ADVERTISEMENT

ಬೆಂಗಳೂರು: ₹686 ಕೋಟಿ ಮೌಲ್ಯದ 21 ಎಕರೆ ಜಮೀನು ಒತ್ತುವರಿ ತೆರವು

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2025, 0:00 IST
Last Updated 7 ಡಿಸೆಂಬರ್ 2025, 0:00 IST
<div class="paragraphs"><p> ಜಮೀನು ಒತ್ತುವರಿ ತೆರವು</p></div>

ಜಮೀನು ಒತ್ತುವರಿ ತೆರವು

   

(ಸಾಂದರ್ಭಿಕ ಚಿತ್ರ)

ಬೆಂಗಳೂರು: ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿ ಒತ್ತುವರಿಯಾಗಿರುವ ₹ 686.25 ಕೋಟಿ ಮೌಲ್ಯದ ಒಟ್ಟು 21 ಎಕರೆ 37.08 ಗುಂಟೆ ಸರ್ಕಾರಿ ಜಮೀನನ್ನು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಿ.ಜಗದೀಶ ನೇತೃತ್ವದಲ್ಲಿ ತೆರವುಗೊಳಿಸಿ ಸರ್ಕಾರದ ವಶಕ್ಕೆ ಪಡೆಯಲಾಯಿತು.

ADVERTISEMENT

ವಿವಿಧ ತಾಲ್ಲೂಕುಗಳ ತಹಶೀಲ್ದಾರ್‌ಗಳು ತಮ್ಮ ವ್ಯಾಪ್ತಿಯಲ್ಲಿ ಒತ್ತುವರಿಯಾಗಿದ್ದ ಖರಾಬು, ಗೋಮಾಳ, ಸರ್ಕಾರಿ, ರಾಜಕಾಲುವೆ, ಬಾವಿ, ಗುಂಡುತೋಪು, ಸರ್ಕಾರಿ ಗುಟ್ಟೆ ಜಾಗಗಳಿಗೆ ಭೇಟಿ ನೀಡಿ ತೆರವು ಕಾರ್ಯಾಚರಣೆ ಕೈಗೊಂಡರು.

ಬೆಂಗಳೂರು ಪೂರ್ವ ತಾಲ್ಲೂಕಿನ ಕೆ.ಆರ್.ಪುರ ಹೋಬಳಿಯ ಹೂಡಿ ಗ್ರಾಮದಲ್ಲಿ 4.08 ಗುಂಟೆ, ಬಿದರಹಳ್ಳಿ ಹೋಬಳಿಯ ಮಾರಗೊಂಡನಹಳ್ಳಿ ಗ್ರಾಮದಲ್ಲಿ 0.17 ಗುಂಟೆ, ಆನೇಕಲ್ ತಾಲ್ಲೂಕಿನ ಕಸಬಾ ಹೋಬಳಿಯ ವಣಕನಹಳ್ಳಿ ಗ್ರಾಮದಲ್ಲಿ 0.10 ಗುಂಟೆ, ಅತ್ತಿಬೆಲೆ ಹೋಬಳಿಯ ಇಂಡ್ಲಬೆಲೆ ಗ್ರಾಮದಲ್ಲಿ ರಾಜಕಾಲುವೆ 0.06 ಗುಂಟೆ, ಚಂದಾಪುರ ಗ್ರಾಮದ ವಿಸ್ತೀರ್ಣ 0.22 ಗುಂಟೆ, ಸರ್ಜಾಪುರ ಹೋಬಳಿಯ ಮುತ್ತನಲ್ಲೂರು ಅಮಾನಿಕೆರೆ ಗ್ರಾಮದಲ್ಲಿ 0.13 ಗುಂಟೆ, ನಾರಾಯಣಘಟ್ಟ ಗ್ರಾಮದಲ್ಲಿ 3 ಎಕರೆ ತೆರವುಗೊಳಿಸಲಾಗಿದೆ.

ಬೆಂಗಳೂರು ದಕ್ಷಿಣ ತಾಲ್ಲೂಕಿನ ಉತ್ತರಹಳ್ಳಿ ಹೋಬಳಿಯ ರಘುವನಹಳ್ಳಿ ಗ್ರಾಮದಲ್ಲಿ 0.11 ಗುಂಟೆ, ಉತ್ತರ ತಾಲ್ಲೂಕಿನ ದಾಸನಪುರ ಹೋಬಳಿಯ ರಾಮಪಾಳ್ಯ ಗ್ರಾಮದಲ್ಲಿ 1 ಎಕರೆ 0.19 ಗುಂಟೆ, ಯಶವಂತಪುರ ಹೋಬಳಿಯ ಚಿಕ್ಕಬಾಣಾವರ ಗ್ರಾಮದಲ್ಲಿ 0.29 ಗುಂಟೆ, ಯಲಹಂಕ ತಾಲ್ಲೂಕಿನ ಯಲಹಂಕ ಹೋಬಳಿಯ ಚೊಕ್ಕನಹಳ್ಳಿ ಗ್ರಾಮದಲ್ಲಿ 14ಎಕರೆ 0.26 ಗುಂಟೆ ತೆರವುಗೊಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.