ಬೆಂಗಳೂರು: ನಗರದಲ್ಲಿ ಬುಧವಾರ ಬಿರುಸಿನಿಂದ ಮಳೆಯಾಗಿದೆ. ಹಲವೆಡೆ ರಸ್ತೆಯಲ್ಲೇ ನೀರು ನಿಂತಿದ್ದರಿಂದ ವಾಹನಗಳ ಸಂಚಾರಕ್ಕೆ ತೊಂದರೆ ಆಯಿತು.
ಕಸ್ತೂರಿ ನಗರದಿಂದ ಎಂಎಂಟಿ ಕಡೆಗೆ ಸಾಗುವ ರಸ್ತೆ, ಕೆ.ಆರ್. ಪುರ ಮೆಟ್ರೊ ನಿಲ್ದಾಣದಿಂದ ಬೆನ್ನಿಗಾನಹಳ್ಳಿ ಕಡೆಗೆ ಸಾಗುವ ರಸ್ತೆ, ಹಳೆಯ ಉದಯ ಟಿವಿ ಜಂಕ್ಷನ್‌ನಿಂದ ಜಯಮಹಲ್ ಕಡೆಗೆ ಸಾಗುವ ರಸ್ತೆ, ಮಾರತ್‌ಹಳ್ಳಿಯಿಂದ, ಮಾರತ್‌ಹಳ್ಳಿ ಪೊಲಿಸ್ ಠಾಣೆ ಕಡೆಗೆ ಸಾಗುವ ರಸ್ತೆ. ಪುರಭವನದಿಂದ ಕೆ.ಆರ್. ಮಾರುಕಟ್ಟೆ ಕಡೆಗೆ ಸಾಗುವ ರಸ್ತೆಗಳಲ್ಲಿ ನೀರು ನಿಂತಿದ್ದರಿಂದ ವಾಹನ ಸಂಚಾರ ನಿಧಾನಗೊಂಡಿತು.
ಖೋಡೆ ಕೆಳಸೇತುವೆ ಬಳಿ ಮಳೆ ನೀರು ನಿಂತಿದ್ದರಿಂದ ಮಲ್ಲೇಶ್ವರ ಕಡೆಗೆ ಸಾಗುವ ವಾಹನಗಳಿಗೆ ಅಡ್ಡಿಯಾಯಿತು. ಮಳೆಯ ಕಾರಣದಿಂದ ವಾಹನಗಳು ನಿಧಾನವಾಗಿ ಸಾಗಿದ್ದರಿಂದ ನಗರದ ವಿವಿಧೆಡೆ ವಾಹನದಟ್ಟಣೆ ಉಂಟಾಯಿತು.
ಮಳೆ ವಿವರ: ಪೀಣ್ಯ ಕೈಗಾರಿಕಾ ವಲಯ 1.1 ಸೆಂ.ಮೀ., ಕೊಟ್ಟಿಗೆಪಾಳ್ಯ 1.1 ಸೆಂ.ಮೀ., ನಾಗಪುರ 1 ಸೆಂ.ಮೀ., ಮಾರತ್‌ಹಳ್ಳಿ 1 ಸೆಂ.ಮೀ., ಚೌಡೇಶ್ವರಿ 1 ಸೆಂ.ಮೀ. ಮಳೆ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.