ADVERTISEMENT

‘ಯುವ ಜನರ ನೈಜ ಸಾಮರ್ಥ್ಯ ಬಳಕೆಗೆ ನೀತಿ’

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2022, 19:35 IST
Last Updated 11 ಏಪ್ರಿಲ್ 2022, 19:35 IST
ಅಸ್ಸಾಂನ ಗುವಾಹಟಿಯಲ್ಲಿ ನಡೆದ ‘ಮುಖ್ಯವಾಹಿನಿಯ ಯುವ ಕೇಂದ್ರಿತ ನೀತಿಗಳು’ ವಿಷಯದ ಬಗ್ಗೆ ಕರ್ನಾಟಕದ ಪ್ರತಿನಿಧಿಯಾಗಿ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿದರು.
ಅಸ್ಸಾಂನ ಗುವಾಹಟಿಯಲ್ಲಿ ನಡೆದ ‘ಮುಖ್ಯವಾಹಿನಿಯ ಯುವ ಕೇಂದ್ರಿತ ನೀತಿಗಳು’ ವಿಷಯದ ಬಗ್ಗೆ ಕರ್ನಾಟಕದ ಪ್ರತಿನಿಧಿಯಾಗಿ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿದರು.   

ಬೆಂಗಳೂರು: ಯುವ ಜನರ ಸಬಲೀಕರಣಕ್ಕಾಗಿ ಕೇಂದ್ರ ಯುವ ನೀತಿಯ ಮಾದರಿಯಲ್ಲೇ ಕರ್ನಾಟಕ ಸರ್ಕಾರ ಯುವಜನ ಕೇಂದ್ರಿತ ಹೊಸ ನೀತಿಯೊಂದನ್ನು ರೂಪಿಸಲು ಚಾಲನೆ ನೀಡಿದೆ ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು.

ಗುವಾಹಟಿಯಲ್ಲಿ 8ನೇ ಕಾಮನ್‌ವೆಲ್ತ್‌ ಸಂಸದೀಯ ಸಂಘ ಏರ್ಪಡಿಸಿರುವ ‘ಮುಖ್ಯವಾಹಿನಿಯ ಯುವ ಕೇಂದ್ರಿತ ನೀತಿಗಳು’ ವಿಷಯ ಕುರಿತ ಸಮ್ಮೇಳನದಲ್ಲಿ ಸೋಮವಾರ ಮಾತನಾ
ಡಿದ ಅವರು, ಕರ್ನಾಟಕದಲ್ಲಿ15 ರಿಂದ 29 ವರ್ಷದೊಳಗಿನ ವಯಸ್ಸಿನವರು ಶೇ 30ರಿಂದ 40ರಷ್ಟು ಇದ್ದಾರೆ ಎಂದರು.

ಯುವ ಜನರು ಎದುರಿಸುತ್ತಿರುವ ಅಡ್ಡಿ– ಆತಂಕಗಳು ಮತ್ತು ಸವಾಲುಗಳನ್ನು ಅರ್ಥ ಮಾಡಿಕೊಳ್ಳುವುದರ ಜತೆಗೆ ಅವರಿಗೆ ದೈಹಿಕ, ಮಾನಸಿಕ ಮತ್ತು ಆರ್ಥಿಕ ನೆರವು ನೀಡಬೇಕು ಹಾಗೂ ಅವರ ನೈಜ ಸಾಮರ್ಥ್ಯ ಪೂರ್ಣ ಪ್ರಮಾಣದಲ್ಲಿ ಬಳಕೆಯಾಗಲು ಅವಕಾಶ ನೀಡಬೇಕು. ಈ ಉದ್ದೇಶದಿಂದ ‘ಕರ್ನಾಟಕ ಯುವ ನೀತಿ 2022’ ಅನ್ನು ಆದಷ್ಟು ಶೀಘ್ರ ಬಿಡುಗಡೆಗೊಳಿಸಲಾಗುವುದು ಎಂದು ಕಾಗೇರಿ ಹೇಳಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.