ಬೆಂಗಳೂರು: ಸೋಲದೇವನಹಳ್ಳಿ ಎಜಿಬಿ ಲೇಔಟ್‌ನ ಪೇಯಿಂಗ್ ಗೆಸ್ಟ್‌ವೊಂದಕ್ಕೆ ತೆರಳುತ್ತಿದ್ದ ವೈದ್ಯೆಯ ಮೈ-ಕೈ ಮುಟ್ಟಿ ಆರೋಪಿ ಅಸಭ್ಯವಾಗಿ ವರ್ತಿಸಿ, ಪರಾರಿ ಆಗಿದ್ದಾನೆ.
28 ವರ್ಷದ ವೈದ್ಯೆ ನೀಡಿದ ದೂರು ಆಧರಿಸಿ ಆರೋಪಿಯ ಪತ್ತೆಗೆ ವಿಶೇಷ ತಂಡ ರಚಿಸಲಾಗಿದೆ. ಘಟನೆ ನಡೆದ ಸ್ಥಳ ಹಾಗೂ ಸುತ್ತಮುತ್ತಲಿನ ಸಿ.ಸಿ.ಟಿ.ವಿ ಕ್ಯಾಮೆರಾಗಳಲ್ಲಿ ಸೆರೆಯಾದ ದೃಶ್ಯಾವಳಿ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು. ಬುಧವಾರ ತಡರಾತ್ರಿ ಈ ಘಟನೆ ನಡೆದಿದೆ.
‘ರಾತ್ರಿ ಪಾಳಿ ಮುಗಿಸಿ ಆಸ್ಪತ್ರೆಯಿಂದ ಪಿ.ಜಿಯತ್ತ ವೈದ್ಯೆ ನಡೆದು ತೆರಳುತ್ತಿದ್ದರು. ಅದೇ ವೇಳೆ ಬಿಳಿ ಬಣ್ಣದ ಸ್ಕೂಟರ್‌ನಲ್ಲಿ ಬಂದಿದ್ದ ಆರೋಪಿ, ವಿಳಾಸ ಕೇಳುವ ನೆಪದಲ್ಲಿ ವೈದ್ಯೆಯನ್ನು ಮಾತನಾಡಿಸಿದ್ದ. ನಂತರ, ಸ್ಕೂಟರ್‌ನಿಂದ ಇಳಿದು ದೂರುದಾರೆಯ ಮೈ-ಕೈ ಮುಟ್ಟಿ ಅಸಭ್ಯವಾಗಿ ವರ್ತಿಸಿದ್ದ. ವೈದ್ಯೆ ಜೋರಾಗಿ ಕಿರುಚಾಟ ನಡೆಸಿದಾಗ ಅಲ್ಲಿಂದ ಆರೋಪಿ ಪರಾರಿ ಆಗಿದ್ದ’ ಎಂದು ಪೊಲೀಸರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.