ADVERTISEMENT

ಬಿಎಂಎಸ್ ಆಸ್ಪತ್ರೆ ಸಂಸ್ಥಾಪನಾ ದಿನ ಆಚರಣೆ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2022, 21:06 IST
Last Updated 3 ಮಾರ್ಚ್ 2022, 21:06 IST
ಬಿಎಂಎಸ್‌ ಆಸ್ಪತ್ರೆಯ ಹೊಸ ಬ್ಲಾಕ್‌ ಉದ್ಘಾಟನೆಯನ್ನು ರಾಗಿಣಿ ನಾರಾಯಣ್ ನೆರವೇರಿಸಿದರು. ಬಿಎಂಎಸ್ ಆಸ್ಪತ್ರೆ ಟ್ರಸ್ಟ್ ಅಧ್ಯಕ್ಷ ಗೌತಮ್ ವಿ.ಕಲತೂರ್, ಟ್ರಸ್ಟಿ ಅವಿರಾಮ್ ಶರ್ಮಾ, ಡಾ‌.ವಿಶಾಲ್, ಸುನಿತಾ ಪ್ರಸಾದ್ ಇದ್ದರು
ಬಿಎಂಎಸ್‌ ಆಸ್ಪತ್ರೆಯ ಹೊಸ ಬ್ಲಾಕ್‌ ಉದ್ಘಾಟನೆಯನ್ನು ರಾಗಿಣಿ ನಾರಾಯಣ್ ನೆರವೇರಿಸಿದರು. ಬಿಎಂಎಸ್ ಆಸ್ಪತ್ರೆ ಟ್ರಸ್ಟ್ ಅಧ್ಯಕ್ಷ ಗೌತಮ್ ವಿ.ಕಲತೂರ್, ಟ್ರಸ್ಟಿ ಅವಿರಾಮ್ ಶರ್ಮಾ, ಡಾ‌.ವಿಶಾಲ್, ಸುನಿತಾ ಪ್ರಸಾದ್ ಇದ್ದರು   

ಬೆಂಗಳೂರು: ಉತ್ತಮ ಆರೋಗ್ಯ ಸೇವೆ ಮತ್ತು ಗುಣಮಟ್ಟದ ಚಿಕಿತ್ಸೆಯು ಜನರ ಮಾನಸಿಕ ಚೈತನ್ಯ ಹೆಚ್ಚಿಸುತ್ತದೆ ಎಂದು ಬಿಎಂಎಸ್ ಆಸ್ಪತ್ರೆಯ ಟ್ರಸ್ಟಿ ಡಾ.ರಾಗಿಣಿ ನಾರಾಯಣ್ ತಿಳಿಸಿದರು.

ಬಿಎಂಎಸ್ ಆಸ್ಪತ್ರೆ ಸಂಸ್ಥಾಪನಾ ದಿನಾಚರಣೆ ಹಾಗೂ ಹೊಸ ಬ್ಲಾಕ್ ಉದ್ಘಾಟಿಸಿ ಅವರು ಮಾತನಾಡಿದರು. ‘ನಾವು ಮಾಡುವ ಕಾರ್ಯಗಳಲ್ಲಿ ಪ್ರಾಮಾಣಿಕತೆ ‌ಮತ್ತು ಸಂತೃಪ್ತಿ ಇಟ್ಟುಕೊಂಡಾಗ ಆ ಸೇವೆಯ ಮೌಲ್ಯವರ್ದನೆ ಹೆಚ್ಚಾಗುತ್ತದೆ’ ಎಂದು ತಿಳಿಸಿದರು.

ಶಾಸಕ ಎಲ್‌.ಎ. ರವಿ ಸುಬ್ರಹ್ಮಣ್ಯ ಮಾತನಾಡಿ, ‘ಖಾಸಗಿ ಆಸ್ಪತ್ರೆಗಳು ಜನಸಾಮಾನ್ಯರಿಗೆ ಹಾಗೂ ಬಡವರಿಗೆ ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಸೇವೆ ನೀಡುವ ಮನೋಭಾವ ಬೆಳೆಸಿಕೊಳ್ಳಬೇಕು. ಬಿಎಂಎಸ್ ಆಸ್ಪತ್ರೆಯು ಸುತ್ತ ಮುತ್ತಲಿನ ಬಡವರಿಗೆ ರಿಯಾಯಿತಿ ನೀಡಿ ಸ್ಪಂದಿಸುತ್ತಿದೆ’ ಎಂದು ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.