ಬೆಂಗಳೂರು: ತುರ್ತು ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಎಚ್‌ಎಎಲ್ ಉಪ ಕೇಂದ್ರದ ವ್ಯಾಪ್ತಿಯಲ್ಲಿ ಸೆ.13ರಂದು ಬೆಳಿಗ್ಗೆ 10ರಿಂದ ಸಂಜೆ 4ರವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.
ಇಸ್ರೊ (ಮಾರತ್ತಹಳ್ಳಿ ಮತ್ತು ಎನ್ಎಎಲ್), ಬಾಗ್ಮನೆ ಟೆಕ್ ಪಾರ್ಕ್, ಜಿಟಿರೆ, ಡಬ್ಲ್ಯುಟಿಸಿ, ಇಂದಿರಾನಗರ ಡಿಫೆನ್ಸ್ ಕಾಲೊನಿ, 100 ಅಡಿ ರಸ್ತೆ, ಇಂದಿರಾನಗರ 1ನೇ ಮತ್ತು 2ನೇ ಹಂತ, 80 ಅಡಿ ರಸ್ತೆ, ಸಿಎಎಂಎಚ್ ರಸ್ತೆ, ಕೃಷ್ಣ ದೇವಸ್ಥಾನ ರಸ್ತೆ, ಜೀವನ್ ಬಿಮಾ, ನಗರ, ಬೀಡಿ ಲೇಔಟ್, ಎಲ್ಐಸಿ ಕಾಲೊನಿ, ತಿಪ್ಪಸಂದ್ರ, ರಮೇಶ್ ನಗರ, ಟಾಟಾ ಹೌಸಿಂಗ್, ಬಿಇಎಂಎಲ್, ಎಡಿಎ, ಮಲ್ಲೇಶಪಾಳ್ಯ, ಕಲ್ಲಪ್ಪ ಲೇಔಟ್, ರಾಜಣ್ಣ ಮತ್ತು ಎಲ್‌ಎನ್ ರೆಡ್ಡಿ ಕಾಲೊನಿ, ಬಸವನಗರ, ಅಣ್ಣಾಸಂದ್ರ ಪಾಳ್ಯ, ಕೃಷ್ಣಪ್ಪ ಉದ್ಯಾನ, ವಿಮಾನ ನಿಲ್ದಾಣ ರಸ್ತೆ, ಟೆಕ್ಸಾಸ್, ಐಎಎಂ, ಮಾರತ್‌ಹಳ್ಳಿ, ದೊಡ್ಡನೆಕ್ಕುಂದಿ, ನ್ಯಾಯಾಲಯ ಕ್ವಾರ್ಟರ್ಸ್ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಕೆಪಿಟಿಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.
ವಿದ್ಯುತ್ ವ್ಯತ್ಯಯ ನಾಳೆ
ಬೆಂಗಳೂರು: ಕೆಪಿಟಿಸಿಎಲ್ ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಎಸ್‌ಆರ್‌ಎಸ್ ಪೀಣ್ಯ ಉಪ ಕೇಂದ್ರದ ವ್ಯಾಪ್ತಿಯಲ್ಲಿ ಸೆ. 14ರಂದು ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.
ಪೀಣ್ಯ ಗ್ರಾಮ, ಎಸ್ಆರ್‌ಎಸ್ ರಸ್ತೆ, 4 ನೇ ಬ್ಲಾಕ್, 2 ನೇ ಬ್ಲಾಕ್, ಎಂಇಐ ಫ್ಯಾಕ್ಟರಿ, ರಾಜಗೋಪಾಲ ನಗರ, ಕಸ್ತೂರಿ ಬಡವಾಣೆ, ಜಿಕೆಡಬ್ಲ್ಯು ಲೇಔಟ್, ಬೈರವೇಶ್ವರ ನಗರ, 10ನೇ ಕ್ರಾಸ್, 1ನೇ ಹಂತದ ಪೀಣ್ಯ ಕೈಗಾರಿಕಾ ಪ್ರದೇಶ, ಅಜೆಕ್ಸ್ ರಸ್ತೆ, ಸ್ಲಮ್ ರಸ್ತೆ, ಅನುಸೋಲಾರ್ ರಸ್ತೆ, ಚೇರ್ ಫ್ಯಾಕ್ಟರಿ ರಸ್ತೆ, ಜನರಲ್ ಮೆಟಲ್ ಸರ್ಕಲ್, ಸ್ನೋ ವೈಟ್ ರಸ್ತೆ, ಮೈಸೂರು ಎಂಜಿನಿಯರ್ ರಸ್ತೆ, ಸನ್‌ರೈಸ್ ಕಾಸ್ಟಿಂಗ್ ರಸ್ತೆ, 3ನೇ ಹಂತ. ವೈಷ್ಣವಿ ಮಾಲ್, ಕಾವೇರಿ ಮಾಲ್ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಕೆಪಿಟಿಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.