ADVERTISEMENT

ಬೆಂಗಳೂರು | ಬಿಜೆಪಿ ಸಮಾವೇಶ: ವಾಹನ ಸಂಚಾರಕ್ಕೆ ಬದಲಿ ಮಾರ್ಗ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2024, 15:23 IST
Last Updated 19 ಏಪ್ರಿಲ್ 2024, 15:23 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಬೆಂಗಳೂರು: ನಗರದ ಅರಮನೆ ಮೈದಾನದಲ್ಲಿ ಶನಿವಾರ ನಡೆಯಲಿರುವ ಬಿಜೆಪಿ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪಾಲ್ಗೊಳ್ಳುತ್ತಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಪಾಲ್ಗೊಳ್ಳುವ ನಿರೀಕ್ಷೆಯಿದೆ.

ಈ ಹಿನ್ನೆಲೆಯಲ್ಲಿ ಮೈದಾನದ ಸುತ್ತಮುತ್ತಲ ರಸ್ತೆಗಳಲ್ಲಿ ಅಂದು ಮಧ್ಯಾಹ್ನ 1 ರಿಂದ ರಾತ್ರಿ 7 ಗಂಟೆವರೆಗೆ ವಾಹನ ನಿಲುಗಡೆ ನಿರ್ಬಂಧಿಸಲಾಗಿದೆ. ಅಲ್ಲದೇ ವಾಹನ ಸಂಚಾರಕ್ಕೆ ಪರ್ಯಾಯ ಮಾರ್ಗ ಕಲ್ಪಿಸಲಾಗಿದೆ.

ADVERTISEMENT

ಪ್ಯಾಲೇಸ್‌ ರಸ್ತೆ, ಎಂ.ವಿ.ಜಯರಾಮ್‌ ರಸ್ತೆ, ವಸಂತನಗರ ರಸ್ತೆ, ಜಯಮಹಲ್‌ ರಸ್ತೆ, ಸಿ.ವಿ.ರಾಮನ್‌ ರಸ್ತೆ, ಬಳ್ಳಾರಿ ರಸ್ತೆ, ರಮಣಮಹರ್ಷಿ ರಸ್ತೆ, ನಂದಿದುರ್ಗ ರಸ್ತೆ, ತರಳಬಾಳು ರಸ್ತೆ, ಮೌಂಟ್ ಕಾರ್ಮೆಲ್‌ ಕಾಲೇಜು ರಸ್ತೆ, ಮೇಖ್ರಿ ವೃತ್ತದಿಂದ ಯಶವಂತಪುರದವರೆಗೆ ವಾಹನ ಸಂಚಾರ ನಿರ್ಬಂಧಿಸಲಾಗಿದ್ದು, ಪರ್ಯಾಯ ಮಾರ್ಗ ಬಳಸಲು ಸೂಚಿಸಲಾಗಿದೆ.

ಸರಕು ಸಾಗಣೆ ವಾಹನ ನಿಷೇಧ: ಮಧ್ಯಾಹ್ನ 12ರಿಂದ ರಾತ್ರಿ 9ರ ವರೆಗೆ ಸಿಎಂಟಿಐ ಜಂಕ್ಷನ್‌, ಮೈಸೂರು ಬ್ಯಾಂಕ್‌ ಜಂಕ್ಷನ್‌, ಹೆಬ್ಬಾಳ ಜಂಕ್ಷನ್‌, ನ್ಯೂ ಬಿಇಎಲ್‌ ಜಂಕ್ಷನ್‌, ಬಸವೇಶ್ವರ ಸರ್ಕಲ್‌, ಓಲ್ಡ್‌ ಉದಯ ಟಿವಿ ಜಂಕ್ಷನ್‌, ಹಜ್‌ ಕ್ಯಾಂಪ್‌ ನಂದಿದುರ್ಗ ರಸ್ತೆ, ಯಶವಂತಪುರ ಗೋವರ್ಧನ್‌ ಮೂಲಕ ಭಾರೀ ವಾಹನಗಳು ನಗರಕ್ಕೆ ಪ್ರವೇಶಿಸುವುದನ್ನು ನಿಷೇಧಿಸಲಾಗಿದೆ ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.