ADVERTISEMENT

ಬನ್ನೇರುಘಟ್ಟದಲ್ಲಿ ನೀರಾನೆಗೆ ಹುಟ್ಟುಹಬ್ಬ

​ಪ್ರಜಾವಾಣಿ ವಾರ್ತೆ
Published 27 ಜುಲೈ 2021, 19:51 IST
Last Updated 27 ಜುಲೈ 2021, 19:51 IST
ಬನ್ನೇರುಘಟ್ಟ ಉದ್ಯಾನದಲ್ಲಿ ಹಿಪ್ಪೋಪೊಟಮಸ್ ಮರಿಯ ಹುಟ್ಟುಹಬ್ಬದ ಅಂಗವಾಗಿ ವಿಶೇಷ ಆಹಾರ ನೀಡಲಾಯಿತು
ಬನ್ನೇರುಘಟ್ಟ ಉದ್ಯಾನದಲ್ಲಿ ಹಿಪ್ಪೋಪೊಟಮಸ್ ಮರಿಯ ಹುಟ್ಟುಹಬ್ಬದ ಅಂಗವಾಗಿ ವಿಶೇಷ ಆಹಾರ ನೀಡಲಾಯಿತು   

ಆನೇಕಲ್: ಮನೆಗಳಲ್ಲಿ ಮಕ್ಕಳಿಗೆ ಹುಟ್ಟುಹಬ್ಬ ಆಚರಿಸುವುದು ಸಾಮಾನ್ಯ. ಆದರೆ, ಪ್ರಾಣಿಗಳ ಹುಟ್ಟುಹಬ್ಬ ಅಪರೂಪ.

ಈ ದಿಸೆಯಲ್ಲಿ ಬನ್ನೇರುಘಟ್ಟ ಜೈವಿಕ ಉದ್ಯಾನದ ಹಿಪ್ಪೋಪೊಟಮಸ್‌(ನೀರಾನೆ) ನಾಗ ಮತ್ತು ದಶ್ಯಾಳಿಗೆ ಜನಿಸಿದ ಮರಿಗೆ ಸನ್ನಿ ಎಂದು ನಾಮಕರಣ ಮಾಡಿ ಹುಟ್ಟುಹಬ್ಬ ಆಚರಿಸಿದ್ದು ವಿಶೇಷವಾಗಿದೆ.

ಹುಟ್ಟುಹಬ್ಬದ ಪ್ರಯುಕ್ತ ಮರಿಯನ್ನು ದತ್ತು ತೆಗೆದುಕೊಂಡಿದ್ದ ನಿಖಿಲ್‌ ಗುಪ್ತಾ ಮತ್ತು ನೇಹ ಅಗರ್‌ವಾಲ್‌ ಅವರು ಹಿಪ್ಪೋಪೊಟಮಸ್‌ಗಳಿಗೆ ವಿಶೇಷ ಆಹಾರ ನೀಡಿ ಹುಟ್ಟುಹಬ್ಬದ ಸಂಭ್ರಮಕ್ಕೆ ಮೆರುಗು ನೀಡಿದರು.

ADVERTISEMENT

ಹಿಪ್ಪೋಪೊಟಮಸ್‌ ಪಾಲಕರಾದ ತಿಮ್ಮರಾಜು ಮತ್ತು ವೆಂಕಟೇಶ್‌ಗೆ ಪ್ರಶಂಸಾಪತ್ರ ನೀಡಿ ಗೌರವಿಸಲಾಯಿತು. ಉದ್ಯಾನದ ಕಾರ್ಯನಿರ್ವಾಹಕ ನಿರ್ದೇಶಕಿ ವನಶ್ರೀ ವಿಪಿನ್‌ಸಿಂಗ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.