ADVERTISEMENT

ರಾಜ್ಯದಲ್ಲಿ ದ್ವಿಭಾಷಾ ನೀತಿ ಜಾರಿಗೊಳಿಸಿ: ಮಹೇಶ ಜೋಶಿ

​ಪ್ರಜಾವಾಣಿ ವಾರ್ತೆ
Published 4 ಜುಲೈ 2025, 16:05 IST
Last Updated 4 ಜುಲೈ 2025, 16:05 IST
ಮಹೇಶ ಜೋಶಿ
ಮಹೇಶ ಜೋಶಿ   

ಬೆಂಗಳೂರು: ‘ಶಿಕ್ಷಣ ವ್ಯವಸ್ಥೆಯಲ್ಲಿ ಕನ್ನಡ ಉಳಿಸಲು ದ್ವಿಭಾಷಾ ನೀತಿಯೊಂದೇ ದಾರಿ. ರಾಜ್ಯ ಸರ್ಕಾರ ಕೂಡಲೇ ಈ ನೀತಿಯನ್ನು ಜಾರಿಗೊಳಿಸಬೇಕು’ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ ಜೋಶಿ ಆಗ್ರಹಿಸಿದ್ದಾರೆ.

‘1968ರಲ್ಲಿ ಜಾರಿಗೆ ಬಂದ ತ್ರಿಭಾಷಾ ನೀತಿ ಪ್ರಕಾರ ದಕ್ಷಿಣ ಭಾರತದ ಮಕ್ಕಳು ಹಿಂದಿ ಕಲಿತರೆ, ಉತ್ತರ ಭಾರತ ಮಕ್ಕಳು ದಕ್ಷಿಣ ಭಾರತದ ಯಾವುದಾದರೂ ಒಂದು ಭಾಷೆಯನ್ನು ಕಲಿಯಬೇಕಿತ್ತು. ತಮಿಳುನಾಡನ್ನು ಹೊರತುಪಡಿಸಿ ದಕ್ಷಿಣ ಭಾರತ ರಾಜ್ಯಗಳು ತ್ರಿಭಾಷಾ ನೀತಿಯನ್ನು ಕಟ್ಟು ನಿಟ್ಟಾಗಿ ಜಾರಿಗೆ ತಂದಿವೆ. ಆದರೆ, ಉತ್ತರ ಭಾರತದ ಯಾವ ರಾಜ್ಯದಲ್ಲಿಯೂ ದಕ್ಷಿಣ ಭಾರತದ ಭಾಷಾ ಕಲಿಕೆ ನಡೆಯಲೇ ಇಲ್ಲ. ಯುನೆಸ್ಕೂ ವರದಿಯಂತೆ ಭಾರತದ 344 ಭಾಷೆ ಅಳಿವಿನ ಅಂಚಿನಲ್ಲಿವೆ. ಇವುಗಳ ಉಳಿವಿಗಾಗಿ ದ್ವಿಭಾಷಾ ನೀತಿ ಸಹಾಯಕವಾಗಿದೆ ಎಂದು ತಿಳಿಸಿದರು. 

‘ಇಂದು ಇಂಗ್ಲಿಷ್ ಕಲಿಕೆ ಅಗತ್ಯ. ದೀಪಾ ಭಾಸ್ತಿ ಅವರ ಇಂಗ್ಲಿಷ್ ಅನುವಾದದ ಮೂಲಕವೇ ಬಾನು ಮುಷ್ತಾಕ್ ಅವರಿಗೆ ‘ಅಂತರರಾಷ್ಟ್ರೀಯ ಬುಕರ್ ಪುರಸ್ಕಾರ’ ಲಭಿಸುವಂತಾಯಿತು. ಕಲಿಕೆಯ ಇನ್ನೊಂದು ಭಾಷೆ ತಾಯ್ನುಡಿಯೇ ಆಗಬೇಕು. ಕನ್ನಡ ಮತ್ತು ಇಂಗ್ಲಿಷ್ ಒಳಗೊಂಡ ದ್ವಿಭಾಷಾ ನೀತಿ ಜಾರಿ ಮಾಡಿ, ಕನ್ನಡ ಭಾಷೆಯ ಉಳಿವಿಗೆ ಶ್ರಮಿಸಬೇಕು’ ಎಂದು ಆಗ್ರಹಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.