ADVERTISEMENT

ನಗರದಲ್ಲಿ ಇಂದು: ಬೆಂಗಳೂರಲ್ಲಿ ಈ ದಿನದ ಕಾರ್ಯಕ್ರಮಗಳು

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2026, 20:44 IST
Last Updated 21 ಫೆಬ್ರುವರಿ 2026, 20:44 IST
   

ರಾಮಕೃಷ್ಣರ ಜಯಂತಿ ಅಂಗವಾಗಿ ವಿಶೇಷ ಭಜನೆಗಳು: ಬೆಳಿಗ್ಗೆ 6ಕ್ಕೆ ವೇದ ಹಾಗೂ ಸ್ತೋತ್ರ ಪಠಣ, ಬೆಳಿಗ್ಗೆ 7ರಿಂದ ಭಜನೆಗಳು: ಸೀತಾರಾಮ ಭಜನಾ ಮಂಡಳಿ, ಶಾರದಾ ಸತ್ಸಂಗ ಕೇಂದ್ರ, ಶಾಂತಲಾ ಭಜನಾ ಮಂಡಳಿ, ವೀರಾಂಜನೇಯ ಭಜನಾ ಮಂಡಳಿ, ಪ್ರವಚನ, ಆರತಿ ಹಾಗೂ ಪ್ರಸಾದ ವಿನಿಯೋಗ, ವಿಶ್ವ ಹಿಂದೂ ಪರಿಷದ್ ಭಜನಾ ಮಂಡಳಿ, ಸೌಂದರ್ಯ ಲಹರಿ ಭಜನಾ ಮಂಡಳಿ, ಶ್ರೀರಾಮ ಮಂದಿರ ಭಜನಾ ಮಂಡಳಿ, ಕಾಮಾಕ್ಷಿ ಭಜನಾ ಮಂಡಳಿ, ಪ್ರವಚನ, ರಾಮಕೃಷ್ಣ ಆರತಿ ಮತ್ತು ಭಜನೆ: ಕೆ. ಗುರುರಾಜ್, ಆಯೋಜನೆ ಮತ್ತು ಸ್ಥಳ: ರಾಮಕೃಷ್ಣ ಮಠ, ಸ್ವಾಮಿ ವಿವೇಕಾನಂದ ರಸ್ತೆ, ಹಲಸೂರು.

ತ್ಯಾಗರಾಜ, ಪುರಂದರ ಮತ್ತು ಕನಕದಾಸರ ಆರಾಧನಾ ಮಹೋತ್ಸವ: ಆಯೋಜನೆ: ಶ್ರೀ ತ್ಯಾಗರಾಜ ಗಾನಸಭಾ ಟ್ರಸ್ಟ್, ಸ್ಥಳ: ಬಾಲಮೋಹನ ವಿದ್ಯಾಮಂದಿರ, ರಾಜಾಜಿನಗರ, ಬೆಳಿಗ್ಗೆ 7ರಿಂದ 

ಡಾ.ಕೆ.ಶಿವರಾಮ ಕಾರಂತರ ಬದುಕು–ಬರಹ: ಅಧ್ಯಕ್ಷತೆ: ಎನ್. ಕೃಷ್ಣಪ್ಪ, ಅತಿಥಿಗಳು: ಸುನಿತಾ ಬಿ.ವಿ., ಅಜ್ಜಂಪುರ ಎಸ್. ಶೃತಿ, ಆಯೋಜನೆ: ಶ್ರೀ ಕನ್ನಡ ಕಸ್ತೂರಿ ಸಂಘ, ಸ್ವಾಮಿ ವಿವೇಕಾನಂದ ಅಭ್ಯುದಯ ಪ್ರತಿಷ್ಠಾನ, ಸ್ಥಳ: ನ್ಯಾಯಾಂಗ ಇಲಾಖೆ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದ ಕಟ್ಟಡ, ಎಂಟನೇ ಮುಖ್ಯರಸ್ತೆ, ನ್ಯಾಯಾಂಗ ಬಡಾವಣೆ, ಬೆಳಿಗ್ಗೆ 9.50

ADVERTISEMENT

ಗಾಯನ, ಹಾಸ್ಯ, ರಸಪ್ರಶ್ನೆ, ಕವಿಗೋಷ್ಠಿ: ಅಧ್ಯಕ್ಷತೆ: ಸದಾನಂದ, ಅತಿಥಿಗಳು: ಆರ್. ಸದಾಶಿವಯ್ಯ ಜರಗನಹಳ್ಳಿ, ಎಚ್.ಎಸ್. ಪರಮೇಶ್, ಡಿ.ಎಂ. ದಯಾನಂದ, ಆಯೋಜನೆ: ಸಹಮತ, ಸ್ಥಳ: ನಂ. 323, ಹೇಮ ಸದನ, ಸಹಕಾರ ನಗರ, ಬೆಳಿಗ್ಗೆ 10

ಉಪನ್ಯಾಸ, ಕವಿಗೋಷ್ಠಿ, ಕರೋಕೆ ಗಾಯನ, ರಸಪ್ರಶ್ನೆ ಕಾರ್ಯಕ್ರಮ: ಅಧ್ಯಕ್ಷತೆ: ಕಾಶೀನಾಥ ಹಂದ್ರಾಳ, ಅತಿಥಿಗಳು: ಶರತ್‌ ಚಂದ್ರ, ಬಿ. ಶಾಂತಕುಮಾರ್, ಆಯೋಜನೆ: ಕಲಾಚಂದಿರ ಕಲಾಮಂದಿರ ಟ್ರಸ್ಟ್‌, ಸ್ಥಳ: ಜೈಪ್ರದ ಗಾನಲಹರಿ ಆಡಿಟೋರಿಯಂ, ಸ್ವಾತಂತ್ರ್ಯ ಯೋಧರನಗರ, ಬೆಳಿಗ್ಗೆ 10.30

ಎಂ.ಜಿ. ಹೆಗಡೆ ಅವರ ‘ಭಾರತ ಮುಸ್ಲಿಂ ರಾಷ್ಟ್ರ ಆಗುವುದೇ?’ ಪುಸ್ತಕ ಬಿಡುಗಡೆ: ವಿ.ಎಸ್. ಉಗ್ರಪ್ಪ, ಅತಿಥಿಗಳು: ಬಿ.ಎಂ. ಹನೀಫ್, ಶಿವಸುಂದರ್, ಸುಧಾಕರ ಬನ್ನಂಜೆ, ವಿಮಲಾ ಕೆ.ಎಸ್., ಸ್ವಯಂಪ್ರಕಾಶ ಭಟ್, ಆಯೋಜನೆ: ಎಂ.ಜಿ. ಹೆಗಡೆ ಗೆಳೆಯರ ಬಳಗ, ಸ್ಥಳ: ಗಾಂಧಿ ಭವನ, ಕುಮಾರ ಕೃಪಾ ರಸ್ತೆ, ಬೆಳಿಗ್ಗೆ 10.30

ಅರಸು–60: ಅತಿಥಿಗಳು: ಪ.ಸ. ಕುಮಾರ್, ಎಂ.ಎಸ್. ಮೂರ್ತಿ, ಡಿ.ಬಿ. ಮಲ್ಲಿಕಾರ್ಜುನಸ್ವಾಮಿ ಮಹಾಮನೆ, ಬಿ.ಎಂ. ವೆಂಕಟೇಶ್, ಎಸ್. ತಿರುಣಾವುಕರಸು, ಆಯೋಜನೆ: ಕಲಾಮಂದಿರ ಕಲಾ ಶಾಲೆಯ ಹಳೆಯ ವಿದ್ಯಾರ್ಥಿಗಳು ಹಾಗೂ ಸ್ನೇಹಿತರು, ಸ್ಥಳ: ವರ್ಣ ಆರ್ಟ್‌ ಗ್ಯಾಲರಿ, ಕನ್ನಡ ಭವನ, ಜೆ.ಸಿ. ರಸ್ತೆ, ಬೆಳಿಗ್ಗೆ 10.30

ನಾದೋಪಾಸನ, ಸಂಗೀತ ಸಾಹಿತ್ಯದ ಹಬ್ಬ, ಪಿ.ವಿ.ಎನ್. ಸ್ಮರಣೆ, ಪುಸ್ತಕ ಬಿಡುಗಡೆ: ನಾಂದಿ ಗಮಕ ವಾಚನ: ಎಂ.ಆರ್. ಸತ್ಯನಾರಾಯಣ, ಕೊಳಲು ವಾದನ: ಶಶಾಂಕ್ ಚಿನ್ಯ, ವ್ಯಾಖ್ಯಾನ: ಸಂತೋಷ್ ಭಾರದ್ವಾಜ್, ಶ್ಯಾಮಲಾ ಪ್ರಕಾಶ್ ಅವರು ಸಂಪಾದಿಸಿದ ‘ಆರೋಹಣ’ ಪುಸ್ತಕ ಬಿಡುಗಡೆ: ಧೃತಿ ಭಾರದ್ವಾಜ್, ಅಧ್ಯಕ್ಷತೆ: ಬೈರಮಂಗಲ ರಾಮೇಗೌಡ, ಸ್ಥಳ: ಬಿ.ಎಂ.ಶ್ರೀ ಕಲಾಭವನ, ಬಿ.ಎ.ಶ್ರೀ ಪ್ರತಿಷ್ಠಾನ, ಎನ್.ಆರ್. ಕಾಲೊನಿ, ಬೆಳಿಗ್ಗೆ 10.30

ಅನಿತಾಕೌಲ್‌ ಸ್ಮರಣೆ ‘ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ’ ಪ್ರದಾನ: ಎಲ್.ಎನ್. ಮುಕುಂದರಾಜ್, ಅತಿಥಿಗಳು: ಎಲ್.ಕೆ. ಅತೀಕ್, ಶಿಲ್ಪಾನಾಗ್, ಅಧ್ಯಕ್ಷತೆ: ಆರ್.ಎನ್. ರಾಜಾನಾಯಕ್, ಪ್ರಾಸ್ತಾವಿಕ ನುಡಿ: ಈ. ಬಸವರಾಜು, ಆಯೋಜನೆ: ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ, ಸ್ಥಳ: ಬಿಎಂಎಸ್ ಎಂಜಿನಿಯರಿಂಗ್ ಕಾಲೇಜು, ಬಸವನಗುಡಿ, ಬೆಳಿಗ್ಗೆ 11

ತಿಂಗಳ ತೇರು: ಮ್ಯಾಂಡೋಲಿನ್‌: ವಿಷ್ಣು ವೆಂಕಟೇಶ್, ಘಟ: ಕೃಷ್ಣಪ್ರಸಾದ್, ಮೃದಂಗ: ಕಿರಣ್‌ಕುಮಾರ್, ಪಿಟೀಲು: ಶಂಕರ್ ರಾಜನ್ ಮಹದೇವನ್, ಆಯೋಜನೆ: ಭಾರತೀಯ ಕರ್ನಾಟಕ ಸಂಘ, ಸ್ಥಳ: ಕಬಿನಿ ಸಭಾಂಗಣ, ಮೂರನೇ ಮಹಡಿ, ಇಂದಿರಾನಗರ ಕ್ಲಬ್‌, ಎಚ್‌ಎಎಲ್ ಮೂರನೇ ಹಂತ, ಮಧ್ಯಾಹ್ನ 3.30

ವಿಶೇಷ ಪ್ರವಚನ: ಆಯೋಜನೆ ಮತ್ತು ಸ್ಥಳ: ಸತ್ಯಸಾಯಿ ಆಶ್ರಮ, ಸಾಯಿ ರಮೇಶ್ ಹಾಲ್, ಬೃಂದಾವನ, ಕಾಡುಗೋಡಿ, ವೈಟ್‌ಫೀಲ್ಡ್‌, ಸಂಜೆ 4ರಿಂದ 

26ನೇ ವಾರ್ಷಿಕೋತ್ಸವ ಸಂಭ್ರಮ, ಪುರಂದರದಾಸರು, ಕನಕದಾಸರು, ತ್ಯಾಗರಾಜರ ಆರಾಧನಾ ಮಹೋತ್ಸವ, ‘ಬೆಳಗೆರೆ ಮಹಾಲಕ್ಷ್ಮಮ್ಮ ಸ್ಮರಣಾರ್ಥ ಪ್ರಶಸ್ತಿ’ ಪ್ರದಾನ: ಪ್ರಶಸ್ತಿ ಸ್ವೀಕರಿಸುವವರು: ತಿಮ್ಮಣ್ಣ ರಾಮಕೃಷ್ಣ ಭಟ್ಟ ಬಾಲೀಗದ್ದೆ, ಅತಿಥಿಗಳು: ಆರ್. ವಸಂತಕುಮಾರ ಶಾಸ್ತ್ರಿ, ಶ್ರೀಧರ ಎನ್. ಭಟ್ಟ, ಅಧ್ಯಕ್ಷತೆ: ಆರ್.ಕೆ. ಪದ್ಮನಾಭ, ‘ಶ್ರೀರಾಮ ಚರಿತ್ರೆ ದಶಾವತಾರ’ ನೃತ್ಯ ವೈಭವ: ಮಮತಾ ಓಜಾ, ಮಾನಸಿ ಪ್ರಿಯದರ್ಶಿನಿ, ಧರಾಶ್ರೀ ಮಹಾರಾಣಾ, ಆಯೋಜನೆ: ಶ್ರೀ ರಾಘವೇಂದ್ರ ಸಂಗೀತ ಸೇವಾ ಪ್ರತಿಷ್ಠಾನ, ಸ್ಥಳ: ದೇವಗಿರಿ ವೆಂಕಟೇಶ್ವರ ಟ್ರಸ್ಟ್, ದೇವಗಿರಿ ವೆಂಕಟೇಶ್ವರ ದೇವಸ್ಥಾನ, ದಿವಂಗತ ವೆಂಕೋಬಾಚಾರ್ಯ, ಸ್ಮೃತಿ ಮಂಟಪ, ಸಂಜೆ 5ರಿಂದ 

ಗಿರೀಶ್ ಕಾಸರವಳ್ಳಿ ಅವರ ಚಲನ ಚಿತ್ರೋತ್ಸವ–2026: ಅತಿಥಿಗಳು: ಜಯಮಾಲಾ, ಎನ್. ಮನು ಚಕ್ರವರ್ತಿ, ಉಪಸ್ಥಿತಿ: ಗಿರೀಶ್ ಕಾಸರವಳ್ಳಿ, ‘ತಾಯಿ ಸಾಹೇಬ’ ಚಲನಚಿತ್ರ ಪ್ರದರ್ಶನ, ಆಯೋಜನೆ: ಸ್ಟೇಜ್‌ ಬೆಂಗಳೂರು, ಸ್ಥಳ: ಕೆ.ವಿ. ಸುಬ್ಬಣ್ಣ ಆಪ್ತ ರಂಗಮಂದಿರ, ಕುಮಾರಸ್ವಾಮಿ ಲೇಔಟ್‌, ಸಂಜೆ 5

ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿ: ಗಾಯನ: ಟಿ.ವಿ. ರಾಮಪ್ರಸಾದ್, ಪಿಟೀಲು: ಟಿ.ಕೆ.ವಿ. ರಾಮಾನುಜಾಚಾರ್ಯಲು, ಮೃದಂಗ: ಬಿ.ಸಿ. ಮಂಜುನಾಥ್, ಖಂಜೀರಾ: ವ್ಯಾಸ ವಿಠಲ, ಆಯೋಜನೆ ಮತ್ತು ಸ್ಥಳ: ಬೆಂಗಳೂರು ಗಾಯನ ಸಮಾಜ, ಕೆ.ಆರ್. ರಸ್ತೆ, ಸಂಜೆ 5.30

ಹರಿನಾಮ ಸಂಕೀರ್ತನೆ: ರಮ್ಯಾ ಸುಧೀರ್, ಕೀ–ಬೋರ್ಡ್: ಅಮಿತ್ ಶರ್ಮಾ, ತಬಲಾ: ಸೋಮಶೇಖರ್, ಆಯೋಜನೆ ಮತ್ತು ಸ್ಥಳ: ರಾಘವೇಂದ್ರ ಸ್ವಾಮಿ ಮಠ, ಆರನೇ ಮುಖ್ಯರಸ್ತೆ, ಬಿಇಎಲ್ ಲೇಔಟ್‌, ಮೂರನೇ ಬ್ಲಾಕ್, ವಿದ್ಯಾರಣ್ಯಪುರ, ಸಂಜೆ 5.30 

‘ಪರಮ್ ವಿಹಾರ’ ಸಂಗೀತ–ನೃತ್ಯದ ಸಾಂಸ್ಕೃತಿಕ ಸಂಜೆ: ಸುಗಮ ಸಂಗೀತ: ಸ್ಕಂದೇಶ್ ತಂಡ, ಕಥಕ್ ನೃತ್ಯ ಪ್ರದರ್ಶನ: ಸಾತ್ತ್ವತಿ ಸ್ಕೂಲ್‌ನ ವಿದ್ಯಾರ್ಥಿಗಳು, ಆಯೋಜನೆ: ಪರಮ್ ಫೌಂಡೇಷನ್, ಸ್ಥಳ: ಅಬಲಾಶ್ರಮ, ಬಸವನಗುಡಿ, ಸಂಜೆ 6ರಿಂದ 

‘ಗಿರಿಧಾರ’ ಭರತನಾಟ್ಯ ಪ್ರದರ್ಶನ: ಆಯೋಜನೆ: ಸ್ವರವಿ ಆರ್ಟ್ಸ್‌ ಫೌಂಡೇಷನ್, ಸ್ಥಳ: ದಯಾನಂದಸಾಗರ್ ಆಡಿಟೋರಿಯಂ, ಸಂಜೆ 6

ಕಲಾ ರಂಗೋತ್ಸವ: ಸಾನ್ನಿಧ್ಯ: ಎಂ. ಅನಂತಮೂರ್ತಿ, ಉದ್ಘಾಟನೆ: ಮಹೇಂದ್ರ ಮುನ್ನೋತ್‌, ಅಧ್ಯಕ್ಷತೆ: ದತ್ತುಗುರು ಹೆಗಡೆ, ಆಯೋಜನೆ: ಕಲಾ ರಂಗಲೋಕ, ಸ್ಥಳ: ಉದಯಭಾನು ಕಲಾಸಂಘ, ಗವಿಪುರ, ಸಂಜೆ 6

ಹೊನ್ನಾರು ರಂಗೋತ್ಸವ: ‘ಭಗವಂತನ ಮರಣ’ ನಾಟಕ ಪ್ರದರ್ಶನ: ನಿರ್ದೇಶನ: ಸ್ಯಾಮ್‌ಕುಟ್ಟಿ ಪಟ್ಟಂಕರಿ, ರಂಗ ಗೌರವ ಸ್ವೀಕರಿಸುವವರು: ಜೆ.ಸಿ. ಶಶಿಧರ್, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ ಸಂಜೆ 6.30

‘ಮುದ್ದಣ್ಣನ ಪ್ರಮೋಷನ್ ಪ್ರಸಂಗ’ ನಾಟಕ ಪ್ರದರ್ಶನ: ರಚನೆ: ರಾಜೇಂದ್ರ ಕಾರಂತ, ನಿರ್ದೇಶನ: ಬಿ. ಅಶೋಕ್, ಆಯೋಜನೆ: ವಿಶ್ವಪಥ ಕಲಾ ಸಂಗಮ, ಸ್ಥಳ: ಕಲಾಗ್ರಾಮ, ಮಲ್ಲತ್ತಹಳ್ಳಿ, ಸಂಜೆ 6.30

ಉಡುಪ ಸಂಗೀತೋತ್ಸವ: ವೀಣಾ ವಾದನ: ವಿಶ್ವಮೋಹನ ಭಟ್, ಕೊಳಲು: ಶಶಾಂಕ್ ಸುಬ್ರಹ್ಮಣ್ಯ, ಗಾಯನ: ಹರೀಶ ಶಿವರಾಮ ಕೃಷ್ಣನ್, ಡ್ರಮ್ಸ್‌: ದರ್ಶನ್ ದೋಷಿ, ಬಾಸ್ ಗಿಟಾರ್: ಶೆಲ್ಟನ್ ಡಿಸಿಲ್ವಾ, ಪರ್ಕೂಶನ್ಸ್: ಮಂಜುನಾಥ ಸತ್ಯಶೀಲ್, ಕೀ–ಬೋರ್ಡ್: ರಾಹುಲ್ ವಾಡ್ವಾಣಿ, ತಬಲಾ: ಹಿಮಾಂಶು ಮಹಾಂತ, ಆಯೋಜನೆ: ಉಡುಪ ಫೌಂಡೇಷನ್, ಸ್ಥಳ: ಚೌಡಯ್ಯ ಸ್ಮಾರಕ ಸಭಾಂಗಣ, ವೈಯಾಲಿ ಕಾವಲ್, ಮಲ್ಲೇಶ್ವರ, ಸಂಜೆ 7ರಿಂದ 

ಪಂ.ಕೆ.ಪಿ. ಶಿವಲಿಂಗಯ್ಯ ಸಂಸ್ಮರಣಾರ್ಥ ಸಂಸ್ಥಾಪಕರ ದಿನಾಚರಣೆ: ಉದ್ಘಾಟನೆ: ಚಂದ್ರಶೇಖರ್, ‘ಶಿವಲಿಂಗ ಪ್ರಶಸ್ತಿ’ ಪ್ರದಾನ: ಎಸ್.ಜಿ. ಸಿದ್ಧರಾಮಯ್ಯ, ಪ್ರಶಸ್ತಿ ಸ್ವೀಕರಿಸುವವರು: ಸರಸ್ವತಿ ಹೆಗಡೆ, ಅತಿಥಿಗಳು: ಸೋಮಶೇಖರ ಗಾಂಜಿ, ಶಿವಕುಮಾರಸ್ವಾಮಿ ತಡಗ, ಮಹೇಶ್ ಗುಬ್ಬಿ, ಗುರುಪ್ರಸಾದ್ ಕುಚ್ಚಂಗಿ, ಎಸ್. ರುದ್ರಕುಮಾರ್, ಅಧ್ಯಕ್ಷತೆ: ರುದ್ರಪ್ಪ ಫ. ದೇಸಾಯಿ, ಪ್ರಾಸ್ತಾವಿಕ ನುಡಿ: ಎಸ್. ಪಿನಾಕಪಾಣಿ, ಆಯೋಜನೆ: ವಚನ ಜ್ಯೋತಿ ಬಳಗ, ಸ್ಥಳ: ಇಂದಿರಾಗಾಂಧಿ ಕಲಾಕೇಂದ್ರ, ಕೆಂಗುಂಟೆ ವೃತ್ತದ ಬಳಿ, ಮಲ್ಲತ್ತಹಳ್ಳಿ, ಬೆಳಿಗ್ಗೆ 10.15

ಅನೇಕತನ್ ಸುವ್ವಿ ಅವರ ‘ಲೀಗಲ್ ಪರ್ಸನಾಲಿಟೀಸ್ ಲೈಫ್‌ ಆ್ಯಂಡ್‌ ಲೆಸ್ಸಂನ್ಸ್‌’ ಪುಸ್ತಕ ಬಿಡುಗಡೆ: ಎಂ. ವೀರಪ್ಪ ಮೊಯಿಲಿ, ಅಧ್ಯಕ್ಷತೆ: ಎಚ್.ಎನ್. ನಾಗಮೋಹನ ದಾಸ್, ಅತಿಥಿ: ಅನಿಲ್ ಜೋಸೆಫ್ ಪಿಂಟೊ, ಪುಸ್ತಕದ ಕುರಿತು: ಸಂಜನಾ ಎಸ್. ಜೈನ್, ಆಯೋಜನೆ: ಅಂಕೂರ, ಸ್ಥಳ: ಡಾ.ಎಚ್.ಎನ್. ಮಲ್ಟಿಮೀಡಿಯಾ ಹಾಲ್, ನ್ಯಾಷನಲ್ ಕಾಲೇಜು, ಬಸವನಗುಡಿ, ಬೆಳಿಗ್ಗೆ 10.30

ಲಿಂಗತ್ವ ಅಲ್ಪಸಂಖ್ಯಾತರ ಉತ್ಸವ ‘ಒಂದೆಡೆ ರಂಗೋತ್ಸವ’: ಮಧ್ಯಾಹ್ನ 12ಕ್ಕೆ ಉತ್ತರ ಕರ್ನಾಟಕ ಜೋಗಪ್ಪ ತಂಡದಿಂದ ಚೌಡಕಿ ಸ್ತುತಿ, ಮಧ್ಯಾಹ್ನ 1ಕ್ಕೆ ರೂಮಿ ಹರೀಶ್‌ ಅವರಿಂದ ‘ಜರ್ನಿ ಎ ಟು ಇ’ ಏಕವ್ಯಕ್ತಿ ಪ್ರದರ್ಶನ, ಮಧ್ಯಾಹ್ನ 2.30ಕ್ಕೆ ಲಿಂಗತ್ವ ಅಲ್ಪಸಂಖ್ಯಾತ ಸಮುದಾಯದಿಂದ ‘ತಲ್ಕಿ’ ನಾಟಕ ಪ್ರದರ್ಶನ, ಮಧ್ಯಾಹ್ನ 3.30ಕ್ಕೆ ಸಾಂಸ್ಕೃತಿಕ ಗಾಯನ, ಆಯೋಜನೆ: ನ್ಯಾಷನಲ್‌ ಗ್ಯಾಲರಿ ಆಫ್‌ ಮಾಡರ್ನ್‌ ಆರ್ಟ್‌, ಪ್ರವಾಸೋದ್ಯಮ ಸಚಿವಾಲಯ, ಭಾರತೀಯ ಸಾಮಾಜಿಕ ಸಂಸ್ಥೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸಾಹಿತ್ಯ ಅಕಾಡೆಮಿ, ಕರ್ನಾಟಕ ನಾಟಕ ಅಕಾಡೆಮಿ, ‘ಒಂದೆಡೆ’ ಸಂಸ್ಥೆ, ಸ್ಥಳ: ನ್ಯಾಷನಲ್‌ ಗ್ಯಾಲರಿ ಆಫ್‌ ಮಾಡರ್ನ್‌ ಆರ್ಟ್‌, ವಸಂತನಗರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.