ADVERTISEMENT

ಬೆಂಗಳೂರು | ನಾಳೆ ನಗರದ ಹಲವೆಡೆ ವಿದ್ಯುತ್ ವ್ಯತ್ಯಯ

​ಪ್ರಜಾವಾಣಿ ವಾರ್ತೆ
Published 29 ಜುಲೈ 2025, 0:30 IST
Last Updated 29 ಜುಲೈ 2025, 0:30 IST
ಬೆಸ್ಕಾಂ ಲೋಗೊ
ಬೆಸ್ಕಾಂ ಲೋಗೊ   

ಬೆಂಗಳೂರು: ಹೆಬ್ಬಾಳದ 220/66/11ಕೆವಿ ವಿದ್ಯುತ್ ಉಪಕೇಂದ್ರದ ವ್ಯಾಪ್ತಿಯಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ(ಕೆಪಿಟಿಸಿಎಲ್‌) ತುರ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳುತ್ತಿರುವ ಕಾರಣ, ಬುಧವಾರ ಬೆಳಿಗ್ಗೆ 11ರಿಂದ ಸಂಜೆ 5 ಗಂಟೆವರೆಗೆ  ಈ ಕೆಳಗೆ ಸೂಚಿಸಿರುವ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.

ವಿದ್ಯುತ್ ವ್ಯತ್ಯಯವಾಗುವ ಸ್ಥಳಗಳು: ಗಂಗಾನಗರ, ಲಕ್ಷ್ಮಯ್ಯ ಬ್ಲಾಕ್, ವೀವರ್ ಕಾಲೊನಿ, ಸಿ.ಬಿ.ಐ ಕ್ವಾಟ್ರಸ್‌, ಆರ್.ಬಿ.ಐ ಕಾಲೊನಿ, ಸಿ.ಪಿ.ಯು ಬ್ಲಾಕ್, ಡಿ.ಜಿ.ಕ್ಯೂ ಕ್ವಾಟ್ರಸ್‌, ಮುನಿರಾಮಯ್ಯ ಬ್ಲಾಕ್, ಯುಎಎಸ್‌ ಕ್ಯಾಂಪಸ್, ದಿನ್ನೂರು ಮುಖ್ಯ ರಸ್ತೆ, ಆರ್.ಟಿ. ನಗರ, ಪಂಜಾಬ್ ನ್ಯಾಷನಲ್ ಬ್ಯಾಂಕ್, ಮುನಪ್ಪ ಕಾಲೊನಿ, ಎಚ್.ಎಂ.ಟಿ ಬ್ಲಾಕ್, ಚಾಮುಂಡಿ ನಗರ, ಮಾಜಿ ಸೈನಿಕರ ಕಾಲೊನಿ, ಆರ್‌.ಟಿ. ನಗರ ಪೊಲೀಸ್ ಠಾಣಾ ಪ್ರದೇಶ ಸುತ್ತಮುತ್ತಲಿನ ಪ್ರದೇಶ.

ನೃಪತುಂಗ ಬಡಾವಣೆ, ಕೃಷ್ಣಪ್ಪ ಬ್ಲಾಕ್, ಸಿಬಿಐ ಮುಖ್ಯರಸ್ತೆ, ಎಂಎಲ್‌ಎ ಲೇಔಟ್‌ನ ಭಾಗಗಳು, ಶಾಂತಿಸಾಗರ ಮುಖ್ಯ ರಸ್ತೆ, ಆರ್‌.ಟಿ.ನಗರ, ವೇಣುಗೋಪಾಲ ಲೇ ಔಟ್, ಜಡ್ಜಸ್ ಕಾಲೊನಿ, 80ಅಡಿ ರಸ್ತೆ, ವಿಶ್ವೇಶ್ವರ ಬ್ಲಾಕ್, ವರ್ತುಲ ರಸ್ತೆ, ನೇತಾಜಿ ನಗರ, ಸ್ಟರ್ಲಿಂಗ್‌ ಗಾರ್ಡನ್ ಲೇಔಟ್, ಐ.ವಿ.ಆರ್.ಐ, ಗಂಗಾನಗರ ಮಾರುಕಟ್ಟೆ, ಜೈನ್ ಅಪಾರ್ಟ್‌ಮೆಂಟ್ ಸುತ್ತಲಿನ ಪ್ರದೇಶ.

ADVERTISEMENT

ಚೋಳನಾಯಕನಹಳ್ಳಿ, ಎಜಿಎಸ್ ಕಾಲೊನಿ, ಎಸ್‌ಬಿಎಂ ಕಾಲೊನಿ, ವಿನಾಯಕ ಲೇಔಟ್, ಆನಂದಗಿರಿ ಎಕ್ಸ್‌ಟೆನ್ಷನ್‌, ಪೊಲೀಸ್ ಕ್ವಾಟ್ರಸ್‌, ಹೆಬ್ಬಾಳ ಎಸ್‌.ಎಸ್.ಬ್ಲಾಕ್, ಕೆಂಪಣ್ಣ ಲೇಔಟ್, ಗುಡ್ಡದಹಳ್ಳಿ ರಸ್ತೆ, ಸುಬ್ರಮಣಿ ಕಾಲೊನಿ, ಕುಂಟಿಗ್ರಾಮ, ಕೆಇಬಿ ಲೇಔಟ್ ಸುತ್ತಮುತ್ತಲಿನ ಪ್ರದೇಶ.

ಸಂಜಯನಗರ, ಗೆದ್ದಲಹಳ್ಳಿ, ಅಶ್ವತ್ಥನಗರ, ಭೂಪಸಂದ್ರ ಸುತ್ತಮುತ್ತ, ವಿಎಸ್‌ಎನ್‌ಎಲ್ ವೈಟ್‌ ಹೌಸ್, ದಿನ್ನೂರು ರಸ್ತೆಯ ಭಾಗಗಳು, ಚೋಳನಗರ, ಎಂ.ಎಸ್.ಎಚ್ ಲೇಔಟ್, ಶ್ರೀಮತಿ ಲೇಔಟ್, ಅಮರಜ್ಯೋತಿ ಲೇಔಟ್, ಸೀತಪ್ಪ ಲೇಔಟ್, ಗುಡ್ಡದಹಳ್ಳಿ ವೃತ್ತ ಮತ್ತು ಸುತ್ತಮುತ್ತಲಿನ ಪ್ರದೇಶಗಳು.

ಜಯಮಹಲ್ ವಿಸ್ತರಣೆ, ನಂದಿದುರ್ಗ ರಸ್ತೆ, ದೂರದರ್ಶನ ಕೇಂದ್ರ, ಜಯಮಹಲ್ ರಸ್ತೆ, ಮುನಿರೆಡ್ಡಿ ಪಾಳ್ಯ, ಜೆ.ಸಿ.ನಗರ, ಮಾರಪ್ಪ ಗಾರ್ಡನ್‌, ಚಿನ್ನಪ್ಪ ಗಾರ್ಡನ್‌ ಸುತ್ತಮುತ್ತಲಿನ ಪ್ರದೇಶಗಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.