
ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ
ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಟರ್ಮಿನಲ್‌ಗಳಲ್ಲಿ ಜಾರಿ ಮಾಡಿರುವ ನೂತನ ಪಿಕ್ ಅಪ್ ವ್ಯವಸ್ಥೆ ಕುರಿತ ದೂರುಗಳನ್ನು ಪರಿಶೀಲಿಸಿ ಪ್ರಯಾಣಿಕರಿಗೆ ಅನುಕೂಲಕರ ವಾತಾವರಣ ನಿರ್ಮಿಸಲಾಗುತ್ತಿದೆ ಎಂದು ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್ ತಿಳಿಸಿದೆ.
ಎಲ್ಲ ಅಂತರರಾಷ್ಟ್ರಿಯ ವಿಮಾನ ನಿಲ್ದಾಣಗಳಲ್ಲಿ ಇರುವ ಪದ್ಧತಿಯನ್ನೇ ನಮ್ಮಲ್ಲೂ ಅನುಷ್ಠಾನಗೊಳಿಸಲಾಗಿದೆ. ಹೊಸ ನಿಯಮ ಜಾರಿಯಾದಾಗ ಪ್ರತಿರೋಧ ಎದುರಾದರೂ, ಶೇ 95 ರಷ್ಟು ಪ್ರಯಾಣಿಕರಿಗೆ ಈ ನಿಯಮ ಅನುಕೂಲಕರವಾಗಿದೆ. ಅಂಗವಿಕಲರು, ಮಕ್ಕಳು, ಹಿರಿಯ ನಾಗರಿಕರ ಸಹಿತ ನಡಿಗೆಗೆ ಕಷ್ಟವಾಗುವ ಪ್ರಯಾಣಿಕರಿಗೆ ಶಟಲ್ ಸೇವೆಗಳನ್ನು ಒದಗಿಸಲಾಗುತ್ತಿದೆ ಎಂದು ತಿಳಿಸಿದೆ.
ಕೆಲವು ಅನಧಿಕೃತ ಟ್ಯಾಕ್ಸಿ ಚಾಲಕರು ವಿಮಾನ ನಿಲ್ದಾಣದಿಂದ ಪ್ರಯಾಣಿಕರನ್ನು ಹತ್ತಿಸಿಕೊಂಡ ಬಳಿಕ, ಮಾರ್ಗಮಧ್ಯದಲ್ಲಿ ನಿಗದಿಪಡಿಸಿದಕ್ಕಿಂತ ಹೆಚ್ಚು ಹಣಕ್ಕೆ ಒತ್ತಾಯಿಸುತ್ತಿರುವುದು, ಒಪ್ಪದಿದ್ದರೆ ಮಾರ್ಗಮಧ್ಯೆ ಇಳಿಸಿರುವ ಕುರಿತು ಮಹಿಳಾ ಪ್ರಯಾಣಿಕರು ದೂರಿದ್ದಾರೆ. ಸಮಸ್ಯೆ ಎದುರಿಸುವ ಬದಲು, ನಿಗದಿತ ಸ್ಥಳದಿಂದಲೇ ಅಧಿಕೃತ ಟ್ಯಾಕ್ಸಿ ಸೇವೆ ಪಡೆಯಿರಿ ಎಂದು ಬಿಐಎಎಲ್ ವಕ್ತಾರರು ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.