ADVERTISEMENT

ಜೂನ್ 6ಕ್ಕೆ ಬಿಐಸಿಯಲ್ಲಿ ‘ದೊಡ್ಡಾಟ’

​ಪ್ರಜಾವಾಣಿ ವಾರ್ತೆ
Published 4 ಜೂನ್ 2025, 14:53 IST
Last Updated 4 ಜೂನ್ 2025, 14:53 IST
ದೊಡ್ಡಾಟ( ಸಾಂದರ್ಭಿಕ ಚಿತ್ರ)
ದೊಡ್ಡಾಟ( ಸಾಂದರ್ಭಿಕ ಚಿತ್ರ)   

ಬೆಂಗಳೂರು: ದೊಮ್ಮಲೂರಿನಲ್ಲಿರುವ ಬೆಂಗಳೂರು ಅಂತರರಾಷ್ಟ್ರೀಯ ಕೇಂದ್ರವು (ಬಿಐಸಿ) ಶುಕ್ರವಾರ (ಜೂನ್ 6) ಸಂಜೆ 6.30ಕ್ಕೆ ‘ದೊಡ್ಡಾಟ’ ಹಮ್ಮಿಕೊಂಡಿದೆ. 

ಹುಬ್ಬಳ್ಳಿಯ ಜಿಕೆ ಕಲಾ ವೇದಿಕೆಯು ಬಿಐಸಿ ಕೇಂದ್ರದಲ್ಲಿ ದೊಡ್ಡಾಟ ಪ್ರಸ್ತುತಪಡಿಸಲಿದೆ. ದೊಡ್ಡಾಟವು ಶ್ರೀಮಂತ ಶಬ್ದ ಸಂಪತ್ತು, ಕಾವ್ಯ ಲಹರಿ ಹಾಗೂ ಕನ್ನಡ ಸಂಸ್ಕೃತಿಯ ತಿರುಳನ್ನು ಒಳಗೊಂಡ ಗ್ರಾಮೀಣ ಪ್ರದೇಶದ ಕಲೆ. ಬಯಲಾಟದ ಪ್ರಕಾರವಾಗಿರುವ ಇದು, ಉತ್ತರ ಕರ್ನಾಟಕದಲ್ಲಿ ಜನಪ್ರಿಯವಾಗಿದೆ. ರಂಗಪೂಜೆ, ಚಂಡೆ–ಮದ್ದಳೆಯಂತಹ ಸಾಂಪ್ರದಾಯಿಕ ವಾದನ, ವಿಶಿಷ್ಟ ವೇಷಭೂಷಣ ಸೇರಿ ಹಲವು ವೈಶಿಷ್ಟ್ಯಗಳನ್ನು ಈ ಕಲೆ ಒಳಗೊಂಡಿದೆ.

ದೊಡ್ಡಾಟವು ಆಧುನೀಕರಣದ ಸವಾಲುಗಳನ್ನು ಎದುರಿಸುತ್ತಿದೆ. ಈ ಅಪರೂಪದ ಕಲಾ ಪ್ರಕಾರವನ್ನು ಉಳಿಸಿಕೊಳ್ಳುವುದು, ಪುನರುಜ್ಜೀವನಗೊಳಿಸುವುದು ಅಗತ್ಯವಾಗಿದೆ. ಕಲಾ ಪ್ರೇಮಿಗಳು, ವಿದ್ಯಾರ್ಥಿಗಳು, ನಾಡಿನ ಶ್ರೀಮಂತ ಸಂಪ್ರದಾಯದ ಬಗ್ಗೆ ಕುತೂಹಲ ಹೊಂದಿರುವವರು ದೊಡ್ಡಾಟದ ಪರಂಪರೆಯನ್ನು ಮುಖಾಮುಖಿಯಾಗಿಸಿಕೊಳ್ಳುವ ಅವಕಾಶವನ್ನು ಒದಗಿಸಲಿದೆ. 

ADVERTISEMENT

ಇದು ‘ಬಿಐಸಿ ಜಾನಪದ’ ಸರಣಿಯ ಮೂರನೇ ಕಾರ್ಯಕ್ರಮವಾಗಿದ್ದು, ‘ತ್ವರಿತ ಆರ್ಟ್ಸ್ ಕಲೆಕ್ಟಿವ್ ಇಂಡಿಯಾ’ದ ಸಹಯೋಗವಿದೆ. ಪ್ರವೇಶ ಉಚಿತ. ಮೊದಲು ಬಂದವರಿಗೆ ಆಸನಗಳು ಲಭ್ಯ ಎಂದು ಪ್ರಕಟಣೆ ತಿಳಿಸಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.