ಬೆಂಗಳೂರು: ಯಲಹಂಕದಿಂದ ದೇವನಹಳ್ಳಿಗೆ ಹೊಸ ಮಾರ್ಗದಲ್ಲಿ ಮೂರು ಬಸ್‌ಗಳನ್ನು ಬಿಎಂಟಿಸಿ ಪರಿಚಯಿಸುತ್ತಿದೆ.
ಬಾಗಲೂರು, ಭಟ್ರಮಾರೇನಹಳ್ಳಿ, ಬೆಟ್ಟಕೋಟೆ, ಬೈಚಾಪುರ ಮಾರ್ಗವಾಗಿ ಸೆ. 16ರಿಂದ ಬಸ್‌ಗಳು ಸಂಚರಿಸಲಿವೆ. ದಿನಕ್ಕೆ ಯಲಹಂಕದಿಂದ ದೇವನಹಳ್ಳಿಗೆ 12 ಟ್ರಿಪ್ ಮತ್ತು ದೇವನಹಳ್ಳಿಯಿಂದ ಯಲಹಂಕಕ್ಕೆ 12 ಟ್ರಿಪ್ ಇರಲಿದೆ ಎಂದು ಬಿಎಂಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.
ಎಲೆಕ್ಟ್ರಾನಿಕ್ ಸಿಟಿಗೆ ಬಸ್: ಕೆಂಗೇರಿಯಿಂದ ಎಲೆಕ್ಟ್ರಾನಿಕ್ ಸಿಟಿಗೆ ಶ್ರೀನಿವಾಸಪುರ ಕ್ರಾಸ್, ಕರಿಯಣ್ಣನ ಪಾಳ್ಯ, ರಘುವನಹಳ್ಳಿ ಕ್ರಾಸ್, ಆವಲಹಳ್ಳಿ ಬಿಡಿಎ, ಅಂಜನಾಪುರ, ಬಸವನಪುರ ಗೇಟ್, ಬೆಟ್ಟದಾಸನಪುರ ಮಾರ್ಗವಾಗಿ ನಾಲ್ಕು ಬಸ್‌ಗಳು ದಿನಕ್ಕೆ 12 ಟ್ರಿಪ್ ನಡೆಸಲಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.