ADVERTISEMENT

Bengaluru Rains | ನಗರದ ಹಲವೆಡೆ ಉತ್ತಮ ಮಳೆ

​ಪ್ರಜಾವಾಣಿ ವಾರ್ತೆ
Published 18 ಜುಲೈ 2025, 0:15 IST
Last Updated 18 ಜುಲೈ 2025, 0:15 IST
<div class="paragraphs"><p>ಗುರುವಾರ ಸುರಿಯುವ ಮಳೆಯ ನಡುವೆ&nbsp;ಮಹಿಳೆಯರು ಮತ್ತು ಮಕ್ಕಳು ಒದ್ದೆಯಾಗುತ್ತಲೇ ಹೆಜ್ಜೆ ಹಾಕುತ್ತಿರುವುದು ಬೆಂಗಳೂರಿನ ಮಿನ್ಸ್ಕ್ ಸ್ಕ್ವೇರ್ ಬಳಿ ಕಂಡುಬಂತು </p></div>

ಗುರುವಾರ ಸುರಿಯುವ ಮಳೆಯ ನಡುವೆ ಮಹಿಳೆಯರು ಮತ್ತು ಮಕ್ಕಳು ಒದ್ದೆಯಾಗುತ್ತಲೇ ಹೆಜ್ಜೆ ಹಾಕುತ್ತಿರುವುದು ಬೆಂಗಳೂರಿನ ಮಿನ್ಸ್ಕ್ ಸ್ಕ್ವೇರ್ ಬಳಿ ಕಂಡುಬಂತು

   

ಪ್ರಜಾವಾಣಿ ಚಿತ್ರ: ಪ್ರಶಾಂತ್ ಎಚ್.ಜಿ.

ಬೆಂಗಳೂರು: ನಗರದಲ್ಲಿ ಗುರುವಾರ ಮಧ್ಯಾಹ್ನದಿಂದ ಆರಂಭವಾದ ಮಳೆ ಮಧ್ಯರಾತ್ರಿವರೆಗೂ ಹಲವೆಡೆ ಉತ್ತಮವಾಗಿ ಸುರಿಯಿತು.

ADVERTISEMENT

ಗುರುವಾರ ಬೆಳಿಗ್ಗೆಯಿಂದ ಬಿಸಿಲಿನ ವಾತಾವರಣವಿತ್ತು. ಮಧ್ಯಾಹ್ನದ ನಂತರ ಹಲವು ಪ್ರದೇಶಗಳಲ್ಲಿ ಮಳೆ ಸುರಿಯಿತು. ಸಂಜೆ ಹಾಗೂ ರಾತ್ರಿ ಹಲವೆಡೆ ಮಳೆ ಅಬ್ಬರ ಹೆಚ್ಚಾಯಿತು. ಪ್ರ‌ಮುಖ ರಸ್ತೆಗಳಲ್ಲಿ ನೀರು ನಿಂತು ವಾಹನ ಸವಾರರು ಪರದಾಡಿದರು. ವಾಹನ ಸಂಚಾರ ನಿಧಾನಗತಿಯಾಗಿ ದಟ್ಟಣೆ ಉಂಟಾಗಿತ್ತು.

ತಡರಾತ್ರಿಯವರೆಗೂ ಕೆಲವು ಪ್ರದೇಶಗಳಲ್ಲಿ ಮಳೆಯಾಯಿತು. ಮೈಸೂರು ರಸ್ತೆ, ಬಳ್ಳಾರಿ ರಸ್ತೆ, ಹಳೆ ಮದ್ರಾಸ್ ರಸ್ತೆಯಲ್ಲಿ ವಾಹನ ದಟ್ಟಣೆ ಉಂಟಾಗಿತ್ತು. ದೊಡ್ಡಕನ್ನಲ್ಲಿಯಿಂದ ಇಬ್ಲೂರು, ರೂಪೇನ ಅಗ್ರಹಾರದಿಂದ ಬೊಮ್ಮನಹಳ್ಳಿ, ಹೆಬ್ಬಾಳ ಜಂಕ್ಷನ್‌, ಎಂಪಿಎಸ್‌ನಿಂದ ಎಸ್‌ಪಿ ರಸ್ತೆ, ಕ್ವೀನ್ಸ್‌ ಜಂಕ್ಷನ್‌ನಿಂದ ಅನಿಲ್‌ ಕುಂಬ್ಳೆ ವೃತ್ತ, ಕಾಡುಗೋಡಿಯಿಂದ ಬೆಳತ್ತೂರುವರೆಗಿನ ರಸ್ತೆಗಳಲ್ಲಿ ನೀರು ತುಂಬಿಕೊಂಡು ವಾಹನ ಸಂಚಾರಕ್ಕೆ ಅಡ್ಡಿಯಾಗಿತ್ತು.

ವಿದ್ಯಾಪೀಠ, ರಾಜರಾಜೇಶ್ವರಿ ನಗರ, ನಾಯಂಡಹಳ್ಳಿ, ಜಕ್ಕೂರು, ದೊಡ್ಡಬಿದರಕಲ್ಲು, ಯಲಹಂಕ, ಪಟ್ಟಾಭಿರಾಮನಗರ, ಕೋರಮಂಗಲ, ಹೆಮ್ಮಿಗೆಪುರ, ಹಂಪಿ ನಗರ, ಕೆಂಗೇರಿ, ಮಾರುತಿ ಮಂದಿರ, ಹೇರೋಹಳ್ಳಿ, ಬಿಟಿಎಂ ಲೇಔಟ್ ಸುತ್ತಮುತ್ತ ಪ್ರದೇಶಗಳಲ್ಲಿ ಹೆಚ್ಚು ಮಳೆಯಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.