ಬೆಂಗಳೂರು: ಬೆಂಗಳೂರು ಜಲ ಮಂಡಳಿಯ ವಿವಿಧ ಉಪ ವಿಭಾಗಗಳಲ್ಲಿ ಆ.14ರ ಬೆಳಿಗ್ಗೆ 9.30ರಿಂದ 11 ಗಂಟೆವರೆಗೆ ನೀರಿನ ಅದಾಲತ್ ಹಮ್ಮಿಕೊಳ್ಳಲಾಗಿದೆ.
ಉತ್ತರ-2-1, ದಕ್ಷಿಣ-1-1, ದಕ್ಷಿಣ-2-1, ನೈರುತ್ಯ -1, ನೈರುತ್ಯ - 4, ಪೂರ್ವ -1-2, ಪೂರ್ವ -2-2, ಆಗ್ನೇಯ - 2, ಆಗ್ನೇಯ – 5, ಪಶ್ಚಿಮ-1-2 ಮತ್ತು ಪಶ್ಚಿಮ-2-2, ಉಪವಿಭಾಗಗಳಲ್ಲಿ ನೀರಿನ ಬಿಲ್, ನೀರು ಮತ್ತು ಒಳಚರಂಡಿ ಸಂಪರ್ಕ ಕಲ್ಪಿಸುವಲ್ಲಿನ ವಿಳಂಬ, ಗೃಹ ಬಳಕೆಯಿಂದ ಗೃಹೇತರ ಬಳಕೆಗೆ ಪರಿವರ್ತನೆ ವಿಳಂಬ ಮತ್ತಿತರ ಕುಂದು ಕೊರತೆಗಳಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಪರಿಹಾರ ನೀಡಲು ಆದಾಲತ್
ನಡೆಸಲಾಗುತ್ತಿದೆ.
ಸಾರ್ವಜನಿಕರು ಕುಂದು ಕೊರತೆಗಳಿಗೆ ಸಂಬಂಧಿಸಿದಂತೆ ಮಂಡಳಿಯ 24/7 ನಿರ್ವಹಣಾ ಕೇಂದ್ರ ದ ಸಹಾಯವಾಣಿ 1916ಕ್ಕೆ ಕರೆ ಮಾಡಿ ದೂರುಗಳನ್ನು ದಾಖಲಿಸಬಹುದು. ವಾಟ್ಸ್ ಆಪ್ ಸಂಖ್ಯೆ 8762228888ಕ್ಕೆ ಸಂದೇಶದ ಮೂಲಕ ದೂರನ್ನು ಸಲ್ಲಿಸಬಹುದಾಗಿದೆ ಎಂದು ಬೆಂಗಳೂರು ಜಲ ಮಂಡಳಿ ಸಂಪರ್ಕಾಧಿಕಾರಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.