ADVERTISEMENT

ಬೆಂಗಳೂರು | ನಗರದಲ್ಲಿ ಹಲವೆಡೆ ಮಳೆ ಅಬ್ಬರ

ಧರೆಗುರುಳಿದ ಮರ l ವಾಹನ ಸಂಚಾರ ಅಸ್ತವ್ಯಸ್ತ

​ಪ್ರಜಾವಾಣಿ ವಾರ್ತೆ
Published 21 ಜುಲೈ 2025, 22:09 IST
Last Updated 21 ಜುಲೈ 2025, 22:09 IST
ಎಚ್‌ಎಎಲ್ ಕಾರ್ಪೊರೇಟ್ ಕಚೇರಿ ಬಳಿಯ ಮಿನ್ಸ್ಕ್ ಚೌಕದಲ್ಲಿ ಸೋಮವಾರ ಮಧ್ಯಾಹ್ನದಿಂದ ಸುರಿದ ಮಳೆಯಲ್ಲಿ ಸಾಗಿದ ಜನ 
–ಪ್ರಜಾವಾಣಿ ಚಿತ್ರ: ರಂಜು ಪಿ
ಎಚ್‌ಎಎಲ್ ಕಾರ್ಪೊರೇಟ್ ಕಚೇರಿ ಬಳಿಯ ಮಿನ್ಸ್ಕ್ ಚೌಕದಲ್ಲಿ ಸೋಮವಾರ ಮಧ್ಯಾಹ್ನದಿಂದ ಸುರಿದ ಮಳೆಯಲ್ಲಿ ಸಾಗಿದ ಜನ  –ಪ್ರಜಾವಾಣಿ ಚಿತ್ರ: ರಂಜು ಪಿ   

ಬೆಂಗಳೂರು: ನಗರದಲ್ಲಿ ಸೋಮವಾರ ಮಧ್ಯಾಹ್ನದಿಂದ ತಡರಾತ್ರಿವರೆಗೆ ಹಲವು ಪ್ರದೇಶಗಳಲ್ಲಿ ಮಳೆ ಅಬ್ಬರ ಹೆಚ್ಚಾಗಿತ್ತು.‌

ನಗರದ ಬಹುತೇಕ ಪ್ರದೇಶಗಳಲ್ಲಿ ಮಳೆ ಸುರಿಯಿತು. ಮಧ್ಯಾಹ್ನ ಶಾಲೆ ಬಿಡುವ ಸಂದರ್ಭದಲ್ಲಿ ಮಳೆ ಬಿರುಸಾಗಿದ್ದರಿಂದ ಮಕ್ಕಳು ಮನೆ ತಲುಪಲು ವಿಳಂಬವಾಯಿತು. ಪ್ರಮುಖ ರಸ್ತೆಗಳಲ್ಲಿ ನೀರು ನಿಂತು ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು.

ಮರಿಗೌಡ ರಸ್ತೆಯಿಂದ ಡೇರಿ ವೃತ್ತ, ಮಾರತ್‌ ಹಳ್ಳಿಯಿಂದ ಬೆಳ್ಳಂದೂರು,  ಬಿಟಿಎಂ ಲೇಔಟ್‌ 29ನೇ ಮುಖ್ಯರಸ್ತೆಯಿಂದ ಸಿಲ್ಕ್‌ ಬೋರ್ಡ್‌, ಗುಂಜೂರು ರಸ್ತೆಯಿಂದ ವರ್ತೂರು, ಐಟಿಪಿಎಲ್‌ ಮುಖ್ಯರಸ್ತೆಯಿಂದ ಹೂಡಿ, ಆಡುಗೋಡಿ ಜಂಕ್ಷನ್‌ನಿಂದ ಆನೆಪಾಳ್ಯ, ರೂಪೇನ ಅಗ್ರಹಾರದಿಂದ ಬೊಮ್ಮನಹಳ್ಳಿ, ಪಣತ್ತೂರು ಜಂಕ್ಷನ್‌ನಿಂದ ಬೋಗನಹಳ್ಳಿ, ಮೈಸೂರು ರಸ್ತೆ ಟೋಲ್‌ಗೇಟ್‌ನಿಂದ ಹೊಸ ಗುಡ್ಡದಹಳ್ಳಿ, ವಿಪ್ರೊ ಜಂಕ್ಷನ್‌ನಿಂದ ಕೈಕೊಂಡನಹಳ್ಳಿ, ಎಸ್‌ಜೆಪಿ ಮಾರುಕಟ್ಟೆಯಿಂದ ಪುರಭವನ, ಓಕಳಿಪುರಂ ಕೆಳಸೇತುವೆಯಿಂದ ಮೆಜೆಸ್ಟಿಕ್‌ವರೆಗಿನ ರಸ್ತೆಗಳಲ್ಲಿ ನೀರು ನಿಂತು ವಾಹನ ಸಂಚಾರ ನಿಧಾನಗತಿಯಲ್ಲಿತ್ತು.

ADVERTISEMENT

ಮಡಿವಾಳ ಅಯ್ಯಪ್ಪ ಅಂಡರ್‌ಪಾಸ್‌ನಲ್ಲಿ  ಮಳೆ ನೀರು ತುಂಬಿಕೊಂಡು ವಾಹನಗಳ ಸಂಚಾರ ಸಾಧ್ಯವಾಗಲಿಲ್ಲ.  ಆರ್‌.ಟಿ ನಗರದ ಸಮೀಪದ ರಾಧಾಕೃಷ್ಣ ಚಿತ್ರಮಂದಿರದ ಬಳಿ ಹಾಗೂ ವೀರಣ್ಣ ಪಾಳ್ಯ ರೈಲ್ವೆ ಗೇಟ್‌ ಬಳಿ ಮರ ಧರೆಗುರುಳಿ ವಾಹನ ಸಂಚಾರಕ್ಕೆ ತಡೆಯಾಗಿತ್ತು.

ಕೆಇಬಿ ಜಂಕ್ಷನ್‌ನಿಂದ ಹೆಣ್ಣೂರು, ಹೆಣ್ಣೂರು ಬಾಗಲೂರು ಮುಖ್ಯರಸ್ತೆ, ಕೊತ್ತನೂರು ಮುಖ್ಯರಸ್ತೆಯಿಂದ ಕೆ. ನಾರಾಯಣಪುರ, ಹೆಬ್ಬಾಳ ಅಪ್ಪರ್‌ ರ‍್ಯಾಂಪ್‌ನಲ್ಲಿ ಮಳೆ ನೀರು ನಿಂತು ವಾಹನ ಸಂಚಾರಕ್ಕೆ ಅಡಚಣೆಯಾಗಿತ್ತು.

ಅತಿ ಹೆಚ್ಚು ಮಳೆ: ವಿದ್ಯಾಪೀಠದಲ್ಲಿ 4.6 ಸೆಂ.ಮೀ, ರಾಜರಾಜೇಶ್ವರಿ ನಗರದಲ್ಲಿ 3 ಸೆಂ.ಮೀ, ಬೊಮ್ಮನಹಳ್ಳಿ, ಕೋರಮಂಗಲ, ನಾಯಂಡಹಳ್ಳಿ, ಹಂಪಿನಗರ, ಪಟ್ಟಾಭಿರಾಮನಗರದಲ್ಲಿ ತಲಾ 2.8 ಸೆಂ.ಮೀ,  ಬಿಟಿಎಂ ಲೇಔಟ್‌ನಲ್ಲಿ 2.2 ಸೆಂ.ಮೀ, ಎಚ್ಎಸ್ಆರ್‌ ಲೇಔಟ್‌, ಜಕ್ಕೂರು, ಎಚ್‌ಎಎಲ್‌ ವಿಮಾನ ನಿಲ್ದಾಣ, ವಿಶ್ವೇಶಪುರ, ಮಾರುತಿ ಮಂದಿರ, ವಿದ್ಯಾರಣ್ಯ ಪುರದಲ್ಲಿ ತಲಾ 2 ಸೆಂ.ಮೀ, ಜಕ್ಕೂರಿನಲ್ಲಿ 1.6 ಸೆಂ.ಮೀ, ಹೇರೋಹಳ್ಳಿ, ದೊರೆಸಾನಿ ಪಾಳ್ಯ, ವಿ. ನಾಗೇನಹಳ್ಳಿ, ಹೊರಮಾವು, ವನ್ನಾರಪೇಟೆ, ಬಾಣಸವಾಡಿಯಲ್ಲಿ ತಲಾ 1.5 ಸೆಂ.ಮೀ, ಕಾಟನ್‌ಪೇಟೆ, ಚಾಮರಾಜಪೇಟೆ, ಮಾರತ್‌ಹಳ್ಳಿ, ಬಸವೇಶ್ವರನಗರ, ಬೆಳ್ಳಂದೂರು, ರಾಮಮೂರ್ತಿನಗರ, ಶೆಟ್ಟಿಹಳ್ಳಿ ಸುತ್ತಮುತ್ತಲಿನ ಪ್ರದೇಶದಲ್ಲಿ 1.2 ಸೆಂ.ಮೀ ಮಳೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.