ADVERTISEMENT

ಬೆಂಗಳೂರಿನಲ್ಲಿ 7 ಸಾವಿರ ಗುಂಡಿ ಮುಚ್ಚಿದ್ದು, 5 ಸಾವಿರ ಬಾಕಿ: ಡಿ.ಕೆ ಶಿವಕುಮಾರ್

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2025, 6:13 IST
Last Updated 20 ಸೆಪ್ಟೆಂಬರ್ 2025, 6:13 IST
<div class="paragraphs"><p>ಡಿ.ಕೆ ಶಿವಕುಮಾರ್</p></div>

ಡಿ.ಕೆ ಶಿವಕುಮಾರ್

   

ಬೆಂಗಳೂರು: 'ನಗರದಲ್ಲಿ ಏಳು ಸಾವಿರಕ್ಕೂ ಹೆಚ್ಚು ರಸ್ತೆಗುಂಡಿಗಳನ್ನು ಈಗಾಗಲೇ ಮುಚ್ಚಲಾಗಿದೆ. ಇನ್ನೂ ಐದು ಸಾವಿರದಷ್ಟು ಗುಂಡಿಗಳನ್ನು ಮುಚ್ಚಲು ಬಾಕಿಯಿದೆ' ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.

ಸುದ್ದಿಗಾರರ ಜೊತೆ ಶನಿವಾರ ಮಾತನಾಡಿದ ಅವರು, ‘ರಸ್ತೆ ಗುಂಡಿ ಸಮಸ್ಯೆ ಬಗೆಹರಿಸಲು ನಾವು ಬದ್ಧವಾಗಿದ್ದು, ಸಮಾರೋಪಾದಿಯಲ್ಲಿ ಕಾರ್ಯನಿರ್ವಹಿಸಲಾಗುತ್ತಿದೆ. ರಾಜಕೀಯ ಮಾಡುವವರು ಮಾಡಲಿ’ ಎಂದರು.

ADVERTISEMENT

'ಯಾರೂ ಉದ್ದೇಶಪೂರ್ವಕವಾಗಿ ರಸ್ತೆಗುಂಡಿಗಳನ್ನು ಮಾಡುವುದಿಲ್ಲ. ಅತಿಯಾದ ಮಳೆ ಬಿದ್ದ ಕಾರಣಕ್ಕೆ ಗುಂಡಿಗಳಾಗಿವೆ. ಪೊಲೀಸ್ ಕಮಿಷನರ್ ಅವರಿಂದ ವರದಿ ಕೇಳಲಾಗಿದೆ. ಸಾರ್ವಜನಿಕರು ಸೇರಿದಂತೆ ಎಲ್ಲರೂ ರಸ್ತೆಗುಂಡಿಗಳು ಕಂಡರೆ ಗಮನಕ್ಕೆ ತರುವ ವ್ಯವಸ್ಥೆ ರೂಪಿಸಲಾಗಿದೆ" ಎಂದು ತಿಳಿಸಿದರು.

ಬಿಜೆಪಿ ಶಾಸಕರು ಗುಂಡಿ ಮುಚ್ಚಿಲ್ಲ ಯಾಕೆ: 'ಬಿಜೆಪಿಯವರು ರಸ್ತೆ ತಡೆಯದರೂ ಮಾಡಲಿ, ಬೇರೆ ಏನಾದರೂ ಮಾಡಲಿ. ಪ್ರತಿಯೊಬ್ಬ ಬಿಜೆಪಿ ಶಾಸಕನ ಕ್ಷೇತ್ರಕ್ಕೆ ₹ 25 ಕೋಟಿ ನೀಡಲಾಗಿದೆ. ನನ್ನ ಅನುದಾನದಲ್ಲೂ ಯಾವುದೇ ತಾರತಮ್ಯ ಇಲ್ಲದೆ ನಗರದ ಬಿಜೆಪಿ ಶಾಸಕರ ಕ್ಷೇತ್ರಗಳಿಗೆ ಅನುದಾನ ನೀಡಿದರೂ ಏಕೆ ರಸ್ತೆಗುಂಡಿಗಳನ್ನು ಮುಚ್ಚಿಸಿಲ್ಲ' ಎಙದು ಶಿವಕುಮಾರ್ ಪ್ರಶ್ನಿಸಿದರು.

'ಬಿಜೆಪಿಯವರು ಮೊದಲು ತಮ್ಮ‌ಪಾಲಿನ ಕೆಲಸ ಮಾಡಲಿ. ಅನಂತರ ರಾಜಕೀಯ ಮಾಡಲಿ. ನಾವು ರಸ್ತೆಗುಂಡಿ ಸಮಸ್ಯೆಯನ್ನು ಬಗೆಹರಿಸುತ್ತೇವೆ. ನಾವು ರಾಜಕೀಯ ಮಾಡುವುದು ಬಿಟ್ಟು ಜನರ ಅನುಕೂಲಕ್ಕಾಗಿ ಕೆಲಸ ಮಾಡುತ್ತಿದ್ದೇವೆ. ಅವರು ಕೇವಲ ರಾಜಕೀಯ ಮಾಡುತ್ತಿದ್ದಾರೆ' ಎಂದು ಆರೋಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.