ADVERTISEMENT

ವಂಚನೆ ಪ್ರಕರಣ ದಾಖಲಿಸಿ ತನಿಖೆ ನಡೆಸಲು ₹1 ಲಕ್ಷ ಲಂಚ: ಪಿಐ, ಪಿಎಸ್‌ಐ ಬಂಧನ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2025, 23:55 IST
Last Updated 16 ಆಗಸ್ಟ್ 2025, 23:55 IST
<div class="paragraphs"><p>ಬಂಧನ</p></div>

ಬಂಧನ

   

(ಪ್ರಾತಿನಿಧಿಕ ಚಿತ್ರ)

ಬೆಂಗಳೂರು: ವಂಚನೆ ಪ್ರಕರಣ ದಾಖಲಿಸಿ ತನಿಖೆ ನಡೆಸಲು ₹1 ಲಕ್ಷ ಲಂಚ ಪಡೆಯುತ್ತಿದ್ದ ವೇಳೆ ರಾಮಮೂರ್ತಿನಗರ ಪೊಲೀಸ್ ಠಾಣೆಯ ಪಿಐ, ಪಿಎಸ್‌ಐ ಮತ್ತು ಖಾಸಗಿ ವ್ಯಕ್ತಿಯೊಬ್ಬರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.

ADVERTISEMENT

ಕೃಷ್ಣರಾಜಪುರದ ನಿವಾಸಿ ಗೋ‍ಪಿನಾಥ್ ಅವರ ಪತ್ನಿ, ಗೋಪಿನಾಥ್ ಅವರಿಗೆ ತಿಳಿಸದೆಯೇ ಕುಟುಂಬದ ಚಿನ್ನಾಭರಣ ಮತ್ತು ನಗದನ್ನು ಅನ್ಯರಿಗೆ ನೀಡಿದ್ದರು. ಈ ಬಗ್ಗೆ ವಿಚಾರಣೆ ನಡೆಸಿ, ಚಿನ್ನಾಭರಣವನ್ನು ವಾಪಸ್‌ ಕೊಡಿಸಿಕೊಡಿ ಎಂದು ಗೋಪಿನಾಥ್ ಅವರು ರಾಮಮೂರ್ತಿನಗರ ಪೊಲೀಸರಿಗೆ ದೂರು ನೀಡಿದ್ದರು.

‘ಈ ದೂರಿನ ಅನ್ವಯ ಪ್ರಕರಣ ದಾಖಲಿಸಲು ಮತ್ತು ಚಿನ್ನಾಭರಣ ವಾಪಸ್‌ ಕೊಡಿಸಿಕೊಡಲು ₹2 ಲಕ್ಷ ಲಂಚ ನೀಡುವಂತೆ ಪಿಐ ರಾಜಶೇಖರ್ ಬೇಡಿಕೆ ಇಟ್ಟಿದ್ದರು. ಈ ಸಂಬಂಧ ಮಂಜುನಾಥ್ ಎಂಬುವವರು ನೀಡಿದ್ದ ದೂರಿನ ಆಧಾರದಲ್ಲಿ ಕಾರ್ಯಾಚರಣೆ ರೂಪಿಸಲಾಗಿತ್ತು’ ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ.

‘ಲೋಕಾಯುಕ್ತ ಎಸ್‌ಪಿ ಕೋನ ವಂಶಿಕೃಷ್ಣ ಅವರ ಮಾರ್ಗದರ್ಶನದಂತೆ, ದೂರುದಾರರು ರಾಮಮೂರ್ತಿನಗರ ಠಾಣೆಯ ಪಿಎಸ್‌ಐ ರುಮಾನ್‌ ಪಾಷಾ ಮತ್ತು ಅವರ ಆಪ್ತ ಇಮ್ರಾನ್ ಬಾಬು ಅವರಿಗೆ ₹1 ಲಕ್ಷ ಹಣ ನೀಡಿದ್ದರು. ಈ ವೇಳೆ ದಾಳಿ ನಡೆಸಿ ಆರೋಪಿಗಳಿಬ್ಬರನ್ನೂ ಬಂಧಿಸಲಾಯಿತು. ಆರೋಪಿಗಳು ನೀಡಿದ ಮಾಹಿತಿ ಆಧಾರದಲ್ಲಿ ಪಿಐ ರಾಜಶೇಖರ್ ಅವರನ್ನೂ ಬಂಧಿಸಲಾಯಿತು’ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.