ADVERTISEMENT

ರಾಜಭವನಕ್ಕೆ ಬಾಂಬ್ ಬೆದರಿಕೆ: ಹುಸಿ ಎಂದ ಪೊಲೀಸರು

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2023, 5:50 IST
Last Updated 12 ಡಿಸೆಂಬರ್ 2023, 5:50 IST
ರಾಜಭವನ-ಸಂಗ್ರಹ ಚಿತ್ರ
ರಾಜಭವನ-ಸಂಗ್ರಹ ಚಿತ್ರ   

ಬೆಂಗಳೂರು: ನಗರದ ರಾಜಭವನದಲ್ಲಿ ಬಾಂಬ್ ಇರಿಸಿರುವುದಾಗಿ ಬೆದರಿಕೆ ಬಂದಿದ್ದು, ಶೋಧ ನಡೆಸಿದ ಪೊಲೀಸರು ಇದೊಂದು‌ ಹುಸಿ‌ ಕರೆ ಎಂದು ಹೇಳಿದ್ದಾರೆ.

ದೊಮ್ಮಲೂರಿನಲ್ಲಿರುವ ಎನ್ಐಎ ನಿಯಂತ್ರಣ ‌ಕೊಠಡಿಗೆ ಸೋಮವಾರ ರಾತ್ರಿ 11.30ರ ಸುಮಾರಿಗೆ ಕರೆ‌ ಮಾಡಿದ್ದ ಅಪರಿಚಿತ, ರಾಜಭವನದಲ್ಲಿ ಬಾಂಬ್ ಇರಿಸಿರುವುದಾಗಿ ಬೆದರಿಸಿದ್ದ. ಮಾಹಿತಿ‌ ಗೊತ್ತಾಗುತ್ತಿದ್ದಂತೆ ಸ್ಥಳೀಯ ‌ಪೊಲೀಸರು ರಾಜಭವನಕ್ಕೆ ‌ಭೇಟಿ ನೀಡಿ ರಾತ್ರಿಯಿಡಿ ಶೋಧ ನಡೆಸಿದರು.

'ರಾಜಭವನದಲ್ಲಿ ಯಾವುದೇ ಅನುಮಾನಾಸ್ಪದ ವಸ್ತು ಪತ್ತೆಯಾಗಿಲ್ಲ. ಇದೊಂದು ಹುಸಿ ಬೆದರಿಕೆ ಎಂದು ಗೊತ್ತಾಗಿದೆ. ವಿಧಾನಸೌಧ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ‌. ಕರೆ ಮಾಡಿರುವವರು ಯಾರು ಎಂಬುದನ್ನು ಪತ್ತೆ ಮಾಡಲಾಗುತ್ತಿದೆ' ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

ADVERTISEMENT

ಕೆಲ‌ ದಿನಗಳ‌ ಹಿಂದೆಯಷ್ಟೇ ಶಾಲೆಗಳಿಗೆ ಬಾಂಬ್ ಬೆದರಿಕೆ ಇ-ಮೇಲ್‌ಗಳು ಬಂದಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.