ನಮ್ಮ ಮೆಟ್ರೊ
ಬೆಂಗಳೂರು: ನಮ್ಮ ಮೆಟ್ರೊ ಸಂಚಾರ ದರವನ್ನು ಶೇ 30ರಷ್ಟು ಹೆಚ್ಚಿಸುವ ಬಗ್ಗೆ ಶುಕ್ರವಾರ ನಡೆದ ಬಿಎಂಆರ್‌ಸಿಎಲ್ ಮಂಡಳಿಯ ಆಂತರಿಕ ಸಭೆಯಲ್ಲಿ ಚರ್ಚೆ ನಡೆದಿದೆ.
ಪರಿಷ್ಕೃತ ದರದ ಬಗ್ಗೆ ಮಂಡಳಿಯ ಸದಸ್ಯರು ಅಥವಾ ಬಿಎಂಆರ್‌ಸಿಎಲ್ ಅಧಿಕಾರಿಗಳು ಅಧಿಕೃತವಾಗಿ ಮಾಹಿತಿ ನೀಡಿಲ್ಲ. ಆದರೆ, ಶೇ 30ರಷ್ಟು ಹೆಚ್ಚಳವಾಗಬಹುದು ಎಂದು ಮೂಲಗಳು ತಿಳಿಸಿವೆ.
‘ಮೂವರು ಸದಸ್ಯರಿದ್ದ ದರ ಪರಿಷ್ಕರಣಾ ಸಮಿತಿಯು ಶೇ 40ರಿಂದ 45ರಷ್ಟು ಏರಿಕೆ ಮಾಡಲು ಶಿಫಾರಸು ಮಾಡಿದ್ದು, ಅಷ್ಟೇ ಏರಿಕೆಯಾಗಲಿದೆ’ ಎಂದೂ ಹೇಳಲಾಗುತ್ತಿದೆ.
‘ದರ ಪರಿಷ್ಕರಣಾ ಸಮಿತಿಯ ಒಂದು ತಿಂಗಳ ಹಿಂದೆ ಶಿಫಾರಸು ಮಾಡಿತ್ತು. ಶಿಫಾರಸು ಯಥಾವತ್ ಜಾರಿ ಮಾಡಬೇಕಿಲ್ಲ. ಮಂಡಳಿ ಸಭೆಯಲ್ಲಿ ಚರ್ಚೆ ನಡೆಸಿ ಪರಿಷ್ಕೃತ ದರ ಪ್ರಕಟಿಸಲಿದೆ. ಶಿಫಾರಸ್ಸನ್ನು ಪ್ರಮಾಣವನ್ನು ವ್ಯತ್ಯಾಸ ಮಾಡುವ ಅಧಿಕಾರ ಮಂಡಳಿಗೆ ಇದೆ’ ಎಂದು ಬಿಎಂಆರ್‌ಸಿಎಲ್ ಹೇಳಿದ್ದರು.
ಶೇ 45 ಹೆಚ್ಚಳ!:
‘ಶೇ 45ರಷ್ಟು ದರ ಏರಿಕೆಯ ಬಿಎಂಆರ್‌ಸಿಎಲ್ ನಿರ್ಧಾರದಿಂದ ನಿರಾಶೆ ಉಂಟಾಗಿದೆ. ದರ ಏರಿಕೆ ಪ್ರಸ್ತಾವವನ್ನು ಮರುಪರಿಶೀಲಿಸಬೇಕು ಎಂಬ ನನ್ನ ಮನವಿಯನ್ನು ನಿರ್ಲಕ್ಷಿಸಿದೆ’ ಎಂದು ಬಿಜೆಪಿ ಸಂಸದ ಪಿ.ಸಿ. ಮೋಹನ್ ಅವರು ‘ಎಕ್ಸ್’ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.