ADVERTISEMENT

‘ಮಂಪರು’ ಕೃತಿಗೆ ‘ಕಾದಂಬರಿ ಪುರಸ್ಕಾರ’

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2024, 16:32 IST
Last Updated 9 ಆಗಸ್ಟ್ 2024, 16:32 IST

ಬೆಂಗಳೂರು: ಬುಕ್‌ ಬ್ರಹ್ಮ ಸಂಸ್ಥೆ ನೀಡುವ 2024ನೇ ಸಾಲಿನ ‘ಸ್ವಾತಂತ್ರ್ಯೋತ್ಸವ ಕಾದಂಬರಿ ಪುರಸ್ಕಾರ’ಕ್ಕೆ ಚೀಮನಹಳ್ಳಿ ರಮೇಶಬಾಬು ಅವರ ‘ಮಂಪರು’ ಕೃತಿ ಆಯ್ಕೆಯಾಗಿದೆ. 

ಇಲ್ಲಿ ಶುಕ್ರವಾರ ನಡೆದ ‘ಬುಕ್ ಬ್ರಹ್ಮ ಸಾಹಿತ್ಯೋತ್ಸವ’ದಲ್ಲಿ ಪುರಸ್ಕಾರಕ್ಕೆ ಆಯ್ಕೆಯಾದವರ ಹೆಸರು ಘೋಷಿಸಲಾಯಿತು. ರಮೇಶಬಾಬು ಹಾಗೂ ಅನಿಮಾ ಪ್ರಕಾಶನದ ಪರವಾಗಿ ಭಾಗವಹಿಸಿದ್ದ ಲೇಖಕ ಕನಕಪ್ಪ ವಾಗನಗೇರಿ ಅವರಿಗೆ ತಮಿಳು ಸಾಹಿತಿ ಪೆರುಮಳ್ ಮುರುಗನ್ ಪುರಸ್ಕಾರ ಪ್ರದಾನ ಮಾಡಿದರು. ಈ ಪುರಸ್ಕಾರವು ₹ 1 ಲಕ್ಷ ನಗದು ಹಾಗೂ ಫಲಕ ಒಳಗೊಂಡಿದೆ. ಇದರಲ್ಲಿ ಲೇಖಕರಿಗೆ ₹ 75 ಸಾವಿರ ಹಾಗೂ ಪ್ರಕಾಶಕರಿಗೆ ₹ 25 ಸಾವಿರ ಸೇರಲಿದೆ. 

ಇದೇ ವೇಳೆ ಸಪ್ನ ಬುಕ್ ಹೌಸ್ ಪ್ರಕಟಿಸಿರುವ ಆರ್. ಸುನಂದಮ್ಮ ಅವರ ‘ಭರತಕಲ್ಪ’, ದೇಸಿ ಪ್ರಕಾಶನ ಪ್ರಕಟಿಸಿರುವ ಮೊಗಳ್ಳಿ ಗಣೇಶ್ ಅವರ ‘ಹೊಕ್ಕಳು’, ಅಂಕಿತ ಪುಸ್ತಕ ಪ್ರಕಟಿಸಿರುವ ಗಜಾನನ ಶರ್ಮ ಅವರ ‘ಪ್ರಮೇಯ’ ಹಾಗೂ ತಮಟೆ ಪ್ರಕಾಶನ ಪ್ರಕಟಿಸಿರುವ ಗಂಗಪ್ಪ ತಳವಾರ್ ಅವರ ‘ಧಾವತಿ’ ಕೃತಿಗಳಿಗೆ ಸಮಾಧಾನಕರ ಬಹುಮಾನ ನೀಡಿ ಗೌರವಿಸಲಾಯಿತು. ಈ ನಾಲ್ಕು ಕೃತಿಗಳಿಗೆ ತಲಾ ₹ 5 ಸಾವಿರ ನಗದು ಹಾಗೂ ಪ್ರಶಸ್ತಿ ಫಲಕವನ್ನು ನೀಡಲಾಯಿತು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.