ಬಂಧನ
ಬೆಂಗಳೂರು: ಸುತ್ತಿಗೆಯಿಂದ ಹಲ್ಲೆ ನಡೆಸಿ, ಟೈಲ್ಸ್ ಕಾರ್ಮಿಕರೊಬ್ಬರನ್ನು ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿಯನ್ನು ವರ್ತೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬಿಹಾರದ ಸೀತಾರಾಮ್ ಬಂಧಿತ ಕೂಲಿ ಕಾರ್ಮಿಕ. ಕೊಲೆಯಾದ ಜಿತೇಂದ್ರ ಅಲಿಯಾಸ್ ಬಬ್ಲು ಹಾಗೂ ಆರೋಪಿ ಸೀತಾರಾಮ್ ಬಿಹಾರದವರಾಗಿದ್ದು, ಬೆಂಗಳೂರಿನಲ್ಲಿ ಟೈಲ್ಸ್ ಕೆಲಸ ಮಾಡುತ್ತಿದ್ದರು.
‘ವರ್ತೂರಿನ ರಾಮಗೊಂಡನಹಳ್ಳಿ ಖಾಸಗಿ ಶಾಲೆ ಕಟ್ಟಡದಲ್ಲಿ ಇಬ್ಬರೂ ಕೆಲಸ ಮಾಡುತ್ತಿದ್ದರು. ಈ ವೇಳೆ ವಿಮಲ್ ಗುಟ್ಕಾ ತರುವಂತೆ ಜಿತೇಂದ್ರಗೆ ಆರೋಪಿ ಹೇಳಿದ. ಕಿರಿಯನಾದರೂ ನನಗೆ ಕೆಲಸ ಹೇಳುತ್ತಾನೆಂದು ಸೀತಾರಾಮ್ ಕೋಪಗೊಂಡಿದ್ದ. ಜುಲೈ 28ರಂದು ರಾತ್ರಿ ಇಬ್ಬರೂ ಮದ್ಯ ಸೇವಿಸಿದ್ದಾರೆ. ವಿಮಲ್ ತರುವ ವಿಚಾರಕ್ಕೆ ಗಲಾಟೆ ನಡೆದು, ಆರೋಪಿ ಸುತ್ತಿಗೆಯಿಂದ ತಲೆಗೆ ಹೊಡೆದು, ಕೊಲೆ ಮಾಡಿ ಪರಾರಿಯಾಗಿದ್ದ’ ಎಂದು ಪೊಲೀಸರು ತಿಳಿಸಿದ್ದಾರೆ.
ಮಾರನೆಯ ದಿನ ಕೆಲಸಕ್ಕೆ ಬಂದ
ಕಾರ್ಮಿಕರಿಗೆ ಕೊಲೆ ವಿಚಾರ ಗೊತ್ತಾಯಿತು. ಪ್ರಕರಣ ದಾಖಲಿಸಿ
ಕೊಂಡು, ಪರಾರಿಯಾಗಿದ್ದ ಆರೋಪಿ
ಯನ್ನು ಪತ್ತೆ ಮಾಡಿ, ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.