ADVERTISEMENT

ಬೆಂಗಳೂರು ಉತ್ತರ ವಿವಿ: ಫಲಿತಾಂಶ ಪ್ರಕಟ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2020, 21:56 IST
Last Updated 12 ಆಗಸ್ಟ್ 2020, 21:56 IST

ಸೂಲಿಬೆಲೆ: ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ 2020ರ ಜನವರಿ/ಫೆಬ್ರವರಿಯಲ್ಲಿ ನಡೆದ ಸ್ನಾತಕೋತ್ತರ ಪದವಿಯ 1 ಮತ್ತು 3 ನೇ ಸೆಮಿಸ್ಟರ್ ಪರೀಕ್ಷೆ ಫಲಿತಾಂಶವನ್ನು ಇದೆ 12 ರಂದು 6 ಗಂಟೆಗೆ ಪ್ರಕಟಣೆ ಮಾಡಲಾಗಿದೆ ಎಂದು ವಿವಿಯ ಮೌಲ್ಯಮಾಪನ ಕುಲಸಚಿವ ಡಾ.ವೆಂಕಟೇಶ್ ಮೂರ್ತಿ ವಿ. ತಿಳಿಸಿದ್ದಾರೆ.

ವಿಶ್ವವಿದ್ಯಾಲಯದ ವಿದ್ಯಾರ್ಥಿ ಪೋರ್ಟಲ್ ನಲ್ಲಿ ಫಲಿತಾಂಶ ಲಭ್ಯವಿದ್ದು, ಮರು ಮೌಲ್ಯಮಾಪನ ಬಯಸುವ ವಿದ್ಯಾರ್ಥಿಗಳು ಸಂಬಂಧಪಟ್ಟ ನಿರ್ದೇಶಕರು/ಪ್ರಾಂಶುಪಾಲರ ಮೂಲಕ ಕುಲಸಚಿವರು (ಮೌಲ್ಯಮಾಪನ), ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಅವರಿಗೆ, ಫಲಿತಾಂಶ ಪ್ರಕಟವಾದ 10 ದಿನಗಳಲ್ಲಿ, ಶುಲ್ಕ ಸಹಿತ ಅರ್ಜಿ ಸಲ್ಲಿಸಲು ಪ್ರಕಟಣೆಯಲ್ಲಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT