ADVERTISEMENT

ಬೆಂಗಳೂರು: ಬಿಐಇಟಿಸಿ 2ನೇ ಕಟ್ಟಡ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2024, 18:19 IST
Last Updated 23 ಆಗಸ್ಟ್ 2024, 18:19 IST
   

ಬೆಂಗಳೂರು: ದೇವನಹಳ್ಳಿಯಲ್ಲಿರುವ ಬೋಯಿಂಗ್‌ ಇಂಡಿಯಾ ಎಂಜಿನಿಯರಿಂಗ್‌ ಆ್ಯಂಡ್‌ ಟೆಕ್ನಾಲಜಿ ಸೆಂಟರ್‌ (ಬಿಐಇಟಿಸಿ) ಆವರಣದಲ್ಲಿ ಎರಡನೇ ಕಟ್ಟಡ ಉದ್ಘಾಟನೆಗೊಂಡಿತು.

ಬಿ2 ವಿಭಾಗದಲ್ಲಿ ಬೋಯಿಂಗ್‌ನ ಸಂಶೋಧನೆ ಮತ್ತು ತಂತ್ರಜ್ಞಾನ, ಬೋಯಿಂಗ್‌ ಪರೀಕ್ಷೆ ಮತ್ತು‌ ವಿಶ್ಲೇಷಣಾ ಪ್ರಯೋಗಾಲಯಗಳು, ಸಂಯುಕ್ತ ಕೆಲಸದ ಸ್ಥಳಗಳು, ವೈದ್ಯಕೀಯ ಕೇಂದ್ರ ಮತ್ತು ಶಿಶುಪಾಲನಾ ಸೌಲಭ್ಯ ಸಹಿತ ವಿವಿಧ ವ್ಯವಸ್ಥೆಗಳಿರಲಿವೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಕಳೆದ ಜನವರಿಯಲ್ಲಿ 43 ಎಕರೆ ಪ್ರದೇಶದಲ್ಲಿ ಅತ್ಯಾಧುನಿಕ ಬಿಐಇಟಿಸಿ ನಿರ್ಮಾಣಕ್ಕೆ ಚಾಲನೆ ನೀಡಿದ್ದರು. ₹ 1,600 ಕೋಟಿ ಹೂಡಿಕೆಯೊಂದಿಗೆ ಇದನ್ನು ನಿರ್ಮಿಸಲಾಗಿದ್ದು, ಅಮೆರಿಕದಿಂದಾಚೆಗೆ ಬೋಯಿಂಗ್‌ ಮಾಡಿರುವ ಅತಿದೊಡ್ಡ ಹೂಡಿಕೆ ಇದಾಗಿದೆ.

ADVERTISEMENT

ಇಲ್ಲಿ ಬೋಯಿಂಗ್‌ ಇಂಡಿಯಾದ ಎಂಜಿನಿಯರಿಂಗ್‌ ಮತ್ತು ತಂತ್ರಜ್ಞಾನ ಸಿಬ್ಬಂದಿ ಕಾರ್ಯ ನಿರ್ವಹಿಸಲಿದ್ದಾರೆ. ಇದರ ಮೂಲಕ ಬೋಯಿಂಗ್‌ ಭಾರತ ಮತ್ತು ವಿಶ್ವದ ವಿವಿಧ ರಾಷ್ಟ್ರಗಳ ರಕ್ಷಣಾ ವಲಯ ಮತ್ತು ಆಧುನಿಕ ಏರೋಸ್ಪೇಸ್‌ ಕ್ಷೇತ್ರಕ್ಕೆ ಸಂಬಂಧಿಸಿದಂತೆ ತನ್ನ ಎಂಜಿನಿಯರಿಂಗ್‌ ಮತ್ತು ತಂತ್ರಜ್ಞಾನ ಸೌಲಭ್ಯವನ್ನು ವೃದ್ಧಿಸಿಕೊಳ್ಳಲಿದೆ.

ಬೋಯಿಂಗ್‌ ಇಂಡಿಯಾ ಎಂಜಿನಿಯರಿಂಗ್‌ ಆ್ಯಂಡ್‌ ಟೆಕ್ನಾಲಜಿ ಸೆಂಟರ್‌ (ಬಿಐಇಟಿಸಿ) ಆವರಣದಲ್ಲಿ ಎರಡನೇ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಬೋಯಿಂಗ್‌ ಇಂಡಿಯಾ ಮತ್ತು ಸೌತ್‌ ಏಷ್ಯಾದ ಕಾರ್ಯನಿರ್ವಾಹಕ ನಿರ್ದೇಶಕ ಅಜಯ್‌ ಶರ್ಮ, ಬಿಐಇಟಿಸಿ ವ್ಯವಸ್ಥಾಪಕ ನಿರ್ದೇಶಕ ಅಹ್ಮದ್‌ ಎಲ್ಷರ್ಬಿನಿ, ಮುಖ್ಯ ಎಂಜಿನಿಯರ್‌ ಮತ್ತು ತಂಡದ ಸದಸ್ಯರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.