ADVERTISEMENT

ಸಂಚಾರ ದಟ್ಟಣೆ: ದೇಶದಲ್ಲಿ ಬೆಂಗಳೂರು ಮೊದಲು

ಟಾಮ್ ಟಾಮ್ 2023ರ ವರದಿ * 10 ಕಿ.ಮೀ ಸಂಚರಿಸಲು ಬೇಕಾಗುವ ಸರಾಸರಿ ಸಮಯ 28 ನಿಮಿಷ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2024, 0:30 IST
Last Updated 4 ಫೆಬ್ರುವರಿ 2024, 0:30 IST
<div class="paragraphs"><p>ಜೆ.ಸಿ. ರಸ್ತೆಯಲ್ಲಿ ಉಂಟಾಗಿದ್ದ ದಟ್ಟಣೆ</p></div>

ಜೆ.ಸಿ. ರಸ್ತೆಯಲ್ಲಿ ಉಂಟಾಗಿದ್ದ ದಟ್ಟಣೆ

   

–  ಪ್ರಜಾವಾಣಿ ಚಿತ್ರ/ ಪ್ರಶಾಂತ್ ಎಚ್.ಜಿ.

ಬೆಂಗಳೂರು: 2023ರಲ್ಲಿ ಅತಿ ಹೆಚ್ಚು ಸಂಚಾರ ದಟ್ಟಣೆ ಉಂಟಾಗಿದ್ದ ಭಾರತದ ನಗರಗಳ ಪಟ್ಟಿಯಲ್ಲಿ ಬೆಂಗಳೂರು ಮೊದಲ ಸ್ಥಾನದಲ್ಲಿದೆ. ವಿಶ್ವದ ನಗರಗಳ ಪಟ್ಟಿಯಲ್ಲಿ 6ನೇ ಸ್ಥಾನ ಪಡೆದುಕೊಂಡಿದೆ.

ADVERTISEMENT

ವಿಶ್ವ ಹಾಗೂ ಭಾರತದ ಸಂಚಾರ ದಟ್ಟಣೆ ಬಗ್ಗೆ ಅಧ್ಯಯನ ನಡೆಸಿದ್ದ ಲಂಡನ್‌ನ ‘ಟಾಮ್ ಟಾಮ್’ ಸಂಸ್ಥೆಯು 2023ನೇ ಸಾಲಿನ ವರದಿಯನ್ನು ಬಿಡುಗಡೆ ಮಾಡಿದೆ.

ಕೇಂದ್ರ ವಾಣಿಜ್ಯ ಪ್ರದೇಶ (ಸಿಬಿಡಿ) ಹಾಗೂ ಇತರೆ ಪ್ರದೇಶಗಳಲ್ಲೂ ಅತಿ ಹೆಚ್ಚು ದಟ್ಟಣೆ ಉಂಟಾಗಿದ್ದ ನಗರಗಳ ಪಟ್ಟಿಯಲ್ಲಿ ಬೆಂಗಳೂರು ಮೊದಲ ಸ್ಥಾನದಲ್ಲಿದೆ. ಪುಣೆ, ನವದೆಹಲಿ, ಮುಂಬೈ ಕ್ರಮವಾಗಿ ಎರಡು, ಮೂರು ಹಾಗೂ ನಾಲ್ಕನೇ ಸ್ಥಾನದಲ್ಲಿವೆ.

ವಿಶ್ವದ ನಗರಗಳ ಪಟ್ಟಿಯ ಸಿಬಿಡಿ ವಿಭಾಗದಲ್ಲಿ ಬೆಂಗಳೂರು 6ನೇ ಸ್ಥಾನ, ಇತರೆ ಪ್ರದೇಶಗಳ ವಿಭಾಗದಲ್ಲಿ 3ನೇ ಸ್ಥಾನ ಪಡೆದುಕೊಂಡಿದೆ.

ಲಂಡನ್, ಡಬ್ಲಿನ್ ಹಾಗೂ ಟೊರ‍ಂಟೊ ನಗರಗಳು ಮೊದಲ, ಎರಡನೇ ಹಾಗೂ ಮೂರನೇ ಸ್ಥಾನದಲ್ಲಿವೆ. ಟಾಮ್ ಟಾಮ್ ಸಂಸ್ಥೆಯ ಪ್ರತಿನಿಧಿಗಳು 55 ದೇಶಗಳ 387 ನಗರಗಳಲ್ಲಿ ಅಧ್ಯಯನ ನಡೆಸಿ ವರದಿ ಸಿದ್ಧಪಡಿಸಿದ್ದಾರೆ.

2ನೇ ಸ್ಥಾನದಿಂದ 6ನೇ ಸ್ಥಾನಕ್ಕೆ

2022ರಲ್ಲಿ ವಿಶ್ವದ ನಗರಗಳ ಸಿಬಿಡಿ ವಿಭಾಗದ ಪಟ್ಟಿಯಲ್ಲಿ ಬೆಂಗಳೂರು 2ನೇ ಸ್ಥಾನದಲ್ಲಿತ್ತು. ಈ ಬಾರಿ 6ನೇ ಸ್ಥಾನಕ್ಕೆ ಬಂದಿದೆ. ಜೊತೆಗೆ, 2022ಕ್ಕೆ ಹೋಲಿಸಿದರೆ 2023ರಲ್ಲಿ ದಟ್ಟಣೆ ಸಂದರ್ಭದ ಪ್ರಯಾಣದ ಅವಧಿ 1 ನಿಮಿಷ ಕಡಿಮೆಯಾಗಿದೆ.

ಬೆಂಗಳೂರಿನಲ್ಲಿ 2022ರಲ್ಲಿ ಪ್ರತಿ ಗಂಟೆಗೆ 14 ಕಿ.ಮೀ ಸಂಚರಿಸಲು ಸಾಧ್ಯವಾಗುತ್ತಿತ್ತು. ಆದರೆ, 2023ರಲ್ಲಿ ಪ್ರತಿ ಗಂಟೆಗೆ 18 ಕಿ.ಮೀ ಸಂಚಾರಕ್ಕೆ ಅವಕಾಶ ಸಿಕ್ಕಿದೆ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.