ADVERTISEMENT

Bengaluru | ದಾಖಲೆ ಬರೆದ ‘ನಮ್ಮ ಮೆಟ್ರೊ’: ಒಂದೇ ದಿನ 10.48 ಲಕ್ಷ ಮಂದಿ ಪ್ರಯಾಣ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2025, 16:22 IST
Last Updated 12 ಆಗಸ್ಟ್ 2025, 16:22 IST
   

ಬೆಂಗಳೂರು: ‘ನಮ್ಮ ಮೆಟ್ರೊ’ದ ನೇರಳೆ, ಹಸಿರು ಹಾಗೂ ಹಳದಿ ಮಾರ್ಗದಲ್ಲಿ ಸೋಮವಾರ 10.48 ಲಕ್ಷ ಪ್ರಯಾಣಿಕರು ಪ್ರಯಾಣಿಸಿದ್ದಾರೆ. ಇದು ದಾಖಲೆಯಾಗಿದೆ. ಈ ಹಿಂದೆ 9.66 ಲಕ್ಷ (ಜೂನ್‌ 4) ಪ್ರಯಾಣಿಕರು ಪ್ರಯಾಣಿಸಿದ್ದು ದಾಖಲೆ ಆಗಿತ್ತು.

ಹಳದಿ ಮಾರ್ಗದ ಸೇರ್ಪಡೆಯಿಂದಾಗಿ ಒಂದೇ ದಿನದಲ್ಲಿ ಮೆಟ್ರೊ ಪ್ರಯಾಣಿಕರ ಸಂಖ್ಯೆ 10 ಲಕ್ಷದ ಗಡಿ ದಾಟಿದೆ.

ನೇರಳೆ ಮಾರ್ಗದಲ್ಲಿ 4,51,816, ಹಸಿರು ಮಾರ್ಗದಲ್ಲಿ 2,91,677, ಹಳದಿ ಮಾರ್ಗದಲ್ಲಿ 52,215 ಮಂದಿ ಪ್ರಯಾಣಿಸಿದ್ದಾರೆ. 2,52,323 ಮಂದಿ ಒಂದು ಮಾರ್ಗದಿಂದ ಮತ್ತೊಂದು ಮಾರ್ಗಕ್ಕೆ (ಇಂಟರ್‌ಚೇಂಜ್‌) ಸಂಚಾರ ಬದಲಾಯಿಸಿದ್ದಾರೆ. ಒಟ್ಟು 10,48,031 ಮಂದಿ ಪ್ರಯಾಣಿಸಿದ್ದಾರೆ ಎಂದು ಬಿಎಂಆರ್‌ಸಿಎಲ್‌ ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಟಿಕೆಟ್‌ ಮಾದರಿ:

10,48,031 ಪ್ರಯಾಣಿಕರ ಪೈಕಿ, ಸ್ಮಾರ್ಟ್‌ ಕಾರ್ಡ್‌ ಬಳಸಿ 5,03,837 ಮಂದಿ, ಟೋಕನ್‌ ಮೂಲಕ 3,03,165, ಕ್ಯೂಆರ್ ಕೋಡ್‌ ಬಳಸಿ 2,08,382 ಹಾಗೂ ರಾಷ್ಟ್ರೀಯ ಸಾಮಾನ್ಯ ಮೊಬಿಲಿಟಿ ಕಾರ್ಡ್‌ (ಎನ್‌ಸಿಎಂಸಿ) ಮೂಲಕ 32,198 ಹಾಗೂ ಗ್ರೂಪ್‌ ಟಿಕೆಟ್‌ ಮೂಲಕ 450 ಮಂದಿ ಪ್ರಯಾಣಿಸಿದ್ದಾರೆ.

ಫೀಡರ್‌ ಬಸ್‌ ಸೇವೆಗೆ ಚಾಲನೆ:
ಆರ್‌ವಿ ರಸ್ತೆಯಿಂದ ಬೊಮ್ಮಸಂದ್ರದವರೆಗೆ ಹಳದಿ ಮಾರ್ಗದಲ್ಲಿ ಮೆಟ್ರೊ ರೈಲುಗಳ ಸಂಚಾರ ಸೋಮವಾರ ಆರಂಭವಾಗಿದೆ. ಇದರ ಬೆನ್ನಲ್ಲೇ ಫೀಡರ್‌ ಬಸ್‌ ಸೇವೆಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮಂಗಳವಾರ ಚಾಲನೆ ನೀಡಿದರು. ಎಲೆಕ್ಟ್ರಾನಿಕ್ಸ್ ಸಿಟಿ ವಿಪ್ರೊ ಗೇಟ್, ಕೊಡತಿ ವಿಪ್ರೊ ಗೇಟ್, ಬೊಮ್ಮಸಂದ್ರ, ಕೋನಪ್ಪನ ಅಗ್ರಹಾರದಿಂದ ಫೀಡರ್ ಬಸ್ ಸೇವೆ ಇರಲಿದೆ. ಮೂರು ಮಾರ್ಗದ ವಿವಿಧ ನಿಲ್ದಾಣಗಳಿಂದ ಪ್ರತಿ ದಿನ 1.20 ಲಕ್ಷಕ್ಕೂ ಅಧಿಕ ಪ್ರಯಾಣಿಕರು ಮೆಟ್ರೊ ಫೀಡರ್ ಬಸ್ ಸೇವೆ ಪಡೆಯುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.