ADVERTISEMENT

ಭಗತ್ ಸಿಂಗ್, ರಾಜಗುರು, ಸುಖದೇವ್ ಸ್ಮರಣಾರ್ಥ ರಕ್ತದಾನ ಶಿಬಿರ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2025, 15:35 IST
Last Updated 23 ಮಾರ್ಚ್ 2025, 15:35 IST
<div class="paragraphs"><p>ಭಗತ್ ಸಿಂಗ್, ಸುಖದೇವ್ ಮತ್ತು ರಾಜಗುರು</p></div>

ಭಗತ್ ಸಿಂಗ್, ಸುಖದೇವ್ ಮತ್ತು ರಾಜಗುರು

   

ಕೆ.ಆರ್.ಪುರ: ನೈಜ ರಾಷ್ಟ್ರ ಪ್ರೇಮಿಗಳಾಗಿದ್ದ ಭಗತ್ ಸಿಂಗ್, ರಾಜಗುರು, ಸುಖದೇವ್ ಅವರ ಸ್ಮರಣೆ ಎಲ್ಲರೂ ಮಾಡಬೇಕಿದೆ ಎಂದು ಸಿಲಿಕಾನ್ ಸಿಟಿ ಕಾಲೇಜು ಅಧ್ಯಕ್ಷ ಚಂದ್ರಶೇಖರ್ ಹೇಳಿದರು.

ಭಗತ್ ಸಿಂಗ್, ರಾಜಗುರು, ಸುಖದೇವ್ ಅವರ ಬಲಿದಾನದ ಸ್ಮರಣಾರ್ಥವಾಗಿ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.

ADVERTISEMENT

ಮೂವರು ಸ್ವಾತಂತ್ರ್ಯ ಹೋರಾಟಗಾರರು ಸೈದ್ಧಾಂತಿಕವಾಗಿ ಬಹಳಷ್ಟು ಪ್ರಬುದ್ಧರಾಗಿದ್ದರು. ದೇಶದ ಜನರ ನಾಡಿ ಮಿಡಿತವನ್ನು ಬಲ್ಲವರಾಗಿದ್ದರಿಂದ ಅಗ್ರಮಾನ್ಯ ನಾಯಕರೆನಿಸಿಕೊಂಡಿದ್ದರು. ಶೋಷಣೆ ಇಲ್ಲದ ಸಮಾಜ ಸ್ಥಾಪಿಸಬೇಕೆಂದು ಕನಸು ಕಂಡಿದ್ದರು ಎಂದು ವಿವರಿಸಿದರು.

ರೆಡ್‌ಕ್ರಾಸ್ ಸೊಸೈಟಿ, ರೋಟರ‍್ಯಾಕ್ಟ್ ಕ್ಲಬ್, ರೋಟರಿ ಮಾನ್ಯತಾ ಸಹಯೋಗದಲ್ಲಿ ರಕ್ತದಾನ ಶಿಬಿರ ನಡೆಯಿತು. ಮುಖಂಡ ಬಿ. ಅಮರನಾಥ್ ರೆಡ್ಡಿ, ಕಾಲೇಜು ನಿರ್ದೇಶಕ ಮುಕುಂದ, ಸಿಇಒ ಧನ್ಯತೇಜಸ್, ಭಾನು ಪ್ರದ್ಯುಮ್ನ‌ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.