ADVERTISEMENT

ಬೆಂಗಳೂರು| ವಿದ್ಯಾರ್ಥಿನಿಯೊಂದಿಗೆ ಅಸಭ್ಯ ವರ್ತನೆ: ಬೈಕ್ ಟ್ಯಾಕ್ಸಿ ಸವಾರನ ಬಂಧನ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2025, 15:34 IST
Last Updated 8 ನವೆಂಬರ್ 2025, 15:34 IST
ಲೋಕೇಶ್‌ 
ಲೋಕೇಶ್‌    

ಬೆಂಗಳೂರು: ಹೊರ ರಾಜ್ಯದ ವಿದ್ಯಾರ್ಥಿನಿಗೆ ಡ್ರಾಪ್ ಕೊಡುವ ಸಂದರ್ಭದಲ್ಲಿ ಅಸಭ್ಯವಾಗಿ ವರ್ತಿಸಿದ್ದ ಬೈಕ್ ಟ್ಯಾಕ್ಸಿ ಸವಾರನನ್ನು ವಿಲ್ಸನ್‌ ಗಾರ್ಡನ್‌ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಉಲ್ಲಾಳದ ಮುನಿಯಪ್ಪ ಲೇಔಟ್‌ನ ನಿವಾಸಿ ಲೋಕೇಶ್ (28) ಬಂಧಿತ ಆರೋಪಿ.

‘ನ.6ರಂದು ಘಟನೆ ನಡೆದಿತ್ತು. ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

ADVERTISEMENT

ಸುಧಾಮನಗರದ ಪಿ.ಜಿಯೊಂದರಲ್ಲಿ ನೆಲಸಿದ್ದ ವಿದ್ಯಾರ್ಥಿನಿ ಚರ್ಚ್‌ ಸ್ಟ್ರೀಟ್‌ನಲ್ಲಿರುವ ಸ್ನೇಹಿತೆ ನೋಡಲು ಹೋಗಿದ್ದರು. ವಾಪಸ್ ಪಿ.ಜಿಗೆ ಬರಲು ಬೈಕ್ ಟ್ಯಾಕ್ಸಿ ಬುಕ್ ಮಾಡಿದ್ದರು. ಟ್ಯಾಕ್ಸಿ ಸವಾರ ಮಾರ್ಗಮಧ್ಯೆ ವಿದ್ಯಾರ್ಥಿನಿಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದ. ಪ್ರಶ್ನಿಸಿದಾಗ ಆಕೆಯ ಮೈಮುಟ್ಟಿ ಕಿರುಕುಳ ನೀಡಿದ್ದ. ವಿದ್ಯಾರ್ಥಿನಿ ಪಿ.ಜಿ ತಲುಪಿದ ಮೇಲೆ ಸ್ಥಳದಲ್ಲಿದ್ದ ಸಂತ್ರಸ್ತೆಯ ಸ್ನೇಹಿತ ಟ್ಯಾಕ್ಸಿ ಸವಾರನನ್ನು ತರಾಟೆಗೆ ತೆಗೆದುಕೊಂಡಿದ್ದರು. ಆರೋಪಿ ಕ್ಷಮೆ ಕೇಳಿ ಸ್ಥಳದಿಂದ ಹೋಗಿದ್ದ. ಘಟನೆ ವಿಡಿಯೊ ಮಾಡಿಕೊಂಡಿದ್ದ ವಿದ್ಯಾರ್ಥಿನಿ ವಿಲ್ಸನ್‌ಗಾರ್ಡ್‌ನ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.