ADVERTISEMENT

ಪತ್ನಿಯೊಂದಿಗಿನ ಖಾಸಗಿ ಕ್ಷಣಗಳ ದೃಶ್ಯ ಸೆರೆ ಹಿಡಿದಿಲ್ಲ: ಆರೋಪಿ ಸ್ಪಷ್ಟೀಕರಣ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2025, 16:07 IST
Last Updated 5 ಅಕ್ಟೋಬರ್ 2025, 16:07 IST
   

ಬೆಂಗಳೂರು: ಪತ್ನಿಯೊಂದಿಗೆ ಕಳೆದ ಖಾಸಗಿ ಕ್ಷಣಗಳ ದೃಶ್ಯಗಳನ್ನು ಮೊಬೈಲ್ ಹಾಗೂ ಕ್ಯಾಮೆರಾದಲ್ಲಿ ಸೆರೆಹಿಡಿದು ವಿದೇಶದಲ್ಲಿರುವ ಸ್ನೇಹಿತನಿಗೆ ಕಳುಹಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿರುವ ಆರೋಪಿಯು ವಿಡಿಯೊ ಮೂಲಕ ಸ್ಪಷ್ಟೀಕರಣ ನೀಡಿದ್ದಾನೆ.

ಆರೋಪಿ ಸೈಯದ್ ಇನಾಮುಲ್ ಹಕ್, ‘ಪತ್ನಿಯೊಂದಿಗಿನ ಖಾಸಗಿ ಕ್ಷಣಗಳ ದೃಶ್ಯವನ್ನು ಸೆರೆಹಿಡಿದಿಲ್ಲ. ಬೇರೆ ಮಹಿಳೆಯರೊಂದಿಗೆ ಸಂಬಂಧ ಹೊಂದಿಲ್ಲ. ಪತ್ನಿ ನನ್ನ ವಿರುದ್ಧ ಮಾಡಿರುವ ಆರೋಪಗಳು ಸತ್ಯಕ್ಕೆ ದೂರವಾಗಿವೆ. ಶೀಘ್ರದಲ್ಲೇ ಪೊಲೀಸರ ಮುಂದೆ ಶರಣಾಗಿ ವಾಸ್ತವ ಸಂಗತಿಯನ್ನು ಹೇಳುತ್ತೇನೆ’ ಎಂದು ವಿಡಿಯೊ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದೆ.

‘ಅಂದಾಜು ₹14 ಲಕ್ಷ ಬೆಲೆ ಬಾಳುವ ಚಿನ್ನಾಭರಣಗಳನ್ನು ಅವಳ ಬಳಿಯೇ ಬಿಟ್ಟು ಬಂದಿದ್ದೇನೆ. ನನಗೆ ಹಣ, ಚಿನ್ನದ ಆಸೆ ಇಲ್ಲ. ನನ್ನ ತಂದೆ-ತಾಯಿ ಹಾಗೂ ಸಹೋದರಿಯರ ಮೇಲೆ ಸುಳ್ಳು ಆರೋಪ ಮಾಡಿ, ಮಾನಸಿಕ ಹಿಂಸೆ ನೀಡಬೇಕೆಂಬ ಉದ್ದೇಶದಿಂದ ದೂರು ನೀಡಿದ್ದಾಳೆ’ ಎಂದು ಹೇಳಿಕೆ ನೀಡಿದ್ದಾನೆ.

ADVERTISEMENT

ಪತ್ನಿಯೊಂದಿಗೆ ಕಳೆದ ಖಾಸಗಿ ಕ್ಷಣಗಳ ದೃಶ್ಯವನ್ನು ಮೊಬೈಲ್‌ ಹಾಗೂ ಕ್ಯಾಮೆರಾದಲ್ಲಿ ಸೆರೆಹಿಡಿದು ವಿದೇಶದಲ್ಲಿರುವ ತನ್ನ ಆಪ್ತರಿಗೆ ಕಳುಹಿಸಿದ್ದ ಆರೋಪದ ಅಡಿ ಪತಿ ಸೇರಿ ನಾಲ್ವರ ವಿರುದ್ಧ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಪ್ರಕರಣ ದಾಖಲಾಗುತ್ತಿದ್ದಂತೆ ಪತಿ ಸೈಯದ್ ಇನಾಮುಲ್‌ ಹಕ್‌ ಹಾಗೂ ಅಮೀನ್‌ ಬೇಗ್‌, ಸೈಯದ್ ವಸೀಂ ಬೋಕರಿ, ಹೀನಾ ಕೌಸರ್‌ ಅವರು ತಲೆಮರೆಸಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.