ADVERTISEMENT

ಕಾಳಸಂತೆಯಲ್ಲಿ ರೈಲ್ವೆ ಟಿಕೆಟ್ ಮಾರಾಟ: ಆರು ಮಂದಿ ಸೆರೆ

​ಪ್ರಜಾವಾಣಿ ವಾರ್ತೆ
Published 14 ಜೂನ್ 2019, 20:17 IST
Last Updated 14 ಜೂನ್ 2019, 20:17 IST

ಬೆಂಗಳೂರು: ಮದುವೆ ಸಮಾರಂಭಗಳು ಹೆಚ್ಚು ಇದ್ದಾಗ ಮತ್ತು ಬೇಸಿಗೆ ರಜೆ ಕಾಲದಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಿದ್ದ ಸಂದರ್ಭವನ್ನು ದುರ್ಬಳಕೆ ಮಾಡಿಕೊಂಡು ರೈಲ್ವೆ ಟಿಕೆಟ್‌ ಮಾರಾಟಕ್ಕೆ ಕಾಳಸಂತೆ ಸೃಷ್ಟಿಸಿದ್ದ ಆರೋಪದಲ್ಲಿ ರಾಜ್ಯದ ವಿವಿಧೆಡೆ ಆರು ಮಂದಿಯನ್ನುರೈಲ್ವೆ ಪೊಲೀಸರು ಬಂಧಿಸಿದ್ದಾರೆ.

ದೇಶದಾದ್ಯಂತ ರೈಲ್ವೆ ಇಲಾಖೆ ಆರಂಭಿಸಿದ್ದ ‘ಆಪರೇಷನ್ ಥಂಡರ್‌’ ಕಾರ್ಯಕ್ರಮದ ಅಡಿಯಲ್ಲಿ ರಾಜ್ಯದಲ್ಲೂ ಕಾರ್ಯಾಚರಣೆ ನಡೆಸಿದ ರೈಲ್ವೆ ಅಧಿಕಾರಿಗಳು,₹4.39 ಲಕ್ಷ ಮೌಲ್ಯದ ಟಿಕೆಟ್‌ ವಶಕ್ಕೆ ಪಡೆದಿದ್ದಾರೆ. ಬೆಂಗಳೂರಿನ ರಾಮಕೃಷ್ಣ ಟೂರ್ಸ್‌ ಆ್ಯಂಡ್ ಟ್ರಾವೆಲ್ಸ್,ಮನು ಟೂರ್ಸ್‌ ಆ್ಯಂಡ್ ಟ್ರಾವೆಲ್ಸ್, ಮೈಸೂರು ಜಿಲ್ಲೆ ಪಿರಿಯಾಪಟ್ಟಣದ ಅಂಬಿಕಾ ಎಲೆಕ್ಟ್ರಿಕಲ್ ಆ್ಯಂಡ್ ಹಾರ್ಡ್‌ವೇರ್ ಶಾಪ್, ಬೆಳಗಾವಿಯ ಮೀನಾಕ್ಷಿ ಹೈವೆ ಇಂಟರ್‌ನೆಟ್‌ನ ಮಾಲೀಕರನ್ನು ಬಂಧಿಸಲಾಗಿದೆ.ಕಂಪ್ಯೂಟರ್, ಮೊಬೈಲ್, ಇ–ಟಿಕೆಟ್‌ಗಳು ಮತ್ತು ನಗದನ್ನು ವಶಕ್ಕೆ ಪಡೆಯಲಾಗಿದೆ ಎಂದು ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ. ಯಶವಂತಪುರ ಮತ್ತು ಹಾವೇರಿ ನಿಲ್ದಾಣಗಳಲ್ಲಿನ ಖಾಸಗಿ ಕೌಂಟರ್‌ನಇಬ್ಬರನ್ನು ಬಂಧಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT