ADVERTISEMENT

ಬೆಂಗಳೂರು | ರಾಜೇಂದ್ರ ಚೋಳನ್‌ ಬೈಕ್ ಸವಾರಿ: ರಸ್ತೆ ಗುಂಡಿ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2025, 6:02 IST
Last Updated 29 ಸೆಪ್ಟೆಂಬರ್ 2025, 6:02 IST
   

ಬೆಂಗಳೂರು: ಬೆಂಗಳೂರು ಕೇಂದ್ರ ನಗರ ಪಾಲಿಕೆ ಆಯುಕ್ತರಾದ ರಾಜೇಂದ್ರ ಚೋಳನ್ ಅವರು ಸೋಮವಾರ ಬೆಳಿಗ್ಗೆ ಚಿಕ್ಕಪೇಟೆ ವಿಭಾಗದ ವ್ಯಾಪ್ತಿಯಲ್ಲಿನ ಮುಖ್ಯ ಮತ್ತು ಉಪ ಮುಖ್ಯ ರಸ್ತೆಗಳಲ್ಲಿ ಸುಮಾರು 25 ಕೀ.ಮೀ ವ್ಯಾಪ್ತಿ ದ್ವಿಚಕ್ರ (ಬೈಕ್) ವಾಹನದಲ್ಲಿ ಸಂಚರಿಸಿ ರಸ್ತೆ ಗುಂಡಿಗಳನ್ನು ಹಾಗೂ ಕೈಗೊಂಡ ರಸ್ತೆ ದುರಸ್ತಿ ಕಾಮಗಾರಿಗಳನ್ನು ಪರಿಶೀಲನೆ ನಡೆಸಿದರು.

ಪರಿಶೀಲನೆ ಸಂದರ್ಭದಲ್ಲಿ ಅಧಿಕಾರಿಗಳಿಗೆ ನೀಡಿದ ಪ್ರಮುಖ ಸೂಚನೆಗಳು:

  • ತುರ್ತಾಗಿ ಎಲ್ಲಾ ರಸ್ತೆ ಗುಂಡಿಗಳನ್ನು ಉತ್ತಮ ರೀತಿಯಲ್ಲಿ ಮುಚ್ಚುವುದು.

  • ಜಂಕ್ಷನ್‌ಗಳ ಅಭಿವೃದ್ಧಿ.

    ADVERTISEMENT
  • ವೃತ್ತಗಳ ಅಭಿವೃದ್ಧಿ.

  • ಹೊಸೂರು ರಸ್ತೆ ಮೇಲ್ಮೈ ಡಾಂಬರೀಕರಣ (resurfacing).

  • ರಸ್ತೆ ಬದಿ ತ್ಯಾಜ್ಯ ಬ್ಲಾಕ್ ಸ್ಪಾಟ್ ಗಳ ತೆರವು ಹಾಗೂ ಬ್ಲಾಕ್ ಸ್ಪಾಟ್ ಗಳಾಗದಂತೆ ತಡೆಯುವುದು.

  • ಪಾದಚಾರಿ ಮಾರ್ಗಗಳನ್ನು ದುರಸ್ಥಿಗೊಳಿಸಿ ಪಾದಚಾರಿಗಳ ಸಂಚಾರ ಸುಗಮಗೊಳಿಸುವುದು.

  • ಜೆ. ಸಿ ರಸ್ತೆ ಯಲ್ಲಿನ ನಗರಪಾಲಿಕೆ ಜಾಗದ ಸುತ್ತಲೂ ಕಾಂಪೌಂಡ್/ ತಂತಿಬೇಲಿ ಹಾಕುವುದು ಹಾಗೂ ಸದರಿ ಜಾಗದ ಅಭಿವೃದ್ಧಿಗೆ ಡಿ.ಪಿ.ಆರ್ ತಯಾರಿಸುವುದು.

ಸ್ಥಳ ಪರಿಶೀಲನೆ ನಡೆಸಿದ (ಸಂಚರಿಸಿದ) ರಸ್ತೆಗಳು

  • ಬುಲ್ ಟೆಂಪಲ್ ರಸ್ತೆ

  • ವಾಣಿವಿಲಾಸ್ ರಸ್ತೆ

  • ಶಂಕರಮಠ ರಸ್ತೆ

  • ಕೆ.ಆರ್ ರಸ್ತೆ

  • ನ್ಯಾಷನಲ್ ಕಾಲೇಜು ಎಡಕ್ಕೆ

  • ವಾಣಿವಿಲಾಸ ರಸ್ತೆ

  • ಪಶ್ಚಿಮ ದ್ವಾರ

  • ಆರ್‌ವಿ ರಸ್ತೆ

  • ಶಿಕ್ಷಕರ ಕಾಲೇಜು ಎಡಕ್ಕೆ

  • ಕನಕನಪಾಳ್ಯ ಪ್ಲಾಯಾ ರಸ್ತೆ

  • ಟಿ.ಮರಿಗೌಡ ರಸ್ತೆ

  • ಹೊಸೂರು ರಸ್ತೆ

  • ಕೃಂಬಿಗಲ್ ರಸ್ತೆ ಪಶ್ಚಿಮ ದ್ವಾರ ಬಲಕ್ಕೆ

  • ಜೆ.ಸಿ ರಸ್ತೆ,

  • ಪೂರ್ಣಿಮಾ ಟಾಕಿಸ್ ರಸ್ತೆ,

  • ಲಾಲ್‌ಬಾಗ್ ರಸ್ತೆ

ಸ್ಥಳ ಪರಿಶೀಲನೆ ಸಂದರ್ಭದಲ್ಲಿ ಮುಖ್ಯ ಎಂಜಿನಿಯರ್ ವಿಜಯಕುಮಾರ್ ಹರಿದಾಸ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.