ಲಾಲ್‌ಬಾಗ್‌ನ ಕಾರಂಜಿಯ ಬಳಿ ಮಳೆಯಲ್ಲಿ ಜನರು ಸಾಗುತ್ತಿದ್ದ ದೃಶ್ಯ
ಪ್ರಜಾವಾಣಿ ಚಿತ್ರ /ಕಿಶೋರ್ ಕುಮಾರ್ ಬೋಳಾರ್
ಬೆಂಗಳೂರು: ನಗರದಲ್ಲಿ ಭಾನುವಾರ ದಿನವಿಡೀ ಬಿಟ್ಟು ಬಿಟ್ಟು ಮಳೆ ಸುರಿದಿದ್ದು, ಹಲವೆಡೆ ರಸ್ತೆಗಳಲ್ಲೇ ನೀರು ನಿಂತಿತ್ತು.
ವಡ್ಡರಪಾಳ್ಯ– ಹೆಣ್ಣೂರು ರಸ್ತೆ, ವಡ್ಡರಪಾಳ್ಯ–ಗೆದ್ದಲಹಳ್ಳಿ, ಕಬ್ಬನ್ ರಸ್ತೆ, ಜಯಮಹಲ್ ರಸ್ತೆ, ಖೋಡೆ ವೃತ್ತ, ವಿಂಡ್ಸರ್ ಮ್ಯಾನರ್ ಬಳಿ ಸೇರಿದಂತೆ ಹಲವೆಡೆ ರಸ್ತೆಯಲ್ಲಿ ನೀರು ನಿಂತಿತ್ತು. ಚರಂಡಿ ವ್ಯವಸ್ಥೆ ಸರಿ ಇಲ್ಲದೇ ಮಳೆ ನೀರು ಹರಿಯಲು ಅಡ್ಡಿಯಾಯಿತು.
ಪ್ರಧಾನಿ ನರೇಂದ್ರ ಮೋದಿ ಅವರ ವಿವಿಧ ಕಾರ್ಯಕ್ರಮಗಳಿಗೆ ಬಂದೋಬಸ್ತ್ ಮಾಡಲು ಆಗಮಿಸಿದ್ದ ಪೊಲೀಸರಿಗೂ ಮಳೆ ಅಡ್ಡಿಯಾಯಿತು.
ವಿಶ್ವನಾಥ ನಾಗೇನಹಳ್ಳಿ 4.2 ಸೆಂ.ಮೀ. , ಹಂಪಿನಗರ 3.1 ಸೆಂ.ಮೀ., ಹೊರಮಾವು 2.8 ಸೆಂ.ಮೀ., ಜಕ್ಕೂರು 2.7 ಸೆಂ.ಮೀ., ಕೋರಮಂಗಲ 2.5 ಸೆಂ.ಮೀ., ಸಿಂಗಸಂದ್ರ 2.4 ಸೆಂ.ಮೀ., ಮನೋರಾಯನ ಪಾಳ್ಯ 2.4 ಸೆಂ.ಮೀ., ರಾಮಮೂರ್ತಿ ನಗರ 2.2 ಸೆಂ.ಮೀ., ಪುಟ್ಟೇನಹಳ್ಳಿ 2.2 ಸೆಂ.ಮೀ., ಬಾಣಸವಾಡಿ 2 ಸೆಂ.ಮೀ. ಮಳೆಯಾಗಿದೆ.
ಹೆಮ್ಮಿಗೆಪುರ, ಶೆಟ್ಟಿಹಳ್ಳಿ, ಚೌಡೇಶ್ವರಿ, ಬೊಮ್ಮನಹಳ್ಳಿ, ಮಾರುತಿ ಮಂದಿರ, ಬಾಗಲಗುಂಟೆ, ಎಚ್.ಎಸ್.ಆರ್. ಲೇಔಟ್, ಕಾಡುಗೋಡಿ, ಬಸವನಪುರ, ಗರುಡಾಚಾರ್ ಪಾಳ್ಯ, ವಿದ್ಯಾಪೀಠ, ಯಶವಂತಪುರ, ಎಂ.ಜಿ. ರಸ್ತೆ, ಮೆಜೆಸ್ಟಿಕ್, ಯಲಹಂಕ ಸೇರಿದಂತೆ ನಗರದ ಎಲ್ಲ ಪ್ರದೇಶಗಳಲ್ಲಿ ಬಿರುಸಿನಿಂದ ಮಳೆಯಾಗಿದೆ.
ಲಾಲ್‌ಬಾಗ್ ಬಳಿ ಮಳೆಯಲ್ಲಿ ಜನರು ಸಾಗುತ್ತಿದ್ದ ದೃಶ್ಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.