ಬೆಂಗಳೂರು ಮಳೆ
ಬೆಂಗಳೂರು: ನಗರದ ಹಲವು ಪ್ರದೇಶಗಳಲ್ಲಿ ಗುರುವಾರ ಸಂಜೆ ಭಾರಿ ಮಳೆಯಾಯಿತು.
ಗುರುವಾರ ಬೆಳಿಗ್ಗೆಯಿಂದ ಮೋಡ ಕವಿದ ವಾತಾವರಣವಿದ್ದು, ಆಗಾಗ ತುಂತುರು ಮಳೆಯಾಗುತ್ತಿತ್ತು. ಸಂಜೆ ವೇಳಗೆ ಗುಡುಗು ಸಹಿತ ಬಿರುಸಿನ ಮಳೆಯಾಯಿತು.
ರೂಪೇನ ಅಗ್ರಹಾರದಿಂದ ಬೊಮ್ಮನ ಹಳ್ಳಿ, ಅಯ್ಯಪ್ಪ ಅಂಡರ್‌ಪಾಸ್‌ನಿಂದ ಮಡಿವಾಳ, ದೊಮ್ಮಲೂರು ಸೇತುವೆ, ಮಡಿವಾಳ ಪೊಲೀಸ್ ಠಾಣೆಯಿಂದ ಸಿಲ್ಕ್ ಬೋರ್ಡ್, ಇಬ್ಲೂರಿನಿಂದ ಅಗರ, ರೈನ್ಬೊ ಜಂಕ್ಷನ್‌ನಿಂದ ಕಾರ್ತಿಕ್ ನಗರ, ಎಲೆಕ್ಟ್ರಾನಿಕ್ ಸಿಟಿ ಮೇಲ್ಸೇತುವೆಯಿಂದ ನಗರದ ಕಡೆಗಿನ ರಸ್ತೆಗಳಲ್ಲಿ ನೀರು ನಿಂತು ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು.
ಬೊಮ್ಮನಹಳ್ಳಿಯಲ್ಲಿ 3.5 ಸೆಂ.ಮೀ, ಎಚ್ಎಸ್‌ಆರ್ ಲೇಔಟ್, ಗರುಡಾಚಾರ್ ಪಾಳ್ಯದಲ್ಲಿ 3 ಸೆಂ.ಮೀ, ಹಗದೂರು, ಎಚ್ಎಎಲ್ ವಿಮಾನ ನಿಲ್ದಾಣದಲ್ಲಿ 2.5 ಸೆಂ.ಮೀ, ಸಿಂಗಸಂದ್ರ, ಕಾಡುಗೋಡಿ, ಕೆ.ಆರ್. ಪುರದಲ್ಲಿ 2 ಸೆಂ.ಮೀ, ಹೂಡಿ, ದೊಡ್ಡನೆಕ್ಕುಂದಿ, ಕೋರಮಂಗಲ, ಅರೆಕೆರೆಯಲ್ಲಿ 1.5 ಸೆಂ.ಮೀ ಮಳೆಯಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.