ADVERTISEMENT

ಬೆಂಗಳೂರು: ಇಂದು ವಿವಿಧೆಡೆ ವಿದ್ಯುತ್ ವ್ಯತ್ಯಯ

​ಪ್ರಜಾವಾಣಿ ವಾರ್ತೆ
Published 14 ಮೇ 2025, 22:45 IST
Last Updated 14 ಮೇ 2025, 22:45 IST
   

ಬೆಂಗಳೂರು: ಬಾಣಸವಾಡಿ 66 ಕೆ.ವಿ–ಎಚ್‌ಬಿಆರ್‌ ಲೈನ್‌ ಮತ್ತು 66 ಕೆ.ವಿ ಬಾಣಸವಾಡಿ–ಐಟಿಐ ಕೇಂದ್ರಗಳಲ್ಲಿ ತುರ್ತು ನಿರ್ವಹಣಾ ಕೈಗೊಳ್ಳುವುದ ರಿಂದ ಗುರುವಾರ ಬೆಳಿಗ್ಗೆ 10ರಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.

ಹೊರಮಾವು, ಪಿ ಆ್ಯಂಡ್‌ ಟಿ ಬಡಾವಣೆ, ನಿಸರ್ಗ ಕಾಲೊನಿ, ನಂದಿನಿ ಕಾಲೊನಿ, ಚಿನ್ನಸ್ವಾಮಪ್ಪ
ಬಡಾವಣೆ, ವಿಜಯ ಬ್ಯಾಂಕ್ ಕಾಲೊನಿ, ಎಚ್‌ಆರ್‌ಬಿಆರ್ ಬಡಾವಣೆ, ಕಮ್ಮನಹಳ್ಳಿ ಮುಖ್ಯರಸ್ತೆ, ಕಲ್ಯಾಣನಗರ, ಹೆಣ್ಣೂರು ಗ್ರಾಮ, ಚೆಳ್ಳಿಕೆರೆ, ಮೇಘನ ಪಾಳ್ಯ, ಕೊತ್ತನೂರು, ಬೃಂದಾವನ ಬಡಾವಣೆ, ಮಂಜುನಾಥನಗರ ರಸ್ತೆ, ಸಮದ್ ಬಡಾವಣೆ, ಕುಳ್ಳಪ್ಪ ವೃತ್ತ, ದೊಡ್ಡ ಬಾಣಸವಾಡಿ, ರಾಮಮೂರ್ತಿ
ನಗರ ಮುಖ್ಯರಸ್ತೆ, ಕೃಷ್ಣರೆಡ್ಡಿ ಬಡಾವಣೆ, ಚಿಕ್ಕ ಬಾಣಸವಾಡಿ, ಪ್ರಕೃತಿ ಟೌನ್‌ಶಿಪ್, ಬೈರತಿ ಬಂಡೆ, ಬಾಬುಸಾ ಪಾಳ್ಯ, ಆರ್.ಎಸ್.ಪಾಳ್ಯ, ಬಂಜಾರ ಬಡಾವಣೆ, ಬೆಥೆಲ್‌ ಬಡಾವಣೆ, ಸಮೃದ್ಧಿ ಬಡಾವಣೆ, ಕಲ್ಕೆರೆ, ಜಯಂತಿನಗರ ಮತ್ತು ಸುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಆಗಲಿದೆ ಎಂದು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT