ಬಂಧನ
(ಪ್ರಾತಿನಿಧಿಕ ಚಿತ್ರ)
ಬೆಂಗಳೂರು: ಸ್ಟೀಲ್ ಕಾಯಿಲ್‌ರೋಲ್ ಕಳ್ಳತನ ಮಾಡಿ ಪರಾರಿ ಆಗಿದ್ದ ಆರೋಪಿಯನ್ನು ಜಾಲಹಳ್ಳಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಸಾಯಿಕುಮಾರ್ (38) ಬಂಧಿತ ಆರೋಪಿ.
ಬಳ್ಳಾರಿ ಜಿಲ್ಲೆಯ ಜಿಂದಾಲ್ ಕಂಪನಿಯಿಂದ ತಮಿಳುನಾಡಿಗೆ ₹ 27.10 ಲಕ್ಷ ಮೌಲ್ಯದ ಸ್ಟೀಲ್ ಕಾಯಿಲ್‍ರೋಲ್ ಸಾಗಣೆ ಮಾಡುತ್ತಿದ್ದ ಚಾಲಕ ಲಾರಿ ಸಮೇತ ಪರಾರಿಯಾಗಿದ್ದ.
ಟ್ರಾನ್ಸ್‌ಪೋರ್ಟ್ ಕಂಪನಿ ವ್ಯವಸ್ಥಾಪಕ ಮುತ್ತು ಇರುಲಪ್ಪನ್ ಅವರು ಜೂನ್ 26ರಂದು ಜಾಲಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರು ಆಧರಿಸಿ ಆರೋಪಿಯನ್ನು ಬಂಧಿಸಲಾಯಿತು ಎಂದು ಪೊಲೀಸರು ಹೇಳಿದರು.
ತಮಿಳುನಾಡಿನ ವೆಂಕಟರಮಣ ಟ್ರಾನ್ಸ್‌ಪೋರ್ಟ್ ಕಂಪನಿಯ ಚಾಲಕ ಸಾಯಿಕುಮಾರನನ್ನು ಎರಡು ತಿಂಗಳ ಹಿಂದೆ ಚಾಲಕನಾಗಿ ನೇಮಕ ಮಾಡಿಕೊಳ್ಳಲಾಗಿತ್ತು. ಬಳ್ಳಾರಿ ಜಿಲ್ಲೆಯ ತೋರಣಗಲ್‍ನಿಂದ ತಮಿಳುನಾಡಿನ ಕೋಯಮತ್ತೂರು ಕಾರ್ಖಾನೆಗೆ 33,683 ಟನ್ ತೂಕದ 3 ಸ್ಟೀಲ್ ಕಾಯಿಲ್ ತರುವಂತೆ ಹೇಳಲಾಗಿತ್ತು. ಚಾಲಕ ಲಾರಿ ಸಮೇತ ನಾಪತ್ತೆಯಾಗಿದ್ದ ಎಂದು ಪೊಲೀಸರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.