
ಪ್ರಜಾವಾಣಿ ವಾರ್ತೆಸರ್ಕಾರಿ ಕಚೇರಿ
ಬೆಂಗಳೂರು: ಬೊಮ್ಮನಹಳ್ಳಿ ವಲಯ-2 ನಗರ ಯೋಜನೆ ವಿಭಾಗದ ಉಪ ನಿರ್ದೇಶಕರ ಕಚೇರಿಯನ್ನು ತಾತ್ಕಾಲಿಕವಾಗಿ ಎಚ್‌ಎಸ್‌ಆರ್ ಬಡಾವಣೆಯ ಬಿಡಿಎ ವಾಣಿಜ್ಯ ಸಂಕೀರ್ಣದ 2ನೇ ಮಹಡಿಗೆ ಸ್ಥಳಾಂತರಿಸಲಾಗಿದೆ.
ಬಿಟಿಎಂ ಲೇಔಟ್‌ನ ಆರ್‌ಟಿಒಕಚೇರಿ ಎದುರು ಇದ್ದ ಕಟ್ಟಡದಲ್ಲಿ ಇಲ್ಲಿಯವರೆಗೆ ಕಾರ್ಯನಿರ್ವಹಿಸುತ್ತಿತ್ತು. ಈ ಕಚೇರಿಯ ವ್ಯಾಪ್ತಿಗೆ ಬೊಮ್ಮನಹಳ್ಳಿ, ಬಿ.ಟಿ.ಎಂ ಲೇಔಟ್ ಮತ್ತು ಮಹದೇವಪುರ ವಿಧಾನಸಭಾದ ಭಾಗಶಃ ಪ್ರದೇಶ ಒಳಗೊಂಡಂತೆ 18 ವಾರ್ಡ್‌ಗಳು ಬರುತ್ತಿದ್ದು, ಸಾರ್ವಜನಿಕರ ಭೇಟಿಗೆ ಅನುವಾಗುವಂತೆ ಮೂರು ವಿಧಾನಸಭಾ ಕ್ಷೇತ್ರಗಳಿಗೆ ಸಮೀಪದಲ್ಲಿ ಇರುವಂತಹ ಕಟ್ಟಡಕ್ಕೆ ಕಚೇರಿ ಸ್ಥಳಾಂತರ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.