ADVERTISEMENT

ಬೆಂಗಳೂರು: ಎರಡನೇ ಪತ್ನಿ ಕೊಂದು ಆಂಧ್ರಪ್ರದೇಶಕ್ಕೆ ಪರಾರಿಯಾಗಿದ್ದ ಪತಿ ಬಂಧನ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2025, 15:23 IST
Last Updated 10 ಸೆಪ್ಟೆಂಬರ್ 2025, 15:23 IST
<div class="paragraphs"><p>ಬಂಧನ </p></div>

ಬಂಧನ

   

ಬೆಂಗಳೂರು: ಎರಡನೇ ಪತ್ನಿಯನ್ನು ಕೊಂದು ಆಂಧ್ರಪ್ರದೇಶಕ್ಕೆ ಪರಾರಿಯಾಗಿದ್ದ ಪತಿಯನ್ನು ಯಲಹಂಕ ನ್ಯೂಟೌನ್‌ ಠಾಣೆಯ ಪೊಲೀಸರು ಬುಧವಾರ ಬಂಧಿಸಿದ್ದಾರೆ.

ಸೈದುಲ್ಲಾ ಬಂಧಿತ ಆರೋಪಿ. ಆಂಧ್ರಪ್ರದೇಶದ ರಾಜಮಂಡ್ರಿಯಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಯಿತು ಎಂದು ಪೊಲೀಸರು ಹೇಳಿದರು.

ADVERTISEMENT

‘2019ರಲ್ಲಿ ಸೈದುಲ್ಲಾ ಮೊದಲನೇ ಮದುವೆ ಆಗಿದ್ದ. ಮೊದಲನೇ ಪತ್ನಿಗೆ ವಿಷಯ ತಿಳಿಯದಂತೆ ಅಮೀನಾ ಅವರನ್ನು ಪ್ರೀತಿಸಿದ್ದ. ಅವರೊಂದಿಗೆ ಎರಡನೇ ಮದುವೆ ಆಗಿದ್ದ. ಮೊದಲನೇ ಮದುವೆ ವಿಚಾರವನ್ನು ಅಮೀನಾ ಅವರು ತಿಳಿದುಕೊಂಡಿದ್ದರು. ಈ ವಿಚಾರಕ್ಕೆ ಮನೆಯಲ್ಲಿ ನಿತ್ಯ ಗಲಾಟೆ ನಡೆಯುತ್ತಿತ್ತು. ಸೆ.2ರಂದು ಜಗಳವು ವಿಕೋಪಕ್ಕೆ ಹೋಗಿತ್ತು. ಅಮೀನಾ ಕುಟುಂಬಸ್ಥರು ಮನೆಗೆ ಬಂದು ಸಂಧಾನ ನಡೆಸಿದ್ದರು. ಮರುದಿನ ಬೆಳಿಗ್ಗೆ ಅಮೀನಾ ಅವರಿಗೆ ಮರದ ತುಂಡಿನಿಂದ ಹಲ್ಲೆ ನಡೆಸಿ, ಕೊಲೆ ಮಾಡಿ ಆರೋಪಿ ಪರಾರಿಯಾಗಿದ್ದ’ ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.