ADVERTISEMENT

ಅಂಜು ಬಾಬ್ಬಿ ಬಿಜೆಪಿ ಸೇರ್ಪಡೆ

​ಪ್ರಜಾವಾಣಿ ವಾರ್ತೆ
Published 6 ಜುಲೈ 2019, 19:44 IST
Last Updated 6 ಜುಲೈ 2019, 19:44 IST
ಬಿ.ಎಸ್‌.ಯಡಿಯೂರಪ್ಪ ಅವರಿಂದ ಅಂಜು ಬಿ.ಜಾರ್ಜ್‌ ಅವರು ಪಕ್ಷದ ಧ್ವಜ ಸ್ವೀಕರಿಸಿದರು –ಪ್ರಜಾವಾಣಿ ಚಿತ್ರ
ಬಿ.ಎಸ್‌.ಯಡಿಯೂರಪ್ಪ ಅವರಿಂದ ಅಂಜು ಬಿ.ಜಾರ್ಜ್‌ ಅವರು ಪಕ್ಷದ ಧ್ವಜ ಸ್ವೀಕರಿಸಿದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಅಥ್ಲೀಟ್‌ ಅಂಜುಬಾಬ್ಬಿ ಜಾರ್ಜ್,ಇನ್ಫೊಸಿಸ್‌ ಉಪಾಧ್ಯಕ್ಷಪಾರ್ಥಸಾರಥಿ ಸಹಿತ ಹಲವರು ಶನಿವಾರ ಬಿಜೆಪಿ ಸೇರುವ ಮೂಲಕ ಪಕ್ಷದ ಸದಸ್ಯತ್ವ ಅಭಿಯಾನಕ್ಕೆ ಬೆಂಬಲ ನೀಡಿದರು.

ಜಯನಗರ ವಾಣಿಜ್ಯ ಸಂಕೀರ್ಣದ ಬಳಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್ ಯಡಿಯೂರಪ್ಪ, ಕೇಂದ್ರ ವಿದೇಶಾಂಗ ಇಲಾಖೆ ರಾಜ್ಯ ಸಚಿವ ವಿ.ಮುರಳೀಧರನ್ ಭಾಗವಹಿಸಿದ್ದರು.ನಿವೃತ್ತ ಏರ್ ಮಾರ್ಷಲ್ ಮುರಳಿ ಅವರನ್ನು ಯಡಿಯೂರಪ್ಪ ಅವರು ಪಕ್ಷದ ಧ್ವಜ ನೀಡಿ ಬರಮಾಡಿಕೊಂಡರು. ಇತರರಿಗೂ ಅವರು ಧ್ವಜ ನೀಡಿ ಸ್ವಾಗತಿಸಿದರು.

ರಾಜ್ಯ ಸದಸ್ಯತ್ವ ಅಭಿಯಾನ ಉಸ್ತುವಾರಿ ಎನ್.ರವಿಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ಬಿಜೆಪಿಯ ಸದಸ್ಯತ್ವ 20 ಕೋಟಿ ದಾಟಲಿದೆ ಎಂದರು.

ADVERTISEMENT

ಆಟೊ ಚಾಲಕರು, ಪ್ರಥಮ ಬಾರಿ ಮತದಾರರಾದ ಯುವಕರು ಕೂಡ ಇದೇ ಸಂದರ್ಭದಲ್ಲಿ ಸದಸ್ಯತ್ವ ನೋಂದಾಯಿಸಿದರು.

ಸಂಸದ ಪಿ.ಸಿ.ಮೋಹನ್, ತೇಜಸ್ವಿ ಸೂರ್ಯ, ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ, ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಶಾಸಕ ರವಿಸುಬ್ರಹ್ಮಣ್ಯ, ಮುರುಗೇಶ್ ನಿರಾಣಿ ಸಹಿತ ಹಲವು ಮುಖಂಡರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.