ADVERTISEMENT

ರಸ್ತೆ ಗುಂಡಿಗಳ ವಿಶ್ಲೇಷಣೆಗೆ ‘ಸ್ಮಾರ್ಟ್‌ ಆರ್‌ಐ’

ನೆಲವನ್ನು ಅಗೆಯದೆ ರಸ್ತೆಯ ಕೆಳಗಿನ ಪೈಪ್‌ಲೈನ್‌ ಸ್ಥಿತಿಗತಿ ಅರಿಯುವ ತಂತ್ರಜ್ಞಾನ

ಗುರು ಪಿ.ಎಸ್‌
Published 19 ನವೆಂಬರ್ 2019, 2:09 IST
Last Updated 19 ನವೆಂಬರ್ 2019, 2:09 IST
ಲೇಸರ್‌ ತಂತ್ರಜ್ಞಾನದಡಿ ರಸ್ತೆಯನ್ನು ಸ್ಕ್ಯಾನ್‌ ಮಾಡುವ ಸಾಂಕೇತಿಕ ಚಿತ್ರ
ಲೇಸರ್‌ ತಂತ್ರಜ್ಞಾನದಡಿ ರಸ್ತೆಯನ್ನು ಸ್ಕ್ಯಾನ್‌ ಮಾಡುವ ಸಾಂಕೇತಿಕ ಚಿತ್ರ   

ಬೆಂಗಳೂರು: ಪದೇ ಪದೇ ರಸ್ತೆ ಅಗೆಯುವುದನ್ನು ತಪ್ಪಿಸಲು, ರಸ್ತೆಯ ಕಳಪೆ ಕಾಮಗಾರಿ ಪತ್ತೆ ಹಚ್ಚಲು ಹೊಸ ತಂತ್ರಜ್ಞಾನವೊಂದನ್ನು ಡಾಟಾ ಕಲೆಕ್ಷನ್‌ ಇನ್ಫೊಟೆಕ್‌ ಇಂಡಿಯಾ ಕಂಪನಿ (ಡಿಸಿಐಎಲ್‌) ಅಭಿವೃದ್ಧಿಪಡಿಸಿದೆ. ಲಭ್ಯವಿರುವ ದತ್ತಾಂಶಗಳನ್ನು ವಿಶ್ಲೇಷಿಸಿ ಪರಿಹಾರ ಒದಗಿಸುವ ಕಾರ್ಯವನ್ನು ಕಂಪನಿ ಮಾಡುತ್ತಿದೆ.

ಈ ರಸ್ತೆಯಲ್ಲಿ ಇಂತಿಷ್ಟೇ ಗುಂಡಿಗಳಿವೆ. ಆ ಮುಖ್ಯರಸ್ತೆಯಲ್ಲಿನ ಸರ್ಕಲ್‌ ಬಳಿ ಇರುವ ಗುಂಡಿ ಇಷ್ಟು ಅಡಿ ಆಳವಿದೆ. ನಿರ್ಮಾಣವಾಗುತ್ತಿರುವ ಕಟ್ಟಡದ ಯಾವ ಭಾಗ ಕಳಪೆಯಾಗಿದೆ ಎಂಬುದನ್ನು ಲೇಸರ್‌ ತಂತ್ರಜ್ಞಾನದ ಆಧಾರದ ಮೇಲೆ ಕಂಪನಿ ಪತ್ತೆ ಹಚ್ಚುತ್ತದೆ. ರಸ್ತೆಯ ಕೆಳಭಾಗದಲ್ಲಿ ಅಥವಾ ಭೂಮಿಯ ಅಡಿಯಲ್ಲಿ ಇರುವ ಕೊಳವೆ ಬಾವಿಗಳು ಅಥವಾ ಪೈಪ್‌ಲೈನ್‌ಗಳು ಹಾಳಾಗಿದ್ದರೆ ಅಥವಾ ಸೋರುತ್ತಿದ್ದರೆ ಭೂಮಿಯನ್ನು ಅಗೆಯದೆ ಇದನ್ನು ಪತ್ತೆ ಹಚ್ಚಬಹುದು. ಅಂದರೆ, ಮನುಷ್ಯನ ದೇಹವನ್ನು ಸ್ಕ್ಯಾನ್‌ ಮಾಡಿ ವಿಶ್ಲೇಷಿಸುವಂತೆ, ರಸ್ತೆಯನ್ನು ಸ್ಕ್ಯಾನ್‌ ಮಾಡಿ ವಿಶ್ಲೇಷಿಸಲಾಗುತ್ತದೆ.

‘ಅಮೆರಿಕ, ಇಂಗ್ಲೆಂಡ್‌ನಲ್ಲಿ ಈ ಸೇವೆಯನ್ನು ಕಂಪನಿ ಒದಗಿಸುತ್ತಿದೆ. ಅಲ್ಲಿಯ ಸರ್ಕಾರಗಳೊಂದಿಗೆ ಒಪ್ಪಂದ ಮಾಡಿಕೊಂಡಿರುವ ಕಂಪನಿ ಈ ಸೇವೆಗಳನ್ನು ಒದಗಿಸುತ್ತಿದೆ. ತುಮಕೂರು ಮಹಾನಗರ ಪಾಲಿಕೆ ನಗರ ಯೋಜನೆ ವಿಭಾಗದವರಿಗೆ ಸಂಪರ್ಕಿಸಿದ್ದು, ಅವರಿಗೆ ಸೇವೆ ಒದಗಿಸಲಿದ್ದೇವೆ. ಎಂದು ಡಿಸಿಐಎಲ್‌ ಕಂಪನಿಯ ಉದ್ಯೋಗಿ ಸಾಧನಾ ತಿಳಿಸಿದರು.

ADVERTISEMENT

ಡ್ರೋನ್‌ ಮೂಲಕ ಸೆರೆ ಹಿಡಿದ ಚಿತ್ರಗಳ ಆಧಾರದ ಮೇಲೆ ರಸ್ತೆ ಅಥವಾ ಕಟ್ಟಡದ ವಿಶ್ಲೇಷಣೆಯನ್ನು ಕಂಪನಿ ಮಾಡುತ್ತದೆ. ಸಂಪರ್ಕಕ್ಕೆ, 080–28367642.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.