ಬೆಂಗಳೂರು: ನಗರದ ಉತ್ತರ ವಿಭಾಗದ 13 ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ರೌಡಿಗಳ ಮನೆಗಳ ಮೇಲೆ ಭಾನುವಾರ ಮುಂಜಾನೆ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ದಾಳಿ ನಡೆಸಿ, ತಪಾಸಣೆ ನಡೆಸಿದರು.
ಡಿಸಿಪಿ ಬಿ.ಎಸ್.ನೇಮಗೌಡ ಅವರ ಮಾರ್ಗದರ್ಶನದಲ್ಲಿ ಮುಂಜಾನೆ 4 ರಿಂದ 6ರ ವರೆಗೆ ದಾಳಿ ನಡೆದಿದೆ.
ಎಸಿಪಿ ನೇತೃತ್ವದಲ್ಲಿ 13 ಠಾಣೆಯ ಇನ್‌ಸ್ಪೆಕ್ಟರ್‌ಗಳು, ಪೊಲೀಸ್ ಸಬ್ ಇನ್‌ಸ್ಪೆಕ್ಟರ್‌ಗಳು ಮತ್ತು ಸಿಬ್ಬಂದಿ ವಿಶೇಷ ಕಾರ್ಯಾಚರಣೆ ನಡೆಸಿ, ರೌಡಿಗಳ ಚಲನವಲನ, ಪ್ರಸ್ತುತ ನಿರ್ವಹಿಸುತ್ತಿರುವ ಕೆಲಸದ ಬಗ್ಗೆ ಮಾಹಿತಿ ಸಂಗ್ರಹಿಸಿದರು.
ಯಾವುದೇ ರೀತಿಯ ಅಹಿತಕರ ಘಟನೆ ಮತ್ತು ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗದಂತೆ ಎಚ್ಚರಿಕೆ ನೀಡಲಾಯಿತು.
ಮಾರಾಮಾರಿ ನಡೆದಿಲ್ಲ: ಆರ್.ಟಿ.ನಗರದ 1ನೇ ಬ್ಲಾಕ್ 18ನೇ ಕ್ರಾಸ್ ರಸ್ತೆಯಲ್ಲಿ ರಾತ್ರಿ ನಡೆದ ಹುಟ್ಟುಹಬ್ಬದ ವೇಳೆ ಮಾರಕಾಸ್ತ್ರಗಳನ್ನು ಬಳಕೆ ಮಾಡಿಲ್ಲ. ಪುಡಿ ರೌಡಿಗಳ ನಡುವೆ ಮಾರಾಮಾರಿ ನಡೆದಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ಸುಮಾರು 10 ರಿಂದ 15 ಬಾಲಕರು ತಮ್ಮ ಸ್ನೇಹಿತನ ಹುಟ್ಟಹಬ್ಬ ಆಚರಿಸಿಕೊಳ್ಳಲು ಕೇಕ್ ಕತ್ತರಿಸುವಾಗ ಅವರಲ್ಲಿ ಒಬ್ಬರ ತಲೆಗೆ ಮೊಟ್ಟೆ ಹೊಡೆದ ವಿಚಾರಕ್ಕೆ ಪರಸ್ಪರ ಗಲಾಟೆ ಮಾಡಿಕೊಂಡಿದ್ದಾರೆ. ಎಲ್ಲರೂ ಶಾಲಾ ಬಾಲಕರು ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.