ADVERTISEMENT

Bengaluru Crime: ಹಗ್ಗದಿಂದ ಕುತ್ತಿಗೆ ಬಿಗಿದು ಪತ್ನಿ ಕೊಲೆ

ನಿತ್ಯ ಕುಡಿದು ಬಂದು ಗಲಾಟೆ ಮಾಡುತ್ತಿದ್ದ ಪತಿ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2025, 15:50 IST
Last Updated 29 ಆಗಸ್ಟ್ 2025, 15:50 IST
ರವೀಂದರ್ ಸಿಂಗ್, ಪೂನಂ ಸಿಂಗ್
ರವೀಂದರ್ ಸಿಂಗ್, ಪೂನಂ ಸಿಂಗ್   

ಬೆಂಗಳೂರು: ದಂಪತಿ ನಡುವೆ ನಡೆದ ಜಗಳ ಪತ್ನಿಯ ಕೊಲೆಯಲ್ಲಿ ಅಂತ್ಯವಾಗಿದೆ. ಮದ್ಯದ ಅಮಲಿನಲ್ಲಿ ಹಗ್ಗದಿಂದ ಪತ್ನಿಯ ಕತ್ತು ಬಿಗಿದು ಕೊಲೆ ಮಾಡಿದ ಪತಿಯನ್ನು ವರ್ತೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.

ಉತ್ತರ ಪ್ರದೇಶ ಮೂಲದ ದೊಮ್ಮಸಂದ್ರದ ನಿವಾಸಿ ರವೀಂದ್ರ ಸಿಂಗ್ (29) ಬಂಧಿತ ಆರೋಪಿ.

2020ರಲ್ಲಿ ಪೂನಂ ಸಿಂಗ್ ಮತ್ತು ರವೀಂದರ್ ಸಿಂಗ್ ವಿವಾಹವಾಗಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಮೂರು ವರ್ಷಗಳ ಹಿಂದೆ ನಗರಕ್ಕೆ ಬಂದ ದಂಪತಿ, ದೊಮ್ಮಸಂದ್ರದ ಹಮ್ಮಿಂಗ್ ಸ್ಪೋರ್ಟ್ಸ್‌ ಅಕಾಡೆಮಿಯ ಹತ್ತಿರದಲ್ಲಿರುವ ಮೂರ್ತಿ ಅವರ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು.

ADVERTISEMENT

ರವೀಂದರ್ ಸಿಂಗ್, ಕಾರ್ಪೆಂಟರ್ ಕೆಲಸ ಮಾಡಿಕೊಂಡಿದ್ದ. ಆರಂಭದಲ್ಲಿ ದಂಪತಿ ಅನ್ಯೋನ್ಯವಾಗಿದ್ದರು. ಇತ್ತೀಚೆಗೆ ಇಬ್ಬರ ನಡುವೆ ಜಗಳ ನಡೆಯುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ನಿತ್ಯ ಮದ್ಯ ಸೇವಿಸಿ ಬಂದು ಪತ್ನಿ ಜೊತೆಗೆ ಜಗಳ ಮಾಡುತ್ತಿದ್ದ. ಆಗಸ್ಟ್‌ 28ರಂದು ದಂಪತಿ ನಡುವೆ ಜಗಳವಾಗಿದ್ದು, ತಾರಕಕ್ಕೇರಿದಾಗ ಜೋಕಾಲಿಗೆ ಕಟ್ಟುವ ಹಗ್ಗದಿಂದ ಪೂನಂಸಿಂಗ್ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದು, ಕೂಗಾಟ ಕೇಳಿ ನೆರೆಯವರು ಬಂದು ನೋಡಿದಾಗ ಕೊಲೆ ನಡೆದ ವಿಚಾರ ಗೊತ್ತಾಗಿದೆ.

ಮೃತಳ ಚಿಕ್ಕಪ್ಪ ಬಿಜೇಂದರ್ ಸಿಂಗ್ ನೀಡಿದ ದೂರಿನ ಮೇರೆಗೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ರವೀಂದರ್ ಸಿಂಗ್‌ನನ್ನು ವಿಚಾರಣೆ ನಡೆಸಿದಾಗ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದು, ಆರೋಪಿಯನ್ನು ಬಂಧಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.