ್‌ಪೊ ಆರಂಭ

‌ಬೆಂಗಳೂರು: ಇಂಡಿಯನ್ ಸಿಲ್ಕ್ ಗ್ಯಾಲರಿ ಎಕ್ಸ್‌ಪೊ ಕುಮಾರಕೃಪಾ ರಸ್ತೆಯ ಕರ್ನಾಟಕ ಚಿತ್ರಕಲಾ ಪರಿಷತ್‌ನಲ್ಲಿ ಮಂಗಳವಾರ ಆರಂಭಗೊಂಡಿದೆ.

ಮಾರ್ಚ್‌ 8ರವರೆಗೆ ಬೆಳಿಗ್ಗೆ 10ರಿಂದ ರಾತ್ರಿ 8ರವರೆಗೆ ಎಕ್ಸ್‌ಪೊ ಇರಲಿದೆ. ಯುಗಾದಿ ಹಬ್ಬ ಮತ್ತು ವಿವಾಹಗಳ ಸಂಭ್ರಮಾಚರಣೆ ಭಾಗವಾಗಿ ಕೈಮಗ್ಗ ನೇಕಾರರು ನೇಯ್ದಿರುವ ವಿಶೇಷ ರೇಷ್ಮೆ ಉತ್ಪನ್ನಗಳು ಈ ಪ್ರದರ್ಶನದಲ್ಲಿ ಸಿಗಲಿವೆ ಎಂದು ಆಯೋಜಕರು ತಿಳಿಸಿದ್ದಾರೆ.

ಕೈಮಗ್ಗ ನೇಕಾರರ ಉತ್ಪನ್ನಗಳು ಜನಪ್ರಿಯವಾಗಬೇಕು, ಮಹಿಳೆಯರು ಕೈಮಗ್ಗದ ಉಡುಪುಗಳನ್ನು ಧರಿಸಬೇಕು ಮತ್ತು ಭವಿಷ್ಯದ ಪೀಳಿಗೆಯೂ ಇಂತಹ ಉಡುಪುಗಳನ್ನು ಧರಿಸುವಂತಾಗಬೇಕು ಎನ್ನುವುದು ಆಯೋಜನೆ ಉದ್ದೇಶ. ರೇಷ್ಮೆ ಉತ್ಪನ್ನಗಳು ಭಾರತೀಯ ಸಂಸ್ಕೃತಿಯ ಆಕರ್ಷಣೆ ಎನ್ನಿಸಿವೆ. ದೇಶದ ವಿವಿಧ ನಗರಗಳ ಕುಶಲಕರ್ಮಿಗಳು ತಯಾರಿಸಿದ ಕೈಮಗ್ಗ ಸೀರೆಗಳನ್ನು ಇಲ್ಲಿ ಪ್ರಸ್ತುತ ಪಡಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.