ADVERTISEMENT

ಮೆಟ್ರೊ ಹವಾನಿಯಂತ್ರಣ ವ್ಯವಸ್ಥೆಯನ್ನು ಕೊರೊನಾವೈರಸ್ ಮುಕ್ತಗೊಳಿಸಲು ಸಿದ್ಧತೆ

ಚಿರಂಜೀವಿ ಕುಲಕರ್ಣಿ
Published 31 ಮೇ 2020, 5:07 IST
Last Updated 31 ಮೇ 2020, 5:07 IST
ಮೆಟ್ರೊ ರೈಲು
ಮೆಟ್ರೊ ರೈಲು   

ಬೆಂಗಳೂರು:ಲಾಕ್‌ಡೌನ್ ಸಡಿಲಿಕೆ ಆದರೆ ಮೆಟ್ರೊ ರೈಲು ಸಂಚಾರ ಆರಂಭಿಸಲು ಕೇಂದ್ರ ಸರ್ಕಾರ ಇನ್ನೂ ಅನುಮತಿ ನೀಡಿಲ್ಲ. ಆದರೆ ಬಿಎಂಆರ್‌ಸಿಎಲ್ ತಮ್ಮ ಹವಾನಿಯಂತ್ರಣ ವ್ಯವಸ್ಥೆಯನ್ನು ಕೊರೊನಾವೈರಸ್ ಮುಕ್ತವಾಗಿಸುವ ಕ್ರಮಗಳನ್ನು ಆರಂಭಿಸಿದೆ.

ಹವಾನಿಯಂತ್ರಣ ವ್ಯವಸ್ಥೆ ಕಾರ್ಯಾಚರಣೆಗಾಗಿ ನಿರ್ದಿಷ್ಟ ಕಾರ್ಯಾನುಷ್ಠಾನ ಮಾನದಂಡ (ಎಸ್‍ಒಪಿ)ಯನ್ನು ಸಿದ್ದಪಡಿಸಿದೆ. ಇದರ ಪ್ರಕಾರ ಮೆಟ್ರೊ ರೈಲು ನಿಲ್ದಾಣಗಳಲ್ಲಿ ಶುದ್ಧ ವಾಯು ಯಥೇಚ್ಚವಾಗಿ ಒಳಬರುವಂತೆ ಮತ್ತು ಇಲ್ಲಿರುವ ಗಾಳಿ ಹೊರಹೋಗುವಂತೆ ವ್ಯವಸ್ಥೆ ಮಾಡಲಾಗುವುದು.

ನಮ್ಮ ಮೆಟ್ರೊ ಮೊದಲ ಹಂತದ ಮೂಲಸೌಕರ್ಯದಲ್ಲಿ 40 ರೈಲು ನಿಲ್ದಾಣಗಳಿವೆ. ಇವುಗಳಲ್ಲಿ 7 ರೈಲು ನಿಲ್ದಾಣಗಳು ಭೂಗತವಾಗಿದ್ದು, 42 ಕಿಮೀ ಉದ್ದದ ಮೆಟ್ರೊ ಮಾರ್ಗದಲ್ಲಿ 9 ಕಿಮೀ ಸುರಂಗ ಮಾರ್ಗವಿದೆ.

ADVERTISEMENT

ಭೂಗತ ರೈಲು ನಿಲ್ದಾಣಗಳಲ್ಲಿರುವ ಹವಾನಿಯಂತ್ರಕ ವ್ಯವಸ್ಥೆಯು 27 (+/-1) ಡಿಗ್ರಿ ಸೆಲ್ಶಿಯಸ್ ಮತ್ತು ಆರ್ದ್ರತೆ ಶೇ.55 -65ಗಿಂತ ಕಡಿಮೆ ಇರಿಸುವುದು ಕಷ್ಟ ಕೆಲಸವಾಗಿದೆ.
ಕೇಂದ್ರ ಲೋಕೋಪಯೋಗಿ ಇಲಾಖೆ ಮತ್ತು ಇಂಡಿಯನ್ ಸೊಸೈಟಿ ಆಫ್ ಹೀಟಿಂಗ್, ರೆಫ್ರಿಜರೇಟಿಂಹ್ ಆ್ಯಂಡ್ ಏರ್ ಕಂಡಿಷನಿಂಗ್ ಎಂಜಿನಿಯರ್ಸ್ (ISHARE) ಅವರ ಮಾರ್ಗಸೂಚಿಯಂತೆ ಎಸ್‍ಒಪಿ ಸಿದ್ಧಪಡಿಸಲಾಗಿದೆ.

ರೈಲುಗಳಲ್ಲಿ ಮತ್ತು ಭೂಗತ ರೈಲು ನಿಲ್ದಾಣಗಲ್ಲಿ ಶುದ್ಧವಾಯು ಸಂಚಾರವಾಗಬೇಕು ಅದೇ ವೇಳೆ ಅಲ್ಲಿರುವ ಗಾಳಿ ಅಲ್ಲಿಯೇ ಉಳಿಯದಂತೆ ನೋಡಿಕೊಳ್ಳುವ ವ್ಯವಸ್ಥೆ ಮಾಡಲಾಗುತ್ತದೆ ಎಂದು ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಜಯ್ ಸೇತ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.