
ಯಕ್ಷಗಾನ
– ಸಾಂದರ್ಭಿಕ ಚಿತ್ರ
ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಇದೇ 16ರಂದು ಸಂಜೆ 5.30ಕ್ಕೆ ಬೆಂಗಳೂರು ಹಬ್ಬದ ಉದ್ಘಾಟನಾ ಸಮಾರಂಭ ಹಮ್ಮಿಕೊಂಡಿದೆ.
ವಿಧಾನಸೌಧದ ಮೆಟ್ಟಿಲುಗಳ ಮುಂಭಾಗ ಸಂಗೀತ, ವೈವಿಧ್ಯಮಯ ಕಲೆಗಳ ಪ್ರದರ್ಶನ ಸೇರಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ವಿಧಾನಸೌಧದಿಂದ ಎಂ.ಜಿ. ರಸ್ತೆ ಮೆಟ್ರೊ ನಿಲ್ದಾಣದವರಿಗೆ ವಿವಿಧ ಜಾನಪದ ತಂಡಗಳಿಂದ ಕಲಾ ಮೆರವಣಿಗೆ ನಡೆಯಲಿದೆ.
ಈ ಹಬ್ಬ ಇದೇ 25ರವರೆಗೆ ನಗರದ ವಿವಿಧೆಡೆ ನಡೆಯಲಿದ್ದು, ವಿವರ www.blrhubba.inನಲ್ಲಿ ಲಭ್ಯ.
ಬೆಂಗಳೂರು: ನಗರದ ಸಿರಿಕಲಾ ಮೇಳದ ವಾರ್ಷಿಕೋತ್ಸವ ಅಂಗವಾಗಿ ಜ.17 ಮತ್ತು 18ರಂದು ಮಹಿಳಾ ಯಕ್ಷಗಾನ ಪ್ರದರ್ಶನ ಏರ್ಪಡಿಸಲಾಗಿದೆ.
17ರ ಸಂಜೆ 6.30ಕ್ಕೆ ಜೆ.ಸಿ. ರಸ್ತೆಯಲ್ಲಿರುವ ನಯನ ಸಭಾಂಗಣದಲ್ಲಿ ‘ವೀರ ಅಭಿಮನ್ಯು’ ಹಾಗೂ 18ರ ಸಂಜೆ 5ರಂದು ನಂದಿನಿ ಬಡಾವಣೆಯ ಉತ್ತರ ಕನ್ನಡದ ಸಂಘದಲ್ಲಿ ‘ದ್ರೌಪದಿ ಪ್ರತಾಪ’ ಪೌರಾಣಿಕ ಯಕ್ಷಗಾನ ಪ್ರದರ್ಶನ ನಡೆಯಲಿದೆ.
ಸಂಪರ್ಕಕ್ಕೆ: 9986509511 ಅಥವಾ 9341839075
ಬೆಂಗಳೂರು: ಎಲೆಕ್ಟ್ರಾನಿಕ್ ಸಿಟಿ ಯಕ್ಷಾಭಿಮಾನಿ ಬಳಗವು ಇದೇ 18ರ ಸಂಜೆ 4.30ಕ್ಕೆ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಇರುವ ಐಐಐಟಿಬಿ ಆಡಿಟೋರಿಯಂನಲ್ಲಿ ‘ಮಹಾಮಂತ್ರಿ ದುಷ್ಟಬುದ್ಧಿ’ ಯಕ್ಷಗಾನ ಪ್ರದರ್ಶನ ಹಮ್ಮಿಕೊಂಡಿದೆ. ಪ್ರವೇಶ ಉಚಿತ ಇರಲಿದೆ.
ಬೆಂಗಳೂರು: ಕರ್ನಾಟಕ ನಾಟಕ ಅಕಾಡೆಮಿಯು ತಿಂಗಳ ನಾಟಕ ಸಂಭ್ರಮ ಕಾರ್ಯಕ್ರಮದಡಿ ಜ.17ರ ಸಂಜೆ 6.30ಕ್ಕೆ ಮಲ್ಲತ್ತಹಳ್ಳಿ ಕಲಾಗ್ರಾಮದಲ್ಲಿ ಆಟಮಾಟ ತಂಡದಿಂದ ‘ಗುಡಿಯ ನೋಡಿರಣ್ಣ’ ನಾಟಕ ಪ್ರದರ್ಶನ ಏರ್ಪಡಿಸಿದೆ.
ಮಹದೇವ ಹಡಪದ ಅವರು ಈ ನಾಟಕ ನಿರ್ದೇಶನ ಮಾಡಿದ್ದು, ರಾಜಕುಮಾರ್ ಮಡಿವಾಳರ ಅವರು ರಂಗರೂಪ ನೀಡಿದ್ದಾರೆ.
ಬೆಂಗಳೂರು: ಭಾಗವತರು ಸಾಂಸ್ಕೃತಿಕ ಸಂಘಟನೆಯು 25ನೇ ವರ್ಷದ ಸಂಭ್ರಮದ ಪ್ರಯುಕ್ತ ಇದೇ 19ರಿಂದ 22ರವರೆಗೆ ಮಲ್ಲತ್ತಹಳ್ಳಿ ಕಲಾಗ್ರಾಮದಲ್ಲಿ ರಾಜ್ಯ ಮಟ್ಟದ ನಾಟಕೋತ್ಸವ ಹಮ್ಮಿಕೊಂಡಿದೆ.
ಪ್ರತಿದಿನ ಸಂಜೆ 7.15ಕ್ಕೆ ನಾಟಕ ಪ್ರದರ್ಶನ ನಡೆಯಲಿದೆ. 19ರಂದು ಸ್ಪಷ್ಟ ಥಿಯೇಟರ್‌ನಿಂದ ಗಗನ್ ಪ್ರಸಾದ್ ನಿರ್ದೇಶನದಲ್ಲಿ ‘ರಕ್ಕಸತಂಗಡಿ’, 20ರಂದು ರಂಗಬದುಕು ಟ್ರಸ್ಟ್‌ನಿಂದ ಬೇಲೂರು ರಘುನಂದನ್ ನಿರ್ದೇಶನದಲ್ಲಿ ಅ‘ಮೀರ್‌ಬಾಯಿ ಕರ್ನಾಟಕಿ’, 21ರಂದು ಸಾಗರದ ಸ್ಪಂದನ ತಂಡದಿಂದ ಮಂಜುನಾಥ ಎಲ್.ಬಡಿಗೇರ ನಿರ್ದೇಶನದಲ್ಲಿ ‘ಪ್ರಾಣ ಪದ್ಮಿನಿ’ ಹಾಗೂ 22ರಂದು ಸುಸ್ಥಿರ ಪ್ರತಿಷ್ಠಾನದಿಂದ ಜೋಸೆಫ್ ಜಾನ್ ನಿರ್ದೇಶನದಲ್ಲಿ ‘ಮಹಾಯುಗ’ ನಾಟಕ ಪ್ರದರ್ಶಿಸಲಾಗುತ್ತದೆ.
ಬೆಂಗಳೂರು: ವಿಶ್ವಪಥ ಕಲಾ ಸಂಗಮ ಹವ್ಯಾಸಿ ರಂಗತಂಡದಿಂದ ಇದೇ 18ರ ಸಂಜೆ 5 ಮತ್ತು 7 ಗಂಟೆಗೆ ‘ಮುದ್ದಣ್ಣನ ಪ್ರಮೋಷನ್ ಪ್ರಸಂಗ’ ಹಾಸ್ಯ ನಾಟಕವು ಬನಶಂಕರಿಯ ಸುಚಿತ್ರ ಫಿಲ್ಮ್ ಸೊಸೈಟಿಯಲ್ಲಿ ಪ್ರದರ್ಶನಗೊಳ್ಳಲಿದೆ.
ರಾಜೇಂದ್ರ ಕಾರಂತ ಅವರು ನಾಟಕದ ರಚಿಸಿದ್ದು, ಅಶೋಕ್ ಬಿ. ನಿರ್ದೇಶಿಸಿದ್ದಾರೆ. ಟಿಕೆಟ್‌ಗಳು ಬುಕ್ ಮೈ ಶೋನಲ್ಲಿ ಲಭ್ಯ.
ಸಂಪರ್ಕಕ್ಕೆ: 9945977184 ಅಥವಾ 9916863637
ಬೆಂಗಳೂರು: ವಿದ್ವಾನ್ ಗೋಟುವಾದ್ಯಂ ನಾರಾಯಣ ಅಯ್ಯಂಗಾರ್ ಅವರ ಸ್ಮರಣಾರ್ಥ ಮೈಸೂರು ನಾಗರಾಜ್ ಹಾಗೂ ಮೈಸೂರು ಮಂಜುನಾಥ್ ಸಹೋದರರ ದ್ವಂದ್ವ ವಯೊಲಿನ್ ಕಾರ್ಯಕ್ರಮವನ್ನು ಇದೇ 18ರಂದು ಸಂಜೆ 5.30ಕ್ಕೆ ಕೆ.ಆರ್. ರಸ್ತೆಯಲ್ಲಿರುವ ಗಾಯನ ಸಮಾಜದಲ್ಲಿ ಹಮ್ಮಿಕೊಳ್ಳಲಾಗಿದೆ. ಅನಂತ ಆರ್. ಕೃಷ್ಣನ್( ಮೃದಂಗ), ಗಿರಿಧರ ಉಡುಪ ( ಘಟಂ) ಅವರು ಸಾಥ್ ನೀಡಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.