ಬೆಂಗಳೂರು: ನಗರದಲ್ಲಿ ಗುರುವಾರ ಸಂಜೆಯಿಂದ ರಾತ್ರಿಯವರೆಗೆ ಹಲವೆಡೆ ಬಿರುಸಿನ ಮಳೆಯಾಯಿತು. ಮುಖ್ಯರಸ್ತೆಗಳಲ್ಲಿ ನೀರು ನಿಂತಿದ್ದರಿಂದ ವಾಹನ ಸವಾರರು ಪರದಾಡಿದರು.
ಬುಧವಾರ ತಡರಾತ್ರಿಯವರೆಗೂ ನಗರದ ಹಲವೆಡೆ ಸುರಿದಿದ್ದ ಮಳೆ, ಗುರುವಾರ ಬೆಳಿಗ್ಗೆ ಬಿಡುವು ನೀಡಿತ್ತು. ಮಧ್ಯಾಹ್ನದವರೆಗೆ ಬಿಸಿಲಿನ ವಾತಾವರಣವಿದ್ದು, ಸಂಜೆ ವೇಳೆಗೆ ಬಿರುಸಿನಿಂದ ಮಳೆ ಸುರಿಯಿತು. ತಡರಾತ್ರಿಯವರೆಗೂ ಹಲವು ಪ್ರದೇಶಗಳಲ್ಲಿ ಮಳೆಯಾಯಿತು.
ಇಬ್ಲೂರಿನಿಂದ ಮಾರತ್‌ಹಳ್ಳಿ, ಬಿಳೇಕಹಳ್ಳಿಯಿಂದ ಜಿ.ಡಿ.ಮರ, ಇಬ್ಲೂರು ಕಡೆಯಿಂದ ಅಗರ, ಕೈಕೊಂಡನಹಳ್ಳಿ ಕಡೆಯಿಂದ ಇಬ್ಲೂರು, ಶ್ರೀನಿವಾಗಿಲು ಜಂಕ್ಷನ್ ಕಡೆಯಿಂದ ಸೋನಿ ವರ್ಲ್ಡ್, ದೊಮ್ಮಲೂರಿನಿಂದ ಶ್ರೀನಿವಾಗಿಲು, ಅಗರ ರಸ್ತೆ ಕಡೆಯಿಂದ ಒಆರ್‌ಸಿ, ಕೆ.ಆರ್. ವೃತ್ತದ ಕಡೆಯಿಂದ ಹಡ್ಸನ್ ವೃತ್ತ, ಸಾಗರ್ ಜಂಕ್ಷನ್ ಕಡೆಯಿಂದ ಡೇರಿ ವೃತ್ತ, ದೊಡ್ಡಮರ ಜಂಕ್ಷನ್ ಕಡೆಯಿಂದ ಚೂಡಸಂದ್ರದವರೆಗೆ ವಾಹನಗಳು ಸಾಲುಗಟ್ಟಿ ನಿಂತಿದ್ದವು.
ಎಂ.ಜಿ. ರಸ್ತೆಯಲ್ಲಿರುವ ಗಾಂಧಿ ಪ್ರತಿಮೆ ಎದುರು ಮಳೆಯಿಂದ ರಸ್ತೆಯಲ್ಲಿ ನಿಂತ ನೀರಿನಲ್ಲಿ ಜನರು ಸಾಗಿದ ದೃಶ್ಯ
ಹಲಸೂರು ಕಡೆಯಿಂದ ಸೋನಿ ವರ್ಲ್ಡ್, ಬಿಟಿಎಂ ಲೇಔಟ್ 2ನೇ ಹಂತದಿಂದ ಮಡಿವಾಳ ಕೆರೆ ರಸ್ತೆ, ಕ್ಯಾಶ್ ಫಾರ್ಮಸಿ ಕಡೆಯಿಂದ ಆಶೀರ್ವಾದ ಜಂಕ್ಷನ್, ವೀರಸಂದ್ರ ಕಡೆಯಿಂದ ಹೊಸ ರಸ್ತೆ, ರೂಪೇನ ಅಗ್ರಹಾರ ಕಡೆಯಿಂದ ಸಾಗರ್ ಜಂಕ್ಷನ್, ಆಸ್ಟರ್ ಆಸ್ಪತ್ರೆ ಕಡೆಯಿಂದ ಸಾಗರ್ ಜಂಕ್ಷನ್, ಫೋರ್ಟಿಸ್ ಆಸ್ಪತ್ರೆ ಕಡೆಯಿಂದ ಬಿಳೇಕಹಳ್ಳಿ, ಎನ್‌ಜಿವಿ ಮುಖ್ಯ ಗೇಟ್ ಕಡೆಯಿಂದ ಎನ್‌ಜಿವಿ ಹಿಂದಿನ ಗೇಟ್, ಬಿನ್ನಿಮಿಲ್ ರಸ್ತೆ, ಎಸ್‌ಜಿಪಿ ರಸ್ತೆಯಿಂದ ಟೌನ್‌ಹಾಲ್, ಕೆ.ಆರ್ ವೃತ್ತದಿಂದ ಎಂ.ಎಸ್ ಕಟ್ಟಡ, ಮಾರತ್‌ಹಳ್ಳಿಯಿಂದ ಬೆಳ್ಳಂದೂರು ಕಡೆಗೆ ಹೋಗುವ ರಸ್ತೆಯಲ್ಲಿ ಮಳೆ ನೀರು ನಿಂತು ಸಂಚಾರ ದಟ್ಟಣೆ ಹೆಚ್ಚಾಗಿತ್ತು.
85 ದೂರು: ಬೆಂಗಳೂರು ದಕ್ಷಿಣ ಹಾಗೂ ಪಶ್ಚಿಮ ನಗರ ಪಾಲಿಕೆಗಳಲ್ಲಿ ತಲಾ 15 ಮರಗಳು ಉರುಳಿಬಿದ್ದಿವೆ. ಮಳೆ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಐದು ನಗರ ಪಾಲಿಕೆಗಳ ನಾಗರಿಕರಿಂದ ಒಟ್ಟು 85 ದೂರುಗಳು ಬಂದಿದ್ದವು. ಅದರಲ್ಲಿ 71ಕ್ಕೆ ಪರಿಹಾರ ಕಲ್ಪಿಸಲಾಗಿದೆ ಎಂದು ಜಿಬಿಎ ಪ್ರಕಟಣೆ ತಿಳಿಸಿದೆ.
ಎಲ್ಲಿ ಹೆಚ್ಚು ಮಳೆ?
ಅರೆಕೆರೆಯಲ್ಲಿ 4.1 ಸೆಂ.ಮೀ ಬಿಳೇಕಹಳ್ಳಿ 3.5 ಸೆಂ.ಮೀ ಬೊಮ್ಮನಹಳ್ಳಿ ನಾಗಪುರ ಸಂಪಂಗಿರಾಮನಗರ ದೊರೆಸಾನಿ ಪಾಳ್ಯ ಕೋರಮಂಗಲ ವಿದ್ಯಾಪೀಠ ಎಚ್‌ಎಸ್‌ಆರ್ ಲೇಔಟ್ ರಾಜರಾಜೇಶ್ವರಿನಗರ ವನ್ನಾರಪೇಟೆಯಲ್ಲಿ ತಲಾ 3 ಸೆಂ.ಮೀ ಬಿಟಿಎಂ ಲೇಔಟ್ ನಾಯಂಡಹಳ್ಳಿ ಮನೋರಾಯನಪಾಳ್ಯ ಪುಲಕೇಶಿನಗರ ಹಂಪಿನಗರ ಬೆಳ್ಳಂದೂರಿನಲ್ಲಿ ತಲಾ 2.5 ಸೆಂ.ಮೀ ಪೀಣ್ಯ ಕೈಗಾರಿಕಾ ಪ್ರದೇಶ ಬಸವೇಶ್ವರನಗರ ಕೋಣನಕುಂಟೆ ಯಲಹಂಕ ವಿ.ನಾಗೇನಹಳ್ಳಿ ದೊಡ್ಡಬಿದರಕಲ್ಲು ಶೆಟ್ಟಿಹಳ್ಳಿ ಸಿಂಗಸಂದ್ರ ಬಾಣಸವಾಡಿ ನಂದಿನಿ ಲೇಔಟ್ ರಾಜಾಜಿನಗರ ಚೌಡೇಶ್ವರಿ ಗೊಟ್ಟಿಗೆರೆ ಎಚ್ಎಎಲ್ ವಿಮಾನ ನಿಲ್ದಾಣ ವಿದ್ಯಾರಣ್ಯಪುರ ವಿಶ್ವೇಶ್ವರಪುರ ಕುಶಾಲನಗರದಲ್ಲಿ ತಲಾ 2 ಸೆಂ.ಮೀ ಬಾಗಲಗುಂಟೆ ಚೊಕ್ಕಸಂದ್ರ ಚಾಮರಾಜಪೇಟೆ ರಾಜಮಹಲ್ ಗುಟ್ಟಹಳ್ಳಿ ಜಕ್ಕೂರು ಅಂಜನಾಪುರದಲ್ಲಿ ತಲಾ 1.5 ಸೆಂ.ಮೀ ಮಳೆಯಾಗಿದೆ.
ರಸ್ತೆಯಲ್ಲಿ ನಿಂತ ನೀರಿನಲ್ಲಿ ಜನರು ಸಾಗುತ್ತಿರುವ ದೃಶ್ಯ
ಹೊಲಗಳಿಗೆ ನೀರು
ದಾಬಸ್ ಪೇಟೆ: ಸೋಂಪುರ ಹೋಬಳಿಯ ಹಲವೆಡೆ ಬುಧವಾರ ರಾತ್ರಿ ಹಾಗೂ ಗುರುವಾರ ಬೆಳಿಗ್ಗೆ ರಾತ್ರಿ ಮಳೆಯಾಯಿತು. ಗುರುವಾರ ಬೆಳಿಗ್ಗೆಯಿಂದಲೂ ಮೋಡ ಕವಿದ ವಾತಾವರಣ ಜೊತೆಗೆ ಸಣ್ಣಗೆ ಮಳೆ ಹನಿ. ಮಧ್ಯೆ ಕೆಲವು ನಿಮಿಷ ಬಿರುಸು ಮಳೆಯಾಯಿತು. ಹೋಬಳಿಯ ಕೆಲವು ಭಾಗಗಳಲ್ಲಿ ನೀರು ಹರಿಯುವಂತೆ ಮಳೆಯಾದರೆ ಕೆಲವೆಡೆ ಜಡಿಮಳೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.