
ಅಮ್ಮಸಂದ್ರ ಸುರೇಶ್
ಬೆಂಗಳೂರು: ಬಿ.ಎಂ.ಶ್ರೀ. ಪ್ರತಿಷ್ಠಾನ ನೀಡುವ ‘ಸಾರಂಗಿ ವೆಂಕಟರಾಮಯ್ಯ ಪುಟ್ಟಚ್ಚಮ್ಮ ದತ್ತಿ ಪುಸ್ತಕ ಬಹುಮಾನ’ಕ್ಕೆ ಅಮ್ಮಸಂದ್ರ ಸುರೇಶ್ ಅವರ ‘ಅಗ್ನಿಕುಂಡದಿಂದ ಬಂದ ಚೇತನ’ ಕಾದಂಬರಿ ಆಯ್ಕೆಯಾಗಿದೆ.
ಈ ಬಹುಮಾನವು ₹3 ಸಾವಿರ ನಗದು ಹಾಗೂ ಅಭಿನಂದನಾ ಪತ್ರ ಒಳಗೊಂಡಿದೆ. ಇದೇ 23ರಂದು ಪ್ರತಿಷ್ಠಾನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಬಹುಮಾನ
ವಿತರಣೆ ಮಾಡಲಾಗುತ್ತದೆ ಎಂದು ಪ್ರತಿಷ್ಠಾನದ ಗೌರವ ಕಾರ್ಯದರ್ಶಿ ಶಾಂತರಾಜು ಅವರು
ತಿಳಿಸಿದ್ದಾರೆ.
ಕುವೆಂಪು ಚಿರಂತನ’ ಪ್ರಶಸ್ತಿಗೆ ಪುಸ್ತಕ ಆಹ್ವಾನ
ಬೆಂಗಳೂರು: ಕನ್ನಡ ಸಂಘರ್ಷ ಸಮಿತಿಯು ‘ಕುವೆಂಪು ಚಿರಂತನ ಪ್ರಶಸ್ತಿ’ಗೆ 2025ರಲ್ಲಿ ಪ್ರಕಟ
ಗೊಂಡ ಕೃತಿಗಳನ್ನು ಆಹ್ವಾನಿಸಿದೆ.
ಪ್ರಶಸ್ತಿಯು ₹10 ಸಾವಿರ ನಗದು ಒಳಗೊಂಡಿದೆ. ‘ವೈಚಾರಿಕತೆ’ಗೆ ಒತ್ತುಕೊಟ್ಟ ಕಥೆ, ಕಾದಂಬರಿ, ನಾಟಕ ಸೇರಿ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿನ ಕೃತಿಗಳನ್ನು ಪ್ರಶಸ್ತಿಗೆ ಪರಿಗಣಿಸಲಾಗುತ್ತದೆ.
ಕೃತಿಯ ಎರಡು ಪ್ರತಿಗಳನ್ನು ಎ.ಎಸ್.ನಾಗರಾಜಸ್ವಾಮಿ, ಅಧ್ಯಕ್ಷ, ಕನ್ನಡ ಸಂಘರ್ಷ ಸಮಿತಿ, ನಂ.3, 1ನೇ ತಿರುವು, 1ನೇ ಮುಖ್ಯ ರಸ್ತೆ, ಅನ್ನಪೂರ್ಣೇಶ್ವರಿ ಬಡಾವಣೆ, ಉಲ್ಲಾಳ ಮುಖ್ಯ ರಸ್ತೆ, ಬೆಂಗಳೂರು-560 056 ಈ ವಿಳಾಸಕ್ಕೆ ಜನವರಿ 10ರೊಳಗೆ ಕಳುಹಿಸಬೇಕು ಎಂದು ಪ್ರಕಟಣೆತಿಳಿಸಿದೆ.
ಸಂಪರ್ಕಕ್ಕೆ: 9739001410
ಬೆಂಗಳೂರು ವಿ.ವಿ: ಕೊನೆಯ ದಿನಾಂಕ ವಿಸ್ತರಣೆ
ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಬರುವ ಕಾಲೇಜುಗಳು 2026-27ನೇ ಶೈಕ್ಷಣಿಕ ಸಾಲಿಗೆ ವಿವಿಧ ರೀತಿಯ ಸಂಯೋಜನಾ ಅರ್ಜಿಗಳನ್ನು ಸಲ್ಲಿಸಲು ನಿಗದಿಪಡಿಸಿದ್ದ ಕೊನೆಯ ದಿನಾಂಕವನ್ನು ವಿಸ್ತರಿಸಲಾಗಿದೆ.
ದಂಡರಹಿತವಾಗಿ ಇದೇ 15ರವರೆಗೆ ಮತ್ತು ₹1000 ದಂಡ ಶುಲ್ಕ
ದೊಂದಿಗೆ ಇದೇ 18ರವರೆಗೆ ಅರ್ಜಿಗಳನ್ನು ಸಲ್ಲಿಸಬಹುದು ಎಂದು ಕುಲಸಚಿವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕ್ರಿಸ್‌ಮಸ್ ಬಜಾರ್ 12ರಿಂದ
ಬೆಂಗಳೂರು: ಕ್ರಿಸ್‌ಮಸ್ ಹಬ್ಬದ ಅಂಗವಾಗಿ ವೀ ಕ್ಯಾನ್ ಸಂಘದಿಂದ ಇದೇ 12
ಮತ್ತು 13ರಂದು ಬ್ರಿಗೇಡ್ ರಸ್ತೆ ಯಲ್ಲಿರುವ ಸೇಂಟ್ ಪ್ಯಾಟ್ರಿಕ್ ಚರ್ಚ್‌ನಲ್ಲಿ ಕ್ರಿಸ್‌ಮಸ್
ಬಜಾರ್ ಆಯೋಜಿಸಲಾಗುತ್ತಿದೆ.
ಮಹಿಳಾ ಉದ್ಯಮಿಗಳು ತಯಾರಿಸಿದ ಎಕ್ಸ್–ಮಾಸ್, ಟೆರ್‍ರಾಕೋಟ, ಆಭರಣಗಳು, ಹ್ಯಾಂಡ್
ಮೇಡ್ ಸೋಪ್ ಮತ್ತು ಮೊಂಬತ್ತಿಗಳು, ಸೀರೆಗಳು, ಕೇಕ್ ಸೇರಿದಂತೆ ಅನೇಕ ವಸ್ತುಗಳ ಪ್ರದರ್ಶನ ಹಾಗೂ ಮಾರಾಟ ಬೆಳಿಗ್ಗೆ 10ರಿಂದ ಸಂಜೆ 7 ಗಂಟೆಯವರೆಗೆ ಇರಲಿದೆ ಎಂದು ಪ್ರಕಟಣೆ
ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.