ADVERTISEMENT

ಎಎಪಿ: ನಾಳೆ ‘ಬೈಕ್ ತಳ್ಳು’ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2020, 19:55 IST
Last Updated 21 ಡಿಸೆಂಬರ್ 2020, 19:55 IST
   

ಬೆಂಗಳೂರು: ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆ ಇಳಿಸುವಂತೆ ಆಗ್ರಹಿಸಿ ಆಮ್‌ ಆದ್ಮಿ ಪಕ್ಷವು (ಎಎಪಿ) ಡಿ.23ರಂದು ಬೆಳಿಗ್ಗೆ 11 ಗಂಟೆಗೆ ಮೈಸೂರು ಬ್ಯಾಂಕ್ ವೃತ್ತದಿಂದ ಮೌರ್ಯ ವೃತ್ತದವರೆಗೆ‘ಬೈಕ್ ತಳ್ಳು’ ಪ್ರತಿಭಟನೆ ಹಮ್ಮಿಕೊಂಡಿದೆ.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಎಪಿ ಮುಖ್ಯ ವಕ್ತಾರ ಶರತ್ ಖಾದ್ರಿ, ಅಂತರರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲದ ಬೆಲೆ ಕಡಿಮೆ ಆಗಿದೆ. ಪೆಟ್ರೋಲ್, ಡೀಸೆಲ್‌ನ ಮೂಲ ಬೆಲೆಗಿಂತ ಮುಕ್ಕಾಲು ಪಾಲು ತೆರಿಗೆ ಕಟ್ಟಲಾಗುತ್ತಿದೆ. ಪೆಟ್ರೋಲ್‌ಗೆಂದು ಒಬ್ಬ ವ್ಯಕ್ತಿ ಮಾಸಿಕ ಐದು ಸಾವಿರವರೆಗೆ ಹಣ ವ್ಯಯಿಸುತ್ತಿದ್ದಾನೆ’ ಎಂದು ದೂರಿದರು.

‘ಇಂತಹಸಂಕಷ್ಟದಸಮಯದಲ್ಲಿರಾಜ್ಯಸರ್ಕಾರವಾದರೂಜನರನೆರವಿಗೆನಿಲ್ಲಬೇಕು. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರುರಾಜ್ಯದಪಾಲಿನತೆರಿಗೆಯನ್ನು ಕೂಡಲೇ ಕಡಿಮೆಮಾಡಬೇಕು. ಇಲ್ಲದಿದ್ದರೆ ಪ್ರತಿಭಟನೆಹಮ್ಮಿಕೊಳ್ಳಲಾಗುವುದು’ ಎಂದು ಎಚ್ಚರಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.