ರಾಜರಾಜೇಶ್ವರಿ ನಗರ: ಇಲ್ಲಿನ ಶ್ವಾನ ಪ್ರಿಯರೊಬ್ಬರು ತನ್ನ ಸಾಕು ನಾಯಿಗೆ ಪಿತೃಪಕ್ಷವನ್ನು ಭಕ್ತಿಯಿಂದ ಆಚರಿಸಿದ್ದಾರೆ.
ಜ್ಞಾನಭಾರತಿ ಬಡಾವಣೆಯ ಎರಡನೇ ಹಂತದ ನಿವಾಸಿ ಎನ್.ಕದರಪ್ಪ ಅವರ ಮನೆಯಲ್ಲಿ ಸಾಕಿದ್ದ 10 ವರ್ಷದ ನಾಯಿ ಮೃತಪಟ್ಟಿತ್ತು. ಮೃತ ನಾಯಿಯ ಭಾವಚಿತ್ರಕ್ಕೆ ಅರಿಸಿನ, ಕುಂಕುಮ, ಹೂವುಗಳನ್ನು ಮುಡಿಸಿ, ಹಣ್ಣು– ಹಂಪಲು, ಆಹಾರ ಪದಾರ್ಥಗಳನ್ನು ಎಡೆ ಇಟ್ಟು ಪೂಜೆ ಮಾಡಿದರು.
ಎನ್.ಕದರಪ್ಪ ಮಾತನಾಡಿ, ‘ನಾಯಿಯನ್ನು ಮನೆ ಮಗನಂತೆ ಸಾಕಿದ್ದೇವು. ಕುಟುಂಬದವರು ಹೊರಗೆ ಹೋಗಿ ಮನೆಗೆ ವಾಪಸ್ ಬಂದಾಗ ಪ್ರೀತಿ ತೋರಿಸುತ್ತಿತ್ತು. ನೆನಪು ಸದಾ ಇರುವುದರಿಂದ ಶ್ರದ್ದಾ (ಪಿತೃಪಕ್ಷ) ಮಾಡಲಾಗಿದೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.