ADVERTISEMENT

ಬಿಎಂಟಿಸಿ ಬಸ್‌ ಪ್ರಯಾಣಿಕನಿಗೆ ಗಾಯ

ಕಳಚಿ ಬಿದ್ದ ಹವಾನಿಯಂತ್ರಣ ಉಪಕರಣದ ಕವಚ

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2019, 19:37 IST
Last Updated 28 ಏಪ್ರಿಲ್ 2019, 19:37 IST
ಬಿಎಂಟಿಸಿ ಬಸ್ಸಿನಲ್ಲಿ ಕಳಚಿ ಬಿದ್ದಿದ್ದ ಎ.ಸಿ ಉಪಕರಣದ ಕವಚ (ಎಡಚಿತ್ರ) ಎ.ಸಿ. ಉಪಕರಣದ ಕವಚ ಅಳವಡಿಸಿದ್ದ ಜಾಗ
ಬಿಎಂಟಿಸಿ ಬಸ್ಸಿನಲ್ಲಿ ಕಳಚಿ ಬಿದ್ದಿದ್ದ ಎ.ಸಿ ಉಪಕರಣದ ಕವಚ (ಎಡಚಿತ್ರ) ಎ.ಸಿ. ಉಪಕರಣದ ಕವಚ ಅಳವಡಿಸಿದ್ದ ಜಾಗ   

ಬೆಂಗಳೂರು: ನಗರದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮೆಜೆಸ್ಟಿಕ್ ಬಸ್ ನಿಲ್ದಾಣಕ್ಕೆ ತೆರಳುತ್ತಿದ್ದ ಬಿಎಂಟಿಸಿ ಬಸ್ಸಿನ ಹವಾನಿಯಂತ್ರಣ (ಎ.ಸಿ) ಉಪಕರಣದ ಕವಚ ಕಳಚಿಬಿದ್ದು ಪ್ರಯಾಣಿಕರೊಬ್ಬರು ಗಾಯಗೊಂಡಿದ್ದಾರೆ.

ಘಟನೆ ಸಂಬಂಧ ಟ್ವೀಟ್ ಮಾಡಿರುವ ಸುಮಿತ್‌ ಎಂಬುವರು ಬಿಎಂಟಿಸಿ ಆಡಳಿತ ಮಂಡಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ನನ್ನ ಸಹೋದರಭಾನುವಾರ ವಿಮಾನ ನಿಲ್ದಾಣದಿಂದ ಮೆಜೆಸ್ಟಿಕ್ ನಿಲ್ದಾಣಕ್ಕೆ ಬಿಎಂಟಿಸಿಯ ಬಸ್ಸಿನಲ್ಲಿ (ಕೆಎ 57 ಎಫ್‌ 1357) ಪ್ರಯಾಣಿಸುತ್ತಿದ್ದರು. ಅವರು ಕುಳಿತಿದ್ದ ಆಸನದ ಮೇಲ್ಭಾಗದ ಎ.ಸಿ ಉಪಕರಣದ ಕವಚ ಏಕಾಏಕಿ ಕಳಚಿ ಬಿತ್ತು. ಅವರ ತಲೆಗೆ ಪೆಟ್ಟಾಗಿದ್ದು, ಬ್ಯಾಂಡೇಜ್‌ ಹಾಕಿಸಿಕೊಂಡಿದ್ದಾರೆ’ ಎಂದು ಸುಮಿತ್ ಹೇಳಿದ್ದಾರೆ.

ADVERTISEMENT

‘ಉಪಕರಣದ ಕವಚದ ಫೋಟೊವನ್ನು ಟ್ವೀಟ್‌ನೊಂದಿಗೆ ಲಗತ್ತಿಸಿದ್ದೇನೆ. ನಿರ್ವಹಣಾ ವಿಭಾಗದವರು ಈ ಬಗ್ಗೆ ಗಮನಹರಿಸಬೇಕು. ಬೇರೆ ಪ್ರಯಾಣಿಕರಿಗೆ ಈ ರೀತಿಯಾಗದಂತೆ ಹಿರಿಯ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು’ ಎಂದು ಅವರು ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.